ಹಿಂದಿ ಕಲಿಕೆಗೂ ಅವಕಾಶ ಕಲ್ಪಿಸಿಕೊಡಬೇಕಂತೆ.!

ಚೆನ್ನೈ ಜ 27 : ತಮಿಳುನಾಡಿನಲ್ಲಿ ತಮಿಳಿನ ಜೊತೆಗೆ ಹಿಂದಿಯನ್ನೂ ಕೂಡ ತೃತೀಯ ಭಾಷೆಯಾಗಿ ಕಲಿಯುವುದರಲ್ಲಿ ತಪ್ಪೇನಿದೆ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ನ್ಯಾಯಾಲಯವನ್ನು ಪ್ರಶ್ನಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಕುರಿತ ಮನವಿಯ ವಿಚಾರಣೆ ನಡೆಸಿದ ಸಂದರ್ಭ ಮುಖ್ಯ ನ್ಯಾಯಮೂರ್ತಿ ಎಂ.ಎನ್. ಭಂಡಾರಿ ಮತ್ತು ನ್ಯಾಯಮೂರ್ತಿ ಪಿ.ಡಿ. ಆದಿಕೇಶವಲು ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.


NEPಯ ಪ್ರಕಾರ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯಬೇಕು. ಅದರಲ್ಲಿ ಎರಡು ಭಾರತದ ಮೂಲ ಭಾಷೆಯಾಗಿರಬೇಕು ಎಂದು ಶಿಕ್ಷಣ ನೀತಿ ಶಿಫಾರಸು ಮಾಡಿದೆ. ಇದು ದೇಶಾದ್ಯಂತ ಹಿಂದಿ ಹಾಗೂ ಸಂಸ್ಕೃತವನ್ನು ಹೇರುವ ಪ್ರಯತ್ನ ಎಂದು ಹೇಳುವ ಮೂಲಕ ತಮಿಳುನಾಡು ಸರಕಾರ ಟೀಕಿಸಿತ್ತು. ಲಾಭದ ಉದ್ದೇಶ ರಹಿತ ಸಂಸ್ಥೆ ಅಲಾಮರಂನ ಕಾರ್ಯದರ್ಶಿ ಅರ್ಜುನನ್ ಇಳಯರಾಜ ಅವರು ಸಲ್ಲಿಸಿದ ದೂರಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಹಿಂದಿ ಹಾಗೂ ಸಂಸ್ಕೃತಕ್ಕೆ ಪ್ರೇರಣೆ ನೀಡುವುದನ್ನು ತಮಿಳುನಾಡು ನಿರ್ಬಂಧಿಸಬಾರದು ಎಂದಿದೆ. ಈ ಮನವಿಯನ್ನು ಮಂಗಳವಾರ ವಿಚಾರಣೆಗೆ ಪರಿಗಣಿಸಿದ ಬಳಿಕ ನ್ಯಾಯಾಲಯ, ಭಾಷಾ ಕಲಿಕೆಯನ್ನು ನಿರ್ಬಂಧಿಸುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ತೊಂದರೆಯಾಗಲಿದೆ ಎಂದು ತನ್ನ ತೀರ್ಪಿನಲ್ಲಿ ಪ್ರಕಟಿಸಿದೆ.


ಈ ಬಗ್ಗೆ ವಾದ ಮಂಡಿಸಿದ ಭಂಡಾರಿ ತಮಿಳುನಾಡಿನವರು, ಇಲ್ಲಿ ಉದ್ಯೋಗ ಪಡೆಯಲು ಯಾವುದೇ ಕಷ್ಟ ಇಲ್ಲ. ಯಾಕೆಂದರೆ, ಅವರು ತಮಿಳು ಭಾಷೆಯಲ್ಲಿ ಮಾತನಾಡಲು ಪರಿಣಿತರು. ಆದರೆ, ಅವರು ರಾಜ್ಯದ ಹೊರಗೆ ಕಷ್ಟ ಎದುರಿಸುತ್ತಾರೆ ಎಂದು ಭಂಡಾರಿ ಹೇಳಿದ್ದಾರೆ. ಹಿಂದಿ ತಿಳಿಯದೇ ಇರುವುದರಿಂದ ಹಲವರು ಕೇಂದ್ರ ಸರಕಾರದ ಉದ್ಯೋಗವನ್ನು ಕಳೆದು ಕೊಂಡಿದ್ದಾರೆ ಎಂದು ಅವರು ಗಮನ ಸೆಳೆದರು.

Exit mobile version