SSLC Results: 6 ವಿದ್ಯಾರ್ಥಿಗಳು ರಾಜ್ಯಕ್ಕೇ ಟಾಪರ್ಸ್


ರಾಜ್ಯಾದ್ಯಾಂತ ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ.

ಈ ಬಾರಿ ರಾಜ್ಯದಲ್ಲಿ ಒಟ್ಟು 8.48 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 5,82,316 ಮಂದಿ ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಈ ಬಾರಿಯು ಕೂಡ ಶೇ.77.64 ಪಡೆದು ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 6 ಮಂದಿ 625 ಕ್ಕೆ 625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 2 ನೇ ಸ್ಥಾನವನ್ನು 12 ಮಂದಿ ಹಂಚಿಕೊಂಡರೆ, 3 ನೇ ಸ್ಥಾನ 43 ಮಂದಿ ಹಂಚಿಕೊಂಡಿದ್ದಾರೆ.

ಕೊರೊನಾ ಭಯದ ನಡುವೆಯೂ ನಡೆದ ಪರೀಕ್ಷೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಉತ್ತೀರ್ಣರಾದವರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 2019 ರಲ್ಲಿ 8,41,666 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರುಗಳ ಪೈಕಿ 8,25,468 ಉತ್ತೀರ್ಣ ಹೊಂದಿದ್ದರು. ಈ ಬಾರಿ ಶೇ.71.80 ರಷ್ಟು ಮಂದಿ ಪಾಸ್ ಆಗಿದ್ದಾರೆ ಕಳೆದ ಬಾರಿ ಶೇ.73. 7 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಶಿರಸಿಯ ಸನ್ನಿಧಿ, ಬೆಂಗಳೂರಿನ ಚಿರಾಯು,ನಿಖಿಲೇಶ್ ಮುರುಳಿ, ಮಂಡ್ಯದ ಧೀರಜ್ ರೆಡ್ಡಿ, ದಕ್ಷಿಣ ಕನ್ನಡದ ಅನುಶ್ ಹಾಗು ಚಿಕ್ಕಮಗಳೂರಿನ ತನ್ಮಯ್ 625 ಕ್ಕೆ 625 ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಾರ್ಚ್ 27ರಿಂದ ಏಪ್ರಿಲ್ 9 ರವರೆಗೆ ನಡೆಯಬೇಕಾಗಿದ್ದ ಪರೀಕ್ಷೆ ಕೋವಿಡ್ ನಿಂದಾಗಿ ಮುಂದೂಡಲಾಗಿತ್ತು. ಕೊರೋನಾದ ಭೀತಿಯ ನಡುವೆಯು ಜೂನ್ 25 ರಿಂದ ಜುಲೈ 4 ರ ವರೆಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ನಡೆಯಿತು.

Exit mobile version