ಸ್ಯಾನಿಟರಿ ಪ್ಯಾಡ್ ಉಚಿತವಾಗಿ ನೀಡಬೇಕು ಎಂದು ಧ್ವನಿ ಎತ್ತಿದ್ದ ವಿದ್ಯಾರ್ಥಿನಿಗೆ ಒಲಿದು ಬಂತು ಜಾಹೀರಾತು ಆಫರ್!

sanitary pads

Bihar : ಕಳೆದ ಕೆಲ ದಿನಗಳ ಹಿಂದೆ ಬಿಹಾರದಲ್ಲಿ(Bihar) ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಬಳಿ ನಮಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ (Sanitary Pad) ನೀಡಿ ಎಂದು ಕೇಳಿದ್ದಕ್ಕೆ,

ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ವಿದ್ಯಾರ್ಥಿನಿ ರಿಯಾ ಕುಮಾರಿ ಅವರಿಗೆ ಸದ್ಯ ಸ್ಯಾನಿಟರಿ ಪ್ಯಾಡ್ ಕಂಪನಿಯೊಂದರಿಂದ ಜಾಹೀರಾತು (Advertisment) ಆಫರ್ ಒಲಿದು ಬಂದಿದೆ.

ಪದವಿಯವರೆಗಿನ ಆಕೆಯ ವ್ಯಾಸಂಗದ ವೆಚ್ಚವನ್ನೂ ಕೂಡ ಕಂಪನಿಯೇ ಭರಿಸಲಿದೆ ಎಂಬ ಸಂಗತಿ ಮತ್ತಷ್ಟು ವಿಶೇಷ.

ಪಾಟ್ನಾದ ಕಮಲಾ ನೆಹರು ನಗರದಲ್ಲಿ ವಾಸಿಸುತ್ತಿರುವ ರಿಯಾ ಅವರಿಗೆ ಸ್ಯಾನಿಟರಿ ಪ್ಯಾಡ್ ಕಂಪನಿಯಿಂದ (Student gets sanitary pads ad offer) ಕಂಪನಿಯ ವಾಣಿಜ್ಯ ಜಾಹೀರಾತು ಮಾಡಲು ಆಫರ್ ಬಂದಿದೆ.

https://youtu.be/RiCI99tzyJs

ಬಿಹಾರ್‌ ಟಕ್ ಜೊತೆಗಿನ ಸಂವಾದದಲ್ಲಿ, ಕಂಪನಿಯು ಒಂದು ವರ್ಷದವರೆಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ ಎಂದು ರಿಯಾ ಖುದ್ದಾಗಿ ಹೇಳಿದ್ದಾರೆ.

ಕಂಪನಿಯ ವಾಣಿಜ್ಯ ಜಾಹೀರಾತಿಗೆ (Student gets sanitary pads ad offer)ಸೇರುವ ಪ್ರಸ್ತಾಪವನ್ನು ನೀಡುವುದರ ಜೊತೆಗೆ ಪದವಿಯವರೆಗಿನ ಶಿಕ್ಷಣದ ವೆಚ್ಚವನ್ನು ಕೂಡ ಸಂಸ್ಥೆಯೇ ಭರಿಸುವುದಾಗಿ ಆಕೆಗೆ ಭರವಸೆ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/pets-should-be-there-in-home/

ಬಿಹಾರತಕ್ ಜೊತೆಗಿನ ವಿಶೇಷ ಸಂವಾದದಲ್ಲಿ, ರಿಯಾ ಅವಧಿಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಅಗತ್ಯವನ್ನು ಮನಬಿಚ್ಚಿ ಮಾತನಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ರಿಯಾ, ಮೊದಲು ಜನರು ಇದನ್ನು ಬಹಿರಂಗವಾಗಿ ಚರ್ಚಿಸುತ್ತಿರಲಿಲ್ಲ, ಆದರೆ ಈಗ ನಾವು ಮನೆ ಮನೆಗೆ ಹೋಗಿ ಅದರ

ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇವೆ ಮತ್ತು ಅವಧಿಯನ್ನು ಮರೆಮಾಡಲು ಸಾಧ್ಯವಿಲ್ಲ ಆದರೆ ಸ್ಯಾನಿಟರಿ ಪ್ಯಾಡ್‌ಗಳಿಂದ ಹೊರಬರಬಹುದು ಎಂದು ರಿಯಾ ಹೇಳಿದರು.

ಬುಧವಾರ ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಲಾ ಬಾಲಕಿಯರು ಪರ ಮಾತನಾಡಿದ ರಿಯಾ, ಐಎಎಸ್‌ ಅಧಿಕಾರಿ ಬಳಿ ತಮಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡುವಂತೆ ಮನವಿ ಮಾಡಿದ್ದರು.

ಇದಕ್ಕೆ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಅಧಿಕಾರಿ ಹರ್ಜೋತ್ ಕೌರ್, “ಇಂದು ನೀವು ಸ್ಯಾನಿಟರಿ ಪ್ಯಾಡ್‌ಗಳನ್ನು ಕೇಳುತ್ತಿದ್ದೀರಿ,

ನಾಳೆ ನೀವು ಕಾಂಡೋಮ್‌ಗಳನ್ನು ಕೇಳುತ್ತೀರಿ” ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು.

Exit mobile version