ಜಮೀರ್‌ ಅಹಮದ್‌ ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ : ಬಿಜೆಪಿ

bjp

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(BBMP) ಚುನಾವಣೆಯಲ್ಲಿ(Elections) ಸೋಲುವ ಭಯದಿಂದ ಕೈ ಪಕ್ಷ ಕಂಗೆಟ್ಟಿದೆ. ಹಾಗಾಗಿ ಹಿಂಬಾಗಿಲ ಮೂಲಕ ಚುನಾವಣೆ ನಿಲ್ಲಿಸಲು ಹವಣಿಸುತ್ತಿದೆ. ಕೈ ಪಕ್ಷ ಹಾಗೂ ಜಮೀರ್‌ ಅಹಮದ್‌ ಖಾನ್‌(Zameer Ahmed Khan) ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ. ಕೈ ಪಕ್ಷದ ಚುನಾವಣಾ ಅಭ್ಯರ್ಥಿಗಳಾಗಲು ನಮ್ಮ ಬೆಂಗಳೂರಿನ ಮಹಿಳೆಯರು ಅರ್ಹರಲ್ಲವೇ? ಎಂದು ರಾಜ್ಯ ಬಿಜೆಪಿ(State BJP) ಕಾಂಗ್ರೆಸ್‌ ಪಕ್ಷವನ್ನು(Congress Party) ಟೀಕಿಸಿದೆ.


ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ(BBMP Elections) ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ(State Government) ಬಿಡುಗಡೆ ಮಾಡಿದ್ದು, ಅದನ್ನು ವಿರೋಧಿಸಿರುವ ರಾಜ್ಯ ಕಾಂಗ್ರೆಸ್‌ ಪಕ್ಷದ ನಡೆಯನ್ನು ಟೀಕಿಸಿರುವ ಬಿಜೆಪಿ, ಅಂತ್ಯೋದಯ ಹಾಗೂ ಸಾಮಾಜಿಕ ನ್ಯಾಯ ರಾಜ್ಯ ಬಿಜೆಪಿ ಸರ್ಕಾರದ ಪರಮಗುರಿ. ಸಮಾಜದ ಎಲ್ಲ ವರ್ಗದ ಜನರ ಏಳಿಗೆ ಮತ್ತು ಆಶೋತ್ತರಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ. ಶ್ರೀ ಬಾಬುರಾವ್ ಚಿಂಚನಸೂರ್ ಅವರ ಗೆಲುವು ಇದಕ್ಕೆ ತೀರಾ ಇತ್ತೀಚಿನ ಉದಾಹರಣೆಯಷ್ಟೇ.

ಆದರೆ ರಾಜ್ಯ ಪಕ್ಷದ ತುಷ್ಟೀಕರಣ ನೀತಿ ಕೇವಲ ಅಲ್ಪಸಂಖ್ಯಾತರ ಮೇಲ್ವರ್ಗದ ಗಂಡಸರಿಗೆ ಮಾತ್ರ ಮೀಸಲು ಎಂದು ಟೀಕಿಸಿದೆ.
ಇನ್ನು ಪರಿಶಿಷ್ಟ ಪಂಗಡದವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳಾಗುವುದು ಕೂಡ ರಾಜ್ಯ ಕಾಂಗ್ರೆಸ್‌ ಪಕ್ಷ ಬಯಸುವುದಿಲ್ಲ. ಶ್ರೀಮತಿ ದ್ರೌಪದಿ ಮುರ್ಮು(Droupadi Murmu) ಅವರು ರಾಷ್ಟ್ರಪತಿ ಅಭ್ಯರ್ಥಿಯಾದಾಗ ಅದನ್ನು ಸಹಿಸದೇ, ಅವರ ವಿರುದ್ಧವೂ ವಿಷ ಕಾರಿದ್ದೇ ಇದಕ್ಕೆ ಸಾಕ್ಷಿ. ಸಿದ್ದರಾಮಯ್ಯ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದನ್ನು ಮರೆಯುವಂತಿಲ್ಲ ಎಂದಿದೆ.


ಇನ್ನು ಜನಸಂಖ್ಯೆಗೆ ಅನುಗುಣವಾಗಿ ಬಿಬಿಎಂಪಿ ಚುನಾವಣೆಯ ಮೀಸಲಾತಿ ಪಟ್ಟಿ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ಗೆಲ್ಲಬಾರದು, ಬಿಜೆಪಿಗೆ ಅನುಕೂಲ ಆಗಬೇಕು ಎಂಬ ರೀತಿಯಲ್ಲಿ ಪಟ್ಟಿ ಪ್ರಕಟಿಸಲಾಗಿದೆ. ಮೀಸಲಾತಿ ಪಟ್ಟಿಯಲ್ಲಿ ಸಾಮಾಜಿಕ ನ್ಯಾಯವನ್ನು ಸಂಪೂರ್ಣ ಗಾಳಿಗೆ ತೂರಿ, ಪರಿಶಿಷ್ಟರು, ಹಿಂದುಳಿದವರು, ಮಹಿಳೆಯರಿಗೆ ಮೋಸ ಮಾಡಲಾಗಿದೆ ಎಂದು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivkumar) ಆರೋಪಿಸಿದ್ದರು.

Exit mobile version