ಕೃಷಿಗೆ 33,700 ಕೋಟಿ ಮೀಸಲು ; ಈ ಬಾರಿಯ ಬಜೆಟ್ ಕೃಷಿಕರಿಗೆ ಲಾಭದಾಯಕವಾ?

budget

ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಇಂದು ತಮ್ಮ ಚೊಚ್ಚಲ ಬಜೆಟ್(First Budget) ಮಂಡಿಸಿದರು. ಇದರಲ್ಲಿ ಪ್ರಮುಖವಾಗಿ, ಬಹುಮುಖ್ಯವಾಗಿ ಕೃಷಿ(Agriculture) ಮತ್ತು ಪೂರ ಚಟುವಟಿಕೆಗಳಿಗೆ ಎಂದು ಬಜೆಟ್ ನಲ್ಲಿ ಒಟ್ಟಾರೆ 33,700 ಕೋಟಿ ರೂಪಾಯಿಗಳನ್ನು ಮೀಸಲಿಟ್ಟರು. ಬಜೆಟ್ ಮಂಡಿಸುವ ಮುನ್ನ ಕೃಷಿಗೆ ಈ ಬಾರಿ ಹೆಚ್ಚು ಆದ್ಯತೆ ನೀಡುವ ಕುರಿತು ಸಿಎಂ ತಿಳಿಸಿದ್ದರು. ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಅನುಗುಣವಾಗಿ ರೈತರ ಆದಾಯವು ಹೆಚ್ಚಳವಾಗಬೇಕು ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ನಮ್ಮ ಸರ್ಕಾರ ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿದೆ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಹಾಗೂ ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀರಾವರಿ ಸೌಲಭ್ಯ ರಿಯಾಯಿತಿ ದರದಲ್ಲಿ ಬೀಜ ಗೊಬ್ಬರ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಪಿಎಂ ಕಿಸಾನ್ ಸಹಾಯಧನ ಹೀಗೆ ಹಲವಾರು ಸೌಲಭ್ಯಗಳನ್ನು ವಿವಿಧ ಯೋಜನೆಗಳಡಿ ಒದಗಿಸಲಾಗುತ್ತಿದೆ.

ಈ ಎಲ್ಲಾ ಕ್ರಮಗಳು ಆತ್ಮ ನಿರ್ಧಾರ ಭಾರತ ಕಟ್ಟುವ ಆಶಯಕ್ಕೆ ಪೂರಕವಾಗಿದೆ. ರಾಜ್ಯದಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಕೃಷಿ ಯಾಂತ್ರಿಕರಣ ನ ಪಾತ್ರ ಬಹುಮುಖ್ಯವಾಗಿದೆ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರತಿ ಎಕರೆಗೆ ಇನ್ನೂರೈವತ್ತು₹ಗಳಂತೆ ಗರಿಷ್ಠ 5ಎಕರೆಗೆ ಡಿಬಿಟಿ ಮೂಲಕ ಡೀಸೆಲ್ ಗೆ ಸಹಾಯ ಧನವನ್ನು ನೀಡಲು ರೈತಶಕ್ತಿ ಎಂಬ ಹೊಸ ಯೋಜನೆಗೆ ಐನೂರು ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು. ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿಯಲ್ಲಿನ ಐವತ್ತು ಲಕ್ಷಕ್ಕೂ ಹೆಚ್ಚಿನ ರೈತರಿಗೆ 2021-22ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 1,978 ಕೋಟಿ ರುಪಾಯಿಗಳ ಅನುದಾನವನ್ನು ನೇರ ನಗದು ವರ್ಗಾಯಿಸಲಾಗಿದೆ.

ಈ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಮುಂದುವರೆಸಲಾಗುವುದು. ರೈತರ ಆದಾಯವನ್ನು ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯ ವನ್ನು ಸ್ಥಾಪಿಸಲಾಗಿದೆ ರೈತ ಉತ್ಪಾದಕರ ಸಂಸ್ಥೆಗಳನ್ನು ಬಳಸಿ ಕೃಷಿ ಪ್ರಾಥಮಿಕ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಈ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶ ಸೃಷ್ಟಿಸಲು ಇದು ಸಹಕಾರಿಯಾಗಲಿದೆ. ಕೆಪೆಕ್ ಮುಖಾಂತರ ರೈತ ಉತ್ಪಾದಕರ ಸಂಸ್ಥೆಗಳಿಗೆ ಸಾಮಾನ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ ಕೊಯ್ಲಿನೋತ್ತರ ನಿರ್ವಹಣೆಯನ್ನು ಕೈಗೊಂಡು ಅವುಗಳ ಉತ್ಪನ್ನಗಳನ್ನು ಮಾರಾಟ ಮತ್ತು ರಫ್ತು ಮಾಡಲು ಐವತ್ತು ಕೋಟಿ ರುಪಾಯಿಗಳ ಯೋಜನೆ ರೂಪಿಸಲಾಗುವುದು.

ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣವು 26.32 ಲಕ್ಷ ಹೆಕ್ಟೇರುಗಳಾಗಿದ್ದು, ದೇಶದಲ್ಲಿಯೇ ಮೊದಲನೇ ಸ್ಥಾನವನ್ನು ಹೊಂದಿದೆ. 2021-22ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ 1.38 ಲಕ್ಷ ಫಲಾನುಭವಿಗಳಿಗೆ 240 ಕೋಟಿ ರೂಪಾಯಿ ಸಹಾಯಧನವನ್ನು ನೀಡಿದ್ದು, ತೋಟಗಾರಿಕೆ ಸಾಗುವಳಿ ಕ್ಷೇತ್ರವನ್ನು ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಲು 1,255 ಹೆಕ್ಟೇರ್ ಪ್ರದೇಶದಲ್ಲಿ ಸಂರಕ್ಷಿತ ಬೇಸಾಯ ಪದ್ದತಿಯನ್ನು ಪ್ರೋತ್ಸಾಹಿಸಲಾಗಿದೆ ಹಾಗೂ ರೈತರಿಗೆ ಯೋಗ್ಯದರದಲ್ಲಿ 48 ಲಕ್ಷ ಸಸಿ-ಕಸಿಗಳನ್ನು ವಿತರಿಸಲಾಗಿದೆ ಎಂಬುದನ್ನು ತಿಳಿಸಿದರು.

Exit mobile version