ಕಿಚ್ಚ ಸುದೀಪ್, ಬೊಮ್ಮಾಯಿ ಪರ ಕ್ಯಾಂಪೇನ್ ; ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ

Haveri : ರಾಜ್ಯ ವಿಧಾನಸಭಾ ಚುನಾವಣಾ (State Assembly Elections) ಕಣ ರಂಗೇರುತ್ತಿದೆ. ಪ್ರಚಾರ ಭರಾಟೆ ಹೆಚ್ಚುತ್ತಿದೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಆಗಿರುವುದರಿಂದ ನಾಮಪತ್ರ (Sudeep campaign for Bommai) ಸಲ್ಲಿಕೆ ಭರಾಟೆ ಕೂಡ ಜೋರಾಗಿದೆ.

ಹೀಗಾಗಿ ಹೈವೋಲ್ಟೇಜ್ ಕ್ಷೇತ್ರವಾದ ಸಿಎಂ ಬಸವರಾಜ ಬೊಮ್ಮಾಯಿಯ (CM Basavaraja Bommai) ಹಾವೇರಿಯ

ಶಿಗ್ಗಾಂವಿ ಕ್ಷೇತ್ರಕ್ಕೆ ನಟ ಕಿಚ್ಚ ಸುದೀಪ್ ಆಗಮಿಸಲಿದ್ದಾರೆ. ಬೊಮ್ಮಾಯಿ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು ಸುದೀಪ್ ಆಗಮನ ಬೊಮ್ಮಾಯಿಗೆ ಬಲವನ್ನು ತಂದುಕೊಡಲಿದೆ.


ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (BJP National President JP Nadda), ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ 10ಕ್ಕೂ ಹೆಚ್ಚಿನ ಸಚಿವರು ಭಾಗವಹಿಸಲಿದ್ದಾರೆ.

ಜೊತೆಗೆ ಹಲವು ಸಿನಿ ತಾರೆಯರು ಕೂಡ ಭಾಗಿಯಾಗಲಿದ್ದಾರೆ. ನಾಮಪತ್ರ ಸಲ್ಲಿಕೆ ಮುಗಿದ ಬಳಿಕ ಸುದೀಪ್‌ ಅವರು ರಾಜ್ಯಾದ್ಯಂತ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ : https://vijayatimes.com/state-high-court-order/


ಕಿಚ್ಚ ಸುದೀಪ್ (Kiccha Sudeep) ಶಿಗ್ಗಾಂವಿಯ ನಗರದ ಕೆಲವು ಪ್ರಮುಖ ಬೀದಿಗಳಲ್ಲಿ 1 ಗಂಟೆ 15 ನಿಮಿಷಗಳ (Sudeep campaign for Bommai) ಕಾಲ ರೋಡ್ ಶೋ ನಡೆಸಲಿದ್ದಾರೆ.

ಪಟ್ಟಣದ ಸಂತೆ ಮೈದಾನದಿಂದ ಬೃಹತ್ ರೋಡ್ ಶೋ ಪ್ರಾರಂಭ ಆಗಲಿದೆ.


ಸುದೀಪ್ ಪ್ರಚಾರದಿಂದ ಬೊಮ್ಮಾಯಿಗೆ ಯಾವ ರೀತಿ ಲಾಭ ತರಲಿದೆ?

ಅಭಿಮಾನಿಗಳ ಹಾಗೂ ವಾಲ್ಮೀಕಿ ಸಮುದಾಯದ ಮತ ವೋಟ್ ಬಿಜೆಪಿ (bjp) ಪರ ವಾಲುತ್ತದೋ ಇಲ್ಲವೋ ಅನ್ನೋದು ಇದೀಗ ಕಾದು ನೋಡಬೇಕಾಗಿದೆ.

ಹೀಗೆ ನೂರೆಂಟು ಲೆಕ್ಕಾಚಾರ ನಟ ಸುದೀಪ್ ಪ್ರಚಾರದಿಂದ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.


ಬೊಮ್ಮಾಯಿಯವರ ಬ್ಲೂ ಪ್ರಿಂಟ್‌ ಪ್ರಕಾರ ಕಿಚ್ಚ ಸುದೀಪ್‌ ಪ್ರಚಾರ :

ಈ ಹಿಂದೆ ನನ್ನ ಸ್ನೇಹಿತರ ಪರವಾಗಿ ಪ್ರಚಾರ ಮಾಡಿದ್ದೆ ಅದರೆ ಈಗ ಶಿಗ್ಗಾಂವಿ ಕ್ಷೇತ್ರದಿಂದ ಪ್ರಾರಂಭಗೊಂಡು ಸಿಎಂ ಬೊಮ್ಮಾಯಿ ಹೇಳಿದ ಕಡೆ ನಾನು ಪ್ರಚಾರ ಮಾಡುತ್ತೇನೆ ಎಂದು ನಟ ಕಿಚ್ಚ ಸುದೀಪ್‌ ಹೇಳಿಕೊಂಡಿದ್ದಾರೆ.

ಪಾದಯಾತ್ರೆ, ರೋಡ್‌ ಶೋ ಎಲ್ಲವನ್ನೂ ನಡೆಸಲಾಗುತ್ತದೆ,

ಚುನಾವಣಾ ಪ್ರಚಾರ ನನಗೇನೂ ಹೊಸತಲ್ಲ.ಹೇಗೆ ಪ್ರಚಾರ ನಡೆಸಬೇಕು, ಯಾರ ಪರವಾಗಿ ನಡೆಸಬೇಕು ಎಂದೆಲ್ಲ ಬೊಮ್ಮಾಯಿಯವರ ಟೀಂನಿಂದ ಬ್ಲೂ ಪ್ರಿಂಟ್‌ (Blue print) ಸಿದ್ದವಿದೆ. ಅದರಂತೆ ಮೇ 7ರ ವರೆಗೆ ಪ್ರಚಾರ ನಡೆಸಲಾಗುವುದು ಎಂದು ಹೇಳಿದ್ದಾರೆ.

Exit mobile version