ತ.ನಾಡು ಕಾರ್ಮಿಕರ ಮೇಲೆ ಹಲ್ಲೆ, ಬಿಜೆಪಿಯಿಂದ ನಕಲಿ ವಿಡಿಯೋ ಪ್ರಸಾರ: ಸ್ಟಾಲಿನ್‌ ಆರೋಪ

Chennai : ತಮಿಳುನಾಡಿನಲ್ಲಿ ಉತ್ತರ ಭಾರತದ ಕಾರ್ಮಿಕರ ಮೇಲೆ ಇತ್ತೀಚಿಗೆ ನಡೆದ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (stalin vs bjp),

ಉತ್ತರ ಭಾರತದ ಬಿಜೆಪಿ ನಾಯಕರು ದುರುದ್ದೇಶದಿಂದ ನಕಲಿ ವಿಡಿಯೋಗಳನ್ನು ಪ್ರಸಾರ ಮಾಡಿ ವದಂತಿಗಳನ್ನು ಹರಡುತ್ತಿದ್ದಾರೆ. ತಮಿಳುನಾಡಿನಲ್ಲಿ ವಿವಿಧ ರಾಜ್ಯಗಳ ಜನರು ಹಲವಾರು ವರ್ಷಗಳಿಂದ ವಾಸಿಸುತ್ತಿದ್ದು,

ಅವರು ಯಾವುದೇ ಕಷ್ಟಗಳನ್ನು ಎದುರಿಸಿಲ್ಲ ಎಂದು ಅವರು (stalin vs bjp) ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡಿಗೆ ಉದ್ಯೋಗ ಅರಸಿ ಅನೇಕ ಕೂಲಿಕಾರರು ಬಂದಿದ್ದು, ಎಲ್ಲಿಯೂ ಯಾವುದೇ ಬೆದರಿಕೆ ಇಲ್ಲ. ಉತ್ತರ ಭಾರತದ ಬಿಜೆಪಿ ಪದಾಧಿಕಾರಿಗಳು ದುರುದ್ದೇಶದಿಂದ ನಕಲಿ ವಿಡಿಯೋಗಳನ್ನು ಪ್ರಸಾರ ಮಾಡಿದ್ದಾರೆ.

ಬಿಜೆಪಿ ವಿರುದ್ಧ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವ ಅಗತ್ಯತೆಯ ಬಗ್ಗೆ ನಾನು ಮಾತನಾಡಿದ್ದೇನೆ. ಇದಾದ ಮರುದಿನವೇ ಇಂತಹ ವದಂತಿಗಳು ಹರಡಿವೆ. ಇದರ ಉದ್ದೇಶಗಳನ್ನು ನೀವು ಅರ್ಥಮಾಡಿಕೊಳ್ಳಬಹುದು.

ನಾನು ಬಿಹಾರ ಸಿಎಂ ನಿತೀಶ್ (Nitish) ಅವರಿಗೂ ಈ ಬಗ್ಗೆ ತಿಳಿಸಿದ್ದೇನೆ. ರಾಜ್ಯದಲ್ಲಿ ಇಂತಹ ಅಹಿತಕರ ಘಟನೆ ನಡೆದಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.

ಇದನ್ನು ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ರೆಡಿ ; ಭಿನ್ನಮತ ಶಮನ ಮಾಡಲು ಸಿದ್ದತೆ

ಈಶಾನ್ಯ ಭಾರತದ ಚುನಾವಣೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಟಾಲಿನ್, ಧ್ರುವೀಕರಣ, ಮಾಧ್ಯಮ ನಿರ್ವಹಣೆ ಮತ್ತು ಸಾಮಾಜಿಕ ಎಂಜಿನಿಯರಿಂಗ್‌ನಂತಹ ತಂತ್ರಗಳ ಮೂಲಕ ಬಿಜೆಪಿ ಈಶಾನ್ಯ ಭಾರತದಲ್ಲಿ ಗೆದ್ದಿದೆ.

ತ್ರಿಪುರಾ (Tripura) ಮತ್ತು ನಾಗಾಲ್ಯಾಂಡ್‌ನಲ್ಲಿ (Nagaland) ಬಿಜೆಪಿಯ ಗೆಲುವಿನ ಬಗ್ಗೆ ಮಾತನಾಡುವ ಜನರು ಮೇಘಾಲಯ ಫಲಿತಾಂಶಗಳ ಬಗ್ಗೆ ಏಕೆ ಮಾತನಾಡುವುದಿಲ್ಲ? 59 ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ ಎರಡನ್ನು ಮಾತ್ರ ಗೆದ್ದಿದೆ ಎಂದರು.

ಇನ್ನು ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳ ರಾಜ್ಯಪಾಲರು ಸುಪ್ರೀಂ ಕೋರ್ಟ್ ತೀರ್ಪಿಗೆ ಗಮನ ಕೊಡುವುದಿಲ್ಲ. ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಪ್ರಸ್ತಾವಿತ ಶಾಸನದ ಕುರಿತು ರಾಜ್ಯಪಾಲ ಆರ್‌ ಎನ್ ರವಿ (R.N.Ravi) ಅವರು ಸ್ಪಷ್ಟನೆ ಕೋರಿ ವಾಪಸ್ ಕಳುಹಿಸಿದ್ದಾರೆ.

ಇಲ್ಲಿಯವರೆಗಿನ ರಾಜ್ಯಪಾಲರ ಚಟುವಟಿಕೆಗಳನ್ನು ನೋಡಿದರೆ, ರಾಜ್ಯಪಾಲರಿಗೆ ಕೇವಲ ಬಾಯಿಯಿದೆ, ಕಿವಿಯಲ್ಲ ಎಂದು ತೋರುತ್ತದೆ ಎಂದು ಟೀಕಿಸಿದರು. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು

ಇತ್ತೀಚೆಗೆ ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದ ಸ್ವಾಲಿನ್‌, ವಿರೋಧ ಪಕ್ಷಗಳನ್ನು ಚುನಾವಣಾ ಮೂಲಕ ಎದುರಿಸಬೇಕು. ತನಿಖಾ ಸಂಸ್ಥೆಗಳ ಮೂಲಕ ಅಲ್ಲ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು ಎಂದು ಟೀಕಿಸಿದ್ದರು.

Exit mobile version