ಬೀದಿ ಬದಿಯ ಗೋಡೆಯ ಮೇಲಿರುವ ಚಿತ್ರ-ವಿಚಿತ್ರ ಕಲಾಕೃತಿಗಳೇ ಈ ಸ್ಥಳದಲ್ಲಿ ಅತ್ಯಂತ ಜನಪ್ರಿಯ!

ಬೀದಿಬದಿಯಲ್ಲಿ ಗೋಡೆಯ ಮೇಲಿರುವ ಚಿತ್ರಗಳು ಜಗತ್ತನ್ನು (Street Arts In India) ಹೆಚ್ಚು ವರ್ಣರಂಜಿತವಾಗಿಸಿವೆ ಎಂದರೆ ತಪ್ಪಾಗಲಾರದು. ಇದು ಕಲೆಯ ಮೇಲೆ ಆಸಕ್ತಿಯನ್ನು ಮೂಡಿಸುತ್ತದೆ, ಕಲೆಗಾರನ ಬಗ್ಗೆ ಭೇಷ್ ಎನಿಸುವಂತೆ ಮಾಡುತ್ತದೆ.

ನಿಮ್ಮ ಪ್ರಯಾಣದ ಸಮಯದಲ್ಲಿಯೂ ಸುಂದರವಾದ ಬಣ್ಣ ಮತ್ತು ಕಲಾಕೃತಿಗಳಿಂದ (Street Arts In India) ತುಂಬಿರುವ ಗೋಡೆಗಳನ್ನು ನೀವು ನೋಡಿರಬಹುದು.

ಅವು ತಕ್ಷಣವೇ ಮನಸ್ಥಿತಿಯನ್ನು ಸುಧಾರಿಸುವ ಶಕ್ತಿಯನ್ನು ಹೊಂದಿವೆ. ಅದ್ಭುತವಾದ ಬೀದಿಯ ಚಿತ್ರ ವಿಚಿತ್ರಗಳು ನಮ್ಮ ವಿಶ್ವದಲ್ಲಿ ಅನೇಕ ಇವೆ. ಅವುಗಳಲ್ಲಿ ಜನಪ್ರಿಯವಾದವುಗಳ ಪಟ್ಟಿ ಇಲ್ಲಿದೆ ಓದಿ.

https://vijayatimes.com/review-of-appu-gandadagudi/


ದೆಹಲಿ, ಭಾರತ : ಕೇವಲ ವಿದೇಶದಲ್ಲಿ ಮಾತ್ರವಲ್ಲ, ನಮ್ಮ ಭಾರತ (India) ದೇಶದ ರಾಜಧಾನಿ ದೆಹಲಿಯೂ ಅದ್ಭುತವಾದ ಬೀದಿ ಕಲೆಯನ್ನು ಹೊಂದಿದೆ. ಇದು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ.

ದೆಹಲಿಯ ಕೆಲವು ಸುಂದರ ಭಾಗಗಳಲ್ಲಿ ಆವರಿಸಿರುವ ಚಿತ್ರ ಕಲೆಗಳನ್ನು ನೀವು ಕಂಡು ಆನಂದಿಸಬಹುದು.

https://fb.watch/gpTr7Vraee/

ಈ ಬೀದಿ ಕಲೆಯು ಆಹ್ಲಾದಕರವಾಗಿದ್ದು, ಆಶ್ಚರ್ಯವನ್ನುಂಟು ಮಾಡುತ್ತದೆ. ಉತ್ತಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಮಾಡಿಕೊಡುತ್ತದೆ. ದೆಹಲಿಯ ಶಾಹಪುರ್‌ ಜಟ್‌ನ ಇಜಾರದ ನೆರೆಹೊರೆಯ ಬೀದಿಗಳಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.


ನ್ಯೂಯಾರ್ಕ್ ನಗರ, ಅಮೆರಿಕಾ : ವಿಶ್ವದ ಶ್ರೇಷ್ಠ ಸ್ಥಳ ಎಂದೇ ಅಮೆರಿಕಾದ ಈ ನ್ಯೂಯಾರ್ಕ್‌ (New York) ನಗರವನ್ನು ಕರೆಯಲಾಗುತ್ತದೆ. ಬೇರೆಲ್ಲಿಯೂ ಕಂಡು ಕೇಳರಿಯದಂತಹ ಕಲಾ ಪ್ರೇಮಿಗಳಿಗೆ ಈ ದೇಶವು ಪ್ರೋತ್ಸಾಹ ನೀಡುತ್ತದೆ.

ನ್ಯೂಯಾರ್ಕ್‌ ನಗರವು ಪ್ರತಿಭಾವಂತ ಕಲಾವಿದರಿಂದ ತುಂಬಿ ತುಳುಕುತ್ತಿದೆ ಎಂದರೆ ತಪ್ಪಾಗಲಾರದು. ಮುಖ್ಯವಾಗಿ ಇಲ್ಲಿನ ಬೀದಿ ಕಲೆಯು 1980 ರ ದಶಕದಿಂದಲೇ ಜನಪ್ರಿಯತೆ ಗಳಿಸಿತ್ತು.


ಬರ್ಲಿನ್‌, ಜರ್ಮನಿ : ಜರ್ಮನಿಯ (Germany) ವಾಲ್‌ ಆರ್ಟ್‌ ಬರ್ಲಿನ್‌ನಲ್ಲಿ ಐತಿಹಾಸಿಕ ಮಹತ್ವವನ್ನು ಹೊಂದಿರುವ ಚಿತ್ರಗಳನ್ನು ನೀವು ಕಾಣಬಹುದು. ಶೀತಲ ಸಮರದ ದಿನಗಳನ್ನು ನೆನಪಿಸುವ ಬಣ್ಣ ಬಣ್ಣದ ಕಲಾಕೃತಿಗಳನ್ನು ಇಲ್ಲಿನ ಬರ್ಲಿನ್‌ ಗೋಡೆಯಲ್ಲಿ ಕಾಣಬಹುದು.

ಆ ಕಾಲದಲ್ಲಿ ರಾಜಕೀಯ ಪ್ರೇರಿತ ಬೀದಿ ಕಲೆಯು ಗೋಡೆಯ ಮೇಲೆ ಪ್ರಾಬಲ್ಯವನ್ನು ಸಾಧಿಸುತ್ತದೆ. ಈ ನಗರವು ಬೀದಿ ಬದಿಯ ಕಲೆಯನ್ನು ಮಾತ್ರ ಎಂದಿಗೂ ಮರೆತಿಲ್ಲ.


ಲಿಸ್ಬನ್‌, ಪೋರ್ಚುಗಲ್‌ : ಪೋರ್ಚುಗಲ್‌ನ (Portugal) ಸುಂದರವಾದ ಲಿಸ್ಬನ್‌ ಪ್ರವಾಸ ಕೈಗೊಳ್ಳುವಾಗ, ನೀವು ಅದ್ಭುತವಾದ ಬೀದಿ ಕಲೆಗಳನ್ನು ಕಣ್ತುಂಬಿಕೊಳ್ಳುತ್ತೀರಿ.

ಮುಖ್ಯವಾಗಿ ನಗರದ ಬೈರೋ ಆಲ್ಟೊ ನೆರೆಹೊರೆಯಲ್ಲಿ ಕೆಲವು ಅತ್ಯುತ್ತಮವಾದ ಕಲಾಕೃತಿಗಳನ್ನು ನೋಡಬಹುದು. ಕೇವಲ ಕಲೆ, ಸಾಹಿತ್ಯವನ್ನು ಹೊಂದಿರುವ ಗ್ರಾಸಾ ಸಾಹಿತ್ಯಿಕ ನಡಿಗೆ ಕೂಡ ಇದೆ.

https://fb.watch/gq4NX1StpD/ ಪ್ರಧಾನಿಯಾದ ಬಳಿಕ ಮಾತನಾಡಿದ ರಿಷಿ ಸುನಕ್ ಅವರು ಹೇಳಿದ್ದೇನು ಗೊತ್ತಾ?


ಬೊಗೋಟ, ಕೊಲಂಬಿಯಾ : ಕೊಲಂಬಿಯಾ (Columbia) ದೇಶದ ಬೊಗೋಟ ನಗರವು ಅತ್ಯಂತ ಸುಂದರವಾಗಿದೆ. ಈ ನಗರದ ಸೌಂದರ್ಯವು ವಿಶ್ವಪ್ರಸಿದ್ಧವಾಗಿದೆ. ಇದಕ್ಕೆ ಮತ್ತೊಂದು ಪ್ರಮುಖವಾದ ಕಾರಣವೆಂದರೆ ನಗರದ ಬೀದಿ ಕಲಾಕೃತಿಗಳು.

ಈ ಬೊಗೋಟ ನಗರದಲ್ಲಿ ಬೀದಿ ಕಲಾಕೃತಿಗಳನ್ನು ನೋಡಲು ಸೂಕ್ತವಾದ ತಾಣವೆಂದರೆ, ಅದು ಕ್ಯಾಂಡೆಲೇರಿಯಾ ಮತ್ತು ಸ್ಕಿನ್ನಿ ಯುನಿವರ್ಸಲ್‌ ಆಗಿದೆ.

Exit mobile version