ಎಲೆಕ್ಷನ್ ವರ್ಷದ ಬಜೆಟ್ ನಲ್ಲಿ ಬೊಮ್ಮಾಯಿ ಸರ್ಕಾರ ಎಡವುತ್ತಾ? ಉತ್ತಮವಾಗಿ ನಡೆಯುತ್ತಾ?

basavaraj

ಸಿಎಂ(Chief Minister) ಬಸವರಾಜ್ ಬೊಮ್ಮಯಿ(Basavaraj Bommai) ಅವರ ಚೊಚ್ಚಲ ಬಜೆಟ್ ಗೆ ಕ್ಷಣಗಣನೆ. ಸಿಂಹಪಾಲು ಯಾವ ವರ್ಗಕ್ಕೆ ಸಿಗಲಿದೆ? ಯಾವ ಕ್ಷೇತ್ರಕ್ಕೆ ಲಭಿಸಲಿದೆ? ಶ್ರಮಿಕ ವರ್ಗಕ್ಕೆ ಶ್ರಮಿಸಲಿದ್ದಾರಾ ಸಿಎಂ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಚೊಚ್ಚಲ ಬಜೆಟ್(Budget) ಇದಾಗಿದ್ದು, ಈ ಬಜೆಟ್ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಈ ಕಾರಣದಿಂದ ಬಜೆಟ್ ಮೇಲೆ ಹೆಚ್ಚು ಕುತೂಹಲಗಳಿವೆ. ಇನ್ನೂ ಈ ಬಾರಿಯ ರಾಜ್ಯ ಬಜೆಟ್ ಗಾತ್ರ 2.60 ಲಕ್ಷ ಕೋಟಿ ರೂ. ದಾಟಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಕಳೆದ ಬಾರಿ ಬಜೆಟ್ ಗಾತ್ರ 2.46 ಲಕ್ಷ ಕೋಟಿ ರೂ. ಇತ್ತು. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಬಜೆಟ್ ಗಾತ್ರ ಕಡಿಮೆ ಆಗಿರಲಿಲ್ಲ. ಸದ್ಯ ಈಗ ಕೋವಿಡ್ ಸೋಂಕು ಕಡಿಮೆಯಾಗುತ್ತಿದೆ. ವ್ಯಾಪಾರ, ವಹಿವಾಟು ಯಥಾಸ್ಥಿತಿಗೆ ತಲುಪುತ್ತಿದ್ದು ಆದಾಯವೂ ಹೆಚ್ಚಳವಾಗುತ್ತಿದೆ. ಇದರಿಂದ ಈ ಬಾರಿಯ ಬಜೆಟ್ ಗಾತ್ರ ಇನ್ನಷ್ಟು ಹೆಚ್ಚಾಗುವ ಎಲ್ಲಾ ನಿರೀಕ್ಷೆಗಳಿವೆ. ಎಲ್ಲಾ ವರ್ಗಗಳ ಬೇಡಿಕೆಗಳಿಗೆ ಸ್ಪಂದಿಸುವ ಬರವಸೆಯನ್ನ ಈ ಬಜೆಟ್ ಮೇಲೆ ಇಡಲಾಗಿದ್ದು, ಹಲವು ಜನಪ್ರಿಯ ಘೋಷಣೆಗಳು, ಹೆಚ್ಚಿನ ಅನುದಾನಗಳ ನಿರೀಕ್ಷೆ ಇದೆ.

ನಿರೀಕ್ಷೆಗಳು : ದುಡಿಯುವ ವರ್ಗಗಳಾದ ರೈತರು, ದಲಿತರು, ಹಿಂದುಳಿದವರು, ಕುಶಲ ಕರ್ವಿುಗಳು, ಸಣ್ಣ ಕೈಗಾರಿಕೆಗಳಿಗೆ, ಶ್ರಮಿಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆಗಳಿವೆ. ರೈತರು ಬೆಳೆದ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ, ಕೃಷಿ ಯಂತ್ರೋಪಕರಣಗಳಿಗೆ ನೀಡುತ್ತಿರುವ ಸಬ್ಸಿಡಿ ಪ್ರಮಾಣದಲ್ಲಿ ದ್ವಿಗುಣ, ಬಿತ್ತನೆ ಬೀಜ, ರಸಗೊಬ್ಬರಕ್ಕೆ ಹೆಚ್ಚು ಸಬ್ಸಿಡಿ, ಕೃಷಿ ಸಾಲಮನ್ನದ ಮೂಲಕ ಕೃಷಿಕರನ್ನ ಸೆಳೆಯಬಹುದು. ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳು, ಉನ್ನತ ಶಿಕ್ಷಣಕ್ಕೆ ಮತ್ತಷ್ಟು ಪ್ರೋತ್ಸಾಹ ಹೆಚ್ಚಾಗಬಹುದು.

ತಳ ಮಟ್ಟದ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡಬಹುದು. ಗ್ರಾಮೀಣಾಭಿವೃದ್ದಿ, ತೋಟಗಾರಿಕೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಸಿಗಬಹುದು. ಎಲೆಕ್ಷನ್ ವರ್ಷದಲ್ಲಿ ಜನಪ್ರತಿನಿಧಿಗಳ ಕಸರತ್ತು ಹೆಚ್ಚಾಗಿರುತ್ತೆ ಎನ್ನುವ ವಾದಕ್ಕೆ ಬೊಮ್ಮಾಯಿಯವರು ಯಾವ ರೀತಿಯ ಕಸರತ್ತು ನಡೆಸಿ ಎಲ್ಲಾ ವರ್ಗದವರನ್ನ ಮೆಚ್ಚಿಸಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.

Exit mobile version