ಕಾಂಗ್ರೆಸ್ ಪಕ್ಷಕ್ಕೆ(Congress Party) ಮಹಿಳಾ ನಾಯಕರೆಂದರೆ ನಕಲಿ ಗಾಂಧಿ ಕುಟುಂಬದ ಸದಸ್ಯರು ಮಾತ್ರ. ಅದೇ ಕುಟುಂಬದ ಮಹಿಳೆಯರು ಪ್ರಧಾನಿಯಾಗಬೇಕು, ಪಕ್ಷದ ಅಧ್ಯಕ್ಷರಾಗಬೇಕು ಹಾಗೂ ಇನ್ನಿತರ ಉನ್ನತ ಹುದ್ದೆ ಹೊಂದಿರಬೇಕು. ಇದನ್ನು ಮಹಿಳಾ ಸಬಲೀಕರಣ(Women Empowerment) ಎನ್ನುವುದಿಲ್ಲ, ಇದನ್ನು ನಕಲಿ ಗಾಂಧಿ ಕುಟುಂಬದ ಸಬಲೀಕರಣ ಎನ್ನುತ್ತಾರೆ ಅಷ್ಟೇ ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.
“ಮಹಿಳಾ ವಿರೋಧಿ ಕಾಂಗ್ರೆಸ್” ಎಂಬ ಹ್ಯಾಷ್ಟ್ಯಾಗ್(Hash Tag) ಬಳಸಿ ಸರಣಿ ಟ್ವೀಟ್ಗಳ(Tweet) ಮೂಲಕ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಯಾವ ಸ್ಥಾನಮಾನ ನೀಡಲಾಗಿದೆ ಎನ್ನುವುದು ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಆತ್ಮಚರಿತ್ರೆಯಲ್ಲಿ ಸ್ಪಷ್ಟವಾಗುತ್ತದೆ. ವಿಧಾನಸಭೆ ಸ್ಪೀಕರ್ ಹಾಗೂ ಸಚಿವೆಯಾಗುವ ಅವಕಾಶಕ್ಕೆ ಸಿದ್ದರಾಮಯ್ಯ(Siddaramaiah) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತಣ್ಣೀರೆರಚಿದ್ದನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ಟೀಕಿಸಿದೆ.
ರಾಜಕೀಯದಲ್ಲಿ ಮಹಿಳೆಯರು ಸಕ್ರಿಯವಾಗುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ, ಮಹಿಳಾಪರ ಘೋಷಣೆ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ರಾಜ್ಯಸಭಾ(Rajyasabha) ಹಾಗೂ ಎಂಎಲ್ಸಿ(MLC) ಚುನಾವಣೆಗಳಲ್ಲಿ ಮಹಿಳೆಯರಿಗೆ ಒಂದು ಸ್ಥಾನ ಕೂಡಾ ನೀಡಲಿಲ್ಲ. ಇದನ್ನು ಪ್ರಶ್ನಿಸಿದ ತನ್ನದೇ ಪಕ್ಷದ ಮಹಿಳಾ ನಾಯಕಿಗೆ ಸಿಕ್ಕಿದ್ದು, ನೋಟಿಸ್ ಮಾತ್ರ. ಒಂದು ಕಡೆ ಕಾಂಗ್ರೆಸ್ ಪಕ್ಷ ಮೈ ಲಡ್ಕಿ ಹೂ, ಮೈ ಲಡ್ ಸಕ್ತಿ ಹೂ ಎಂದು ಹೂಂಕರಿಸುತ್ತಾರೆ. ಆದರೆ, ಬಿಬಿಎಂಪಿ ಚುನಾವಣೆಯಲ್ಲಿ(BBMP Elections) ಸಂವಿಧಾನಿಕವಾಗಿ, ಕಾನೂನು(Law) ಬದ್ಧವಾಗಿ ಮಹಿಳೆಯರಿಗೆ ಮೀಸಲಾತಿ ಒದಗಿಸಿದರೆ ಉರಿದು ಬೀಳುತ್ತಾರೆ.
ಕಾಂಗ್ರೆಸ್ ಪಕ್ಷ ಹೀಗೇಕೆ? ಎಂದು ಪ್ರಶ್ನಿಸಿದೆ. ಇನ್ನು ಬಿಬಿಎಂಪಿ ಚುನಾವಣೆಗಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿಯನ್ನು ಕಾಂಗ್ರೆಸ್ ಟೀಕಿಸಿತ್ತು. ಬಿಜೆಪಿ ತನ್ನ ಲಾಭಕ್ಕೆ ಅನುಕೂಲವಾಗುವ ರೀತಿಯಲ್ಲಿ ಮೀಸಲಾತಿ ನಿಗದಿಪಡಿಸಿದೆ ಎಂದು ಆರೋಪಿಸಿತ್ತು.