ಈಗ ಡಿ.ಕೆ. ಶಿವಕುಮಾರ್ ಬಿದ್ದು ಹೋಗುವ ಒಣ ಮರದಂತೆ : ಬಿಜೆಪಿ

BJP

ಕಾಂಗ್ರೆಸ್(Congress) ಹಾಗೂ ಜೆಡಿಎಸ್(JDS) ಅಪವಿತ್ರ ಮೈತ್ರಿ ಸಿಂಕ್ ಆಗದೇ ಒದ್ದಾಡುತ್ತಿದ್ದಾಗ “ಬಿದ್ದು ಹೋಗುವುದಕ್ಕೆ ಇದೇನು ಒಣ ಮರವಲ್ಲ” ಎಂದು ಡಿಕೆಶಿ ಅಬ್ಬರಿಸುತ್ತಿದ್ದರು. ಆದರೆ ಈಗ ಸಿದ್ದರಾಮಯ್ಯ(Siddaramaiah) ಜೊತೆ ಹೊಂದಾಣಿಕೆ ಸಾಧ್ಯವಾಗದೇ ಡಿ.ಕೆ. ಶಿವಕುಮಾರ್(DK Shivkumar) ಅವರು ಬಿದ್ದು ಹೋಗುವ ಒಣ ಮರದಂತಾಗಿದ್ದಾರೆ ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.


ರಾಜ್ಯ ಕಾಂಗ್ರೆಸ್(State Congress) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಲೇವಡಿ ಮಾಡಿರುವ ಬಿಜೆಪಿ, ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ(Rahul Gandhi) ಬಂದರು ಎಂಬ ಕಾರಣಕ್ಕೆ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಗಾಂಧಿ(Priyanka Gandhi) ಅವರನ್ನು ಡಿಕೆಶಿ ಆಹ್ವಾನಿಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ನಾನಾ, ನೀನಾ ಎಂಬ ಹಗ್ಗಜಗ್ಗಾಟ ಆರಂಭಗೊಂಡಿದೆ. ಡಬಲ್ ಸ್ಟೇರಿಂಗ್ ಪಕ್ಷ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ವ್ಯಂಗ್ಯವಾಡಿದೆ.


ಕಾಂಗ್ರೆಸ್ ತನ್ನೊಳಗಿನ ನಾಯಕತ್ವದ ವೈರುಧ್ಯಗಳನ್ನು ಮುಚ್ಚಿಕೊಳ್ಳಲು ಸುಳ್ಳು ಸುದ್ದಿಯ ಮೊರೆ ಹೋಗಿದೆ. ಸಿಎಂ ಬದಲಾವಣೆ ಬಗ್ಗೆ ಸುಳ್ಳು ಆರೋಪ ಮಾಡಿ ಬಾಲ ಸುಟ್ಟುಕೊಂಡ ಬೆಕ್ಕಿನಂತಾಗಿದ್ದಾರೆ. ಟ್ವೀಟ್(Tweet) ಮಾಡಿದವರನ್ನೇ ಕೇಳಿ ಎಂದು ಸಿದ್ದರಾಮಯ್ಯ ಹೇಳಿದರೆ, ಡಿಕೆಶಿ ವರದಿ ತರಿಸಿಕೊಂಡಿದ್ದಾರೆ, ಕಪಾಳ ಮೋಕ್ಷವಿದು. ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವೀಟರ್ ಖಾತೆ ಮೂಲಕ ಸುಳ್ಳು ಆರೋಪ ಮಾಡಲಾಗಿತ್ತು.

ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಇದನ್ನು ನಿರಾಕರಿಸಿದ್ದಾರೆ. ಕಾಂಗ್ರೆಸ್ ಒಂದು ಡಬಲ್ ಸ್ಟೇರಿಂಗ್ ಪಕ್ಷ ಎಂದು ಕರೆಯಲು ಇದಕ್ಕಿಂತ ಬೇರೆ ಉದಾಹರಣೆ ಬೇಕೇ? ಎಂದು ಪ್ರಶ್ನಿಸಿದೆ. ಇದಕ್ಕೂ ಮುನ್ನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯನ್ನ ಬದಲಾವಣೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಚರ್ಚೆ ನಡೆಸಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದರು.

Exit mobile version