ಮಹಿಳೆಯರೇ ಗಮನಿಸಿ: ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಮಹಿಳೆಗೂ ಮುಟ್ಟಿನ ಸಂದರ್ಭದಲ್ಲಿ ಕಾಡುವ ಕಿಬ್ಬೊಟ್ಟೆ (stomach pain during period) ಸೆಳೆತ ಅಥವಾ ಹೊಟ್ಟೆ ನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು ಮಾತ್ರೆಗಳನ್ನು

ಅವಲಂಬಿಸುವವರೇ ಜಾಸ್ತಿ. ಆದರೆ ಈ ರೀತಿ ಮಾಡುವುದರಿಂದ ಆರೋಗ್ಯದಲ್ಲಿ ಏರುಪೇರು ಆಗುವ ಇರುವುದರಿಂದ ಈ ನೋವಿನ ಸಮಸ್ಯೆಗೆ ಮಾತ್ರೆ ಸೇವಿಸುವುದರ ಬದಲಿಗೆ ಯಾವುದೇ

ಅಡ್ಡಪರಿಣಾಮವಿಲ್ಲದ ಕೆಲವೊಂದು ನೈಸರ್ಗಿಕವಾಗಿ ಸಿಗುವ ಆಹಾರಗಳನ್ನು ಸೇವನೆ ಮಾಡಿದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಹಾಲಿಗೆ ಚಿಟಿಕೆಯಷ್ಟು ಉಪ್ಪು ಬೆರೆಸಿ ಕುಡಿಯಿರಿ
ಮುಟ್ಟಿನ ಸಮಯದಲ್ಲಿ ಎದುರಾಗುವ ನೋವು ಮತ್ತು ಸೆಳೆತವನ್ನು ದೂರ ಮಾಡಲು ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ, ಚಿಟಿಕೆಯಷ್ಟು ಇಂಗು ಮತ್ತು ಬ್ಲ್ಯಾಕ್ ಸಾಲ್ಟ್ ಅನ್ನು ಮಿಶ್ರಣ ಮಾಡಿ

ಕುಡಿಯುವ ಅಭ್ಯಾಸ (stomach pain during period) ಮಾಡಿಕೊಳ್ಳಬೇಕು.

ದಾಲ್ಚಿನ್ನಿ
ದಾಲ್ಚಿನ್ನಿ ಅಥವಾ ಚಕ್ಕೆಯಲ್ಲಿ ಆಂಟಿಸ್ಪಾಸ್ಮೊಡಿಕ್ ಗುಣ ಅಧಿಕ ಪ್ರಮಾಣದಲ್ಲಿ ಕಂಡುಬರುವುದರಿಂದ, ಇದರ ಪುಡಿಯನ್ನು ದೈನಂದಿನ ಟೀಗೆ ಜೊತೆಗೆ ಬೆರೆಸಿ ಕುಡಿಯುವುದರಿಂದ, ಅಥವಾ ಆಹಾರ

ಪದಾರ್ಥಗಳಲ್ಲಿ ದಾಲ್ಚಿನ್ನಿಯನ್ನು ಬಳಸುವುದರ ಮೂಲಕ ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಕಾಣಬಹುದು.

ಬಾಳೆಹಣ್ಣು ತಿನ್ನಬೇಕು
ವಿಟಮಿನ್ ಬಿ6, ಮೆಗ್ನೀಸಿಯಮ್, ಪೊಟ್ಯಾಶಿಯಮ್ ಹಾಗೂ ಇನ್ನಿತರ ಖನಿಜಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಕಾಡುವ ನೋವು

ಹಾಗೂ ಅಸ್ವಸ್ಥತೆ ಸಮಸ್ಯೆಗಳು ದೂರವಾಗುತ್ತದೆ.

ಬೆಲ್ಲ ಮತ್ತು ಜೀರಿಗೆ ಸೇವನೆ ಒಳ್ಳೇದು
ಮುಟ್ಟಿನ ದಿನಗಳು ಹತ್ತಿರ ಬರುವ ಮುನ್ನವೇ, ಪ್ರತಿದಿನ ಸಣ್ಣ ತುಂಡು ಬೆಲ್ಲವನ್ನು ಸೇವಿಸುತ್ತಾ ಬಂದರೆ ಈ ಸಮಸ್ಯೆಯನ್ನು ತಕ್ಕಮಟ್ಟಿಗೆಯಾದರೂ ನಿಯಂತ್ರಿಸಬಹುದು. ಮತ್ತು ಮುಟ್ಟಿನ ಸಮಯದಲ್ಲಿ

ನೆನೆಸಿಟ್ಟ ಜೀರಿಗೆ ನೀರು ಮಾಡಿ ಕುಡಿಯುತ್ತಾ ಬರುವುದರಿಂದ ಕೂಡ ಹೊಟ್ಟೆ ನೋವು ಬೇಗನೆ ಶಮನವಾಗುವುದು.

ಇದನ್ನು ಓದಿ: ಹಾಲಿನೊಂದಿಗೆ ಅಂಜೂರ ಬೆರೆಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು?

ಭವ್ಯಶ್ರೀ ಆರ್ ಜೆ

Exit mobile version