Bengaluru: ಶಕ್ತಿ ಯೋಜನೆಯಿಂದಾಗಿ ಉಂಟಾಗಿರುವ ಬಸ್‌ಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ (State govt purchase new Busses) ರಾಜ್ಯ ಸರ್ಕಾರವು 1000ಕ್ಕೂ ಹೆಚ್ಚು ಬಸ್ ಖರೀದಿಸಲು
ಮುಂದಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಗಳಿಗೆ 500 ಕೋಟಿ ಹಣ (State govt purchase new Busses) ಅನುದಾನ ನಿಗದಿ ಮಾಡಿದೆ.

ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜವಾಬ್ದಾರಿವಹಿಸುವ ನಿಟ್ಟಿನಲ್ಲಿ ಹೊಸದಾಗಿ 1000ಕ್ಕೂ ಅಧಿಕ
ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದು, ಸ್ತ್ರೀ ಶಕ್ತಿ ಗ್ಯಾರಂಟಿ ಯೋಜನೆಯಿಂದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇಖಡಾ 30ರಷ್ಟು ಹೆಚ್ಚಳವಾಗಿದೆ ಹಾಗಾಗಿ ಕೆಎಸ್‌ಆರ್‌ಟಿಸಿಗೆ
(KSRTC) 100 ಕೋಟಿ ರೂಪಾಯಿ ವೆಚ್ಚದಲ್ಲಿ 250 ಹೊಸ ಬಸ್ ಗಳನ್ನು ಖರೀದಿಸಲು ಪ್ರಸ್ತಾವನೆಗೆ ಸಚಿವ ಸಂಪುಟವು ಸಭೆ ನಡೆಸಲು ಗುರುವಾರ ಒಪ್ಪಿಗೆ ನೀಡಿತ್ತು.
ಯಾವ ಸಂಸ್ಥೆಗೆ ಎಷ್ಟು ಬಸ್ ಖರೀದಿ
೧. ಕೆಎಸ್‌ಆರ್‌ಟಿಸಿಗೆ 100 ಕೋಟಿ ರೂ. ವೆಚ್ಚದಲ್ಲಿ 250 ಹೊಸ ಬಸ್‌ಗಳು
೨. ವಾಯುವ್ಯ ಸಾರಿಗೆ ಸಂಸ್ಥೆಗೆ 150 ಕೋಟಿ ರೂ. ವೆಚ್ಚದಲ್ಲಿ 375 ಹೊಸ ಬಸ್‌ಗಳು
೩. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 100 ಕೋಟಿ ರೂ. ವೆಚ್ಚದಲ್ಲಿ 250 ಬಸ್‌ಗಳು,
೪. ಬಿಎಂಟಿಸಿಗೆ (BMTC) 150 ಕೋಟಿ ರೂ. ವೆಚ್ಚದಲ್ಲಿ ಎಸಿ ಎಲೆಕ್ಟ್ರಿಕ್ (AC Electric) ಬಸ್ಸುಗಳು 200 ರಿಂದ 250ಕ್ಕೂ ಅಧಿಕ ಬಸ್‌ಗಳು ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ.

ಸ್ಮಾರ್ಟ್ ಕಾರ್ಡ್ ಸದ್ಯಕ್ಕಿಲ್ಲ
ಸ್ತ್ರೀ ‘ಶಕ್ತಿ’ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ನೈಜ ಲೆಕ್ಕಕ್ಕೆ ಸ್ಮಾರ್ಟ್ ಕಾರ್ಡ್ (Smart Card) ವಿತರಣೆ ಮಾಡುವಂತೆ ಹಣಕಾಸು ಇಲಾಖೆ ಪಟ್ಟು ಹಿಡಿದಿದ್ದುಇದಕ್ಕೆ ಸಂಬಂಧಪಟಂತೆ
6 ತಿಂಗಳವರೆಗೂ ಕಾಲಾವಕಾಶವನ್ನು ವಿಸ್ತರಣೆ ಮಾಡಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದ್ದು, ಹೀಗಾಗಿ ಮಹಿಳೆಯರು ಇನ್ನೂ 6 ತಿಂಗಳು ಆಧಾರ್ ಕಾರ್ಡ್ (Aadhar Card)
ತೋರಿಸಿಯೇ ಉಚಿತ ಪ್ರಯಾಣ ಮಾಡಬಹುದಾಗಿದೆ.
ಸೆ.11ರಂದು ಮುಷ್ಕರ
ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವ ಹಾಗೂ ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲು ಹಲವು ಬೇಡಿಕೆಗಳಿರುವುದರಿಂದ ಸೆ.11ಕ್ಕೆ ಬೆಂಗಳೂರಿನಲ್ಲಿ ಸಾರಿಗೆ ಬಂದ್‌ಗೆ ಕರೆ
ನೀಡಿರುವ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ನಡೆಸಿದ ಸಭೆಯು ವಿಫಲವಾಗಿದೆ.
ಸಾರಿಗೆ ಇಲಾಖೆ ಅಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳ ಮನವೊಲಿಸುವ ಪ್ರಯತ್ನ ಮಾಡಿದ್ದರು ಇದಕ್ಕೆ ಒಪ್ಪದ ಸಾರಿಗೆ ಒಕ್ಕೂಟದ ಮುಖಂಡರು ಯಾವುದೇ ಕಾರಣಕ್ಕೂ ಮುಷ್ಕರ
ಕೈಬಿಡುವುದಿಲ್ಲಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಒಕ್ಕೂಟವು ಮುಂದಿಟ್ಟಿದ್ದ 30 ಬೇಡಿಕೆಗಳ ಪೈಕಿ 28 ಬೇಡಿಕೆಗಳನ್ನು ಈಡೇರಿಸುವುದಾಗಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಭರವಸೆ
ನೀಡಿದರು. ಅದರಂತೆ ಜು. 27ಕ್ಕೆ ಕರೆ ನೀಡಿದ್ದ ಬಂದ್ ಅನ್ನು ಕೂಡ ಹಿಂಪಡೆಯಲಾಗಿತ್ತು.
ಇದನ್ನು ಓದಿ: ಗೃಹಲಕ್ಷ್ಮಿ ಸ್ಥಗಿತ: ಗೃಹಲಕ್ಷ್ಮೀ ಯೋಜನೆಯ ನೋಂದಣಿ ತಾತ್ಕಾಲಿಕ ಸ್ಥಗಿತ, ಮಹಿಳೆಯರಿಗೆ ಬಿಗ್ ಶಾಕ್ !
- ಮೇಘಾ ಮನೋಹರ ಕಂಪು .