ಮೀಸಲಾತಿ ಕುರಿತು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿಲುವಿಲ್ಲ: ಸರ್ಕಾರದ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ಟೀಕೆ

ಮೈಸೂರು, ಫೆ. 27: ರಾಜ್ಯದಲ್ಲಿ ಕೇಳಿ ಬರುತ್ತಿರುವ ಹಲವು ಸಮುದಾಯಗಳ ಮೀಸಲಾತಿ ಬಗ್ಗೆ ಹೋರಾಟ ಮಾಡುತ್ತಿವೆ. ಆದರೆ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನಿಲುವು ಇಲ್ಲ ಎಂದು ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರತಿ ಜಾತಿ ಜನಾಂಗವು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸರ್ಕಾರ ಇದರ ಬಗ್ಗೆ ಎಲ್ಲಾದರು ಹೇಳಿಕೆ ಕೊಟ್ಟಿದೆಯೇ? ಸಂವಿಧಾನಬದ್ದವಾಗಿ ಮೀಸಲಾತಿ ಬಗ್ಗೆ ನಿರ್ಣಯ ಕೈಗೊಳ್ಳಲು ಅಧಿಕಾರ ಇದೆ ಅಂತ ಎಲ್ಲಾದರು ಸ್ಪಷ್ಟವಾಗಿ ಹೇಳಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಮೀಸಲಾತಿ ವಿಚಾರ ಕೇಂದ್ರ ಸರ್ಕಾರಕ್ಕೆ ಸೇರಿದ್ದು. ಇದರ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿ, ಸಮಿತಿ ರಚನೆ ಮಾಡಿ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ ಇದು ಮಾತ್ರ ನಮ್ಮಿಂದ ಸಾದ್ಯ ಅಂತ ಹೋರಾಟಗಾರರಿಗೆ ಸರ್ಕಾರ ಹೇಳಿದೆಯೇ? ವೇದಿಕೆಯಲ್ಲಿ ಕೇಳಿದಾಗಲೆಲ್ಲ ಮೀಸಲಾತಿ ಕೊಡಲು ಆಗಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆಯೇ? ಈ ಬಗ್ಗೆ ಸರ್ಕಾರ ಸ್ಪಷ್ಟ ಪಡಿಸಬೇಕು ಎಂದರು.

ಪಂಚಮಸಾಲಿಗಳು ನಮ್ಮ ಪಕ್ಷದ ಬೆನ್ನೆಲುಬು. ಅವರು ನಮ್ಮನ್ನ 2ಎಗೆ ಸೇರಿಸುವಂತೆ ತಿರುಗಿಬಿದ್ದಿದ್ದಾರೆ. ಅವರನ್ನ ಸೇರಿಸುತ್ತೀರಾ? ಅವರನ್ನು ಸೇರಿಸೋದಾದರೆ 2ಎನಲ್ಲಿ ಇರುವವರಿಗೆ ಮೀಸಲಾತಿ ಹೆಚ್ವು ಮಾಡ್ತಿರಾ? ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆಯೆ ಎಂದು ಕೇಳಿದರು.
ಸರ್ಕಾರ ಬಂದು ಎರಡು ವರ್ಷ ಆದರೂ ಎಲ್ಲೆಲ್ಲಿ ನಾಯಕತ್ದ ಕೊರತೆ ಇದೆ ಜನಾಂಗ ಸಮಸ್ಯೆ ಇದೆ, ಯಾವ ಜನಾಂಗಕ್ಕೆ ಪ್ರಾತಿನಿಧ್ಯ ಕೊಡಬೇಕು ಅನ್ನೋದನ್ನ ಅಲೋಚನೆ ಮಾಡಿದ್ದಾರಾ? ಎಂದು ನಾಯಕರನ್ನು ಪ್ರಶ್ನಿಸಿದ್ದಾರೆ.

ಪಕ್ಷದಲ್ಲಿ ಸ್ಪಷ್ಟ ನಿಲುವಿಲ್ಲ ಗೊಂದಲದಲ್ಲಿ ಸಿಲುಕಿದ್ದೇವೆ. ಮಠಾಧಿಪತಿಗಳ ಹೋರಾಟದ ಬಗ್ಗೆ ನಾನು ಮಾತನಾಡಲ್ಲ. ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ. ಸರ್ಕಾರ ಸ್ಪಷ್ಟ ನಿಲುವು, ಹೇಳಿಕೆಗಳ ಮೂಲಕ ಜನರ ಮನಸ್ಸಿನ ಸಂಶಯ ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು.

Exit mobile version