ನೆಹರು, ವಾಜಪೇಯಿಯವರ ಮೂರ್ಖತನದಿಂದ ಭಾರತೀಯರು ಟಿಬೆಟ್, ತೈವಾನ್ ಅನ್ನು ಚೀನಾಕ್ಕೆ ಬಿಟ್ಟುಕೊಟ್ಟರು : ಸುಬ್ರಮಣಿಯನ್ ಸ್ವಾಮಿ

Subramanian swamy

ನವದೆಹಲಿ : ಮಾಜಿ ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (BJP) ನಾಯಕ ಸುಬ್ರಮಣಿಯನ್ ಸ್ವಾಮಿ(Subramanian Swamy) ಅವರು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee) ಅವರು ಚೀನಾ(China) ವಿಚಾರವಾಗಿ ತೆಗೆದುಕೊಂಡ ನಿಲುವುಗಳನ್ನು ಟೀಕಿಸಿದರು. ಜವಾಹರಲಾಲ್ ನೆಹರು(Jawaharlal Nehru) ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದ, ಭಾರತೀಯರು ಟಿಬೆಟ್(Tibet) ಮತ್ತು ತೈವಾನ್(Taiwaan) ಅನ್ನು ಚೀನಾದ ಭಾಗವೆಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.


ಈಗ ಚೀನಾ, ಅಂದು ಭಾರತ-ಚೀನಾ(India-China) ಪರಸ್ಪರ ಒಪ್ಪಿದ ಎಲ್ಎಸಿಯನ್ನು ಸಹ ಗೌರವಿಸುವುದಿಲ್ಲ ಮತ್ತು ಲಡಾಖ್ನ(Ladakh) ಕೆಲವು ಭಾಗಗಳನ್ನು ವಶಪಡಿಸಿಕೊಂಡಿದೆ. ಇದೇ ವೇಳೆ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ(Narendra Modi) ವಿರುದ್ಧವೂ ವಾಗ್ದಾಳಿ ನಡೆಸಿದ ಸುಬ್ರಮಣಿಯನ್ ಸ್ವಾಮಿ, ಚೀನಾ ಲಡಾಖ್ನ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದೆ, ಆದರೆ ಮೋದಿ “ಕೋಯಿ ಆಯಾ ನಹೀ” ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದಾಗಿ ನಾವು ಭಾರತೀಯರು ಟಿಬೆಟ್ ಮತ್ತು ತೈವಾನ್ ಅನ್ನು ಚೀನಾದ ಭಾಗವೆಂದು ಒಪ್ಪಿಕೊಂಡಿದ್ದೇವೆ.

ಇದೊಂದು ಐತಿಹಾಸಿಕ ಪ್ರಮಾದವಾಗಿದ್ದು, ಇದರಿಂದ ಇಂದಿಗೂ ಭಾರತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೆಲ ದಿನಗಳ ಹಿಂದೆ ಸುಬ್ರಮಣಿಯನ್ ಸ್ವಾಮಿ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ್ದರು. ಮೋದಿಯವರ ವಿದೇಶಾಂಗ ನೀತಿ ಪರಿಣಾಮಕಾರಿಯಾಗಿಲ್ಲ. ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಸಾಧಿಸುವಲ್ಲಿ ಮೋದಿ ವಿಫಲರಾಗಿದ್ದಾರೆ. ಮೋದಿ ಐರೋಪ್ಯ ದೇಶಗಳ ಕಡೆಗೆ ಹೆಚ್ಚು ವಾಲುತ್ತಿರುವುದು ಸರಿಯಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಆಭಿಪ್ರಾಯಪಟ್ಟಿದ್ದರು.

Exit mobile version