ಬಾಬರ್ ಸಮಾಧಿಗೆ ನೆಹರೂ, ಇಂದಿರಾ, ರಾಹುಲ್ ಭೇಟಿ ನೀಡಿದ್ದು, ಇವರದು ಬಾಬರ್‍ನದು ಒಂದೇ ಮೂಲವೇ? : ಬಿಜೆಪಿ!

ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಆರ್‍ಎಸ್‍ಎಸ್(RSS) ಮೂಲವನ್ನು ಕೆದಕುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ(BJP) ನಾಯಕರು ಕಾಂಗ್ರೆಸ್ ಮೂಲವನ್ನು ಪ್ರಶ್ನಿಸುತ್ತಾ, ನೆಹರೂ ಕುಟುಂಬ ಮೂಲವನ್ನು ಕೆದಕಿದ್ದಾರೆ. ಈ ಕುರಿತು ಸರಣಿ ಟ್ವೀಟ್‍ಗಳನ್ನು ಮಾಡಿರುವ ರಾಜ್ಯ ಬಿಜೆಪಿ(State BJP) ವಿಪಕ್ಷ ಕಾಂಗ್ರೆಸ್‍ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಬಿಜೆಪಿ ಟ್ವೀಟ್‍ಗಳ ಇಲ್ಲಿದೆ ನೋಡಿ. “ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗಿರುವ ಕಾಂಗ್ರೆಸ್ ಪಕ್ಷ, ಇಂದಿರಾ ಕಾಂಗ್ರೆಸ್ ಪಕ್ಷ ಮತ್ತು ನಕಲಿ ಗಾಂಧಿಗಳ ಪಕ್ಷ.


ಅಂದಹಾಗೆ ಸಿದ್ದರಾಮಯ್ಯ ಅವರೇ, ನೀವು ಕೂಡ ಜನತಾದಳ ಪಕ್ಷದಿಂದ, ಅಧಿಕಾರದ ಮೋಹದಿಂದ ನಕಲಿ ಗಾಂಧಿ ಪಕ್ಷಕ್ಕೆ ಬಂದವರಲ್ಲವೇ? ಆಫ್ಘಾನಿಸ್ತಾನದ ಬಾಬುರ್ ಸಮಾಧಿಗೆ,
1959 ರಲ್ಲಿ ನೆಹರೂ, 1968 ರಲ್ಲಿ ಇಂದಿರಾ ಗಾಂಧಿ, 2005 ರಲ್ಲಿ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ! ಭೇಟಿಯ ಬಳಿಕ “ಮೈ ಟ್ರೂ ಹೋಮ್ ಕಮಿಂಗ್” ಎಂದು ಉದ್ಘರಿಸಿದ್ದರು ಇಂದಿರಾ. ಸಾವಿರಾರು ಹಿಂದೂಗಳನ್ನು ಹತ್ಯೆಗೈದ ಬಾಬುರ್ ಎಂಬ ಮತಾಂಧನ ಮೂಲ ಹಾಗೂ ಇವರ ಮೂಲ ಎರಡೂ ಒಂದೇ ಆಗಿದೆಯೇ?”

ಸಿದ್ದರಾಮಯ್ಯ ಅವರೇ, ಇಂದಿರಾ ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಆಗಿದ್ದೇಗೆ? ಇಂದಿರಾ ಪ್ರಿಯದರ್ಶಿನಿ ಗ್ಯಾಂಡಿ, ಇಂದಿರಾ ಗಾಂಧಿ ಆಗಿದ್ದೇಗೆ? ಸಿದ್ದರಾಮಯ್ಯ ಅವರೇ, ನೀವು ಯಾರ ವಿಶ್ವಾಸಕ್ಕಾಗಿ ಹೇಳಿಕೆ ನೀಡುತ್ತಿದ್ದೀರೋ, ಅವರ ಮೂಲ ನಿಮಗೆ ತಿಳಿದಿಲ್ಲವೇ?
√ ಫಿರೋಜ್ ಗಾಂಧಿ – ಫಿರೋಜ್ ಜೆಹಾಂಗೀರ್ ಗ್ಯಾಂಡಿ, ಪರ್ಷಿಯನ್ ಮೂಲ
√ ಸೋನಿಯಾ ಗಾಂಧಿ – ಎಡ್ವಿಜ್ ಆಂಟೋನಿಯಾ ಅಲ್ಬಿನಾ ಮೈನೊ, ಇಟಲಿ ಮೂಲ
√ ರಾಹುಲ್ ಗಾಂಧಿ – ರೌಲ್ ವಿನ್ಸಿ.

Exit mobile version