ಜೈಲಿನಿಂದಲೇ ಹೋಳಿ ಹಬ್ಬಕ್ಕೆ ನಟಿ ಜಾಕ್ವಲಿನ್‌ಗೆ ಶುಭಕೋರಿದ ಆರೋಪಿ ಸುಕೇಶ್!‌

Mumbai : ಬಾಲಿವುಡ್‌ ನಟಿ ಜಾಕ್ವಲಿನ್‌ ಫರ್ನಾಂಡಿಸ್‌ಗೆ (Jacqueline Fernandez) ತಿಹಾರ್‌ ಜೈಲಿನಲ್ಲಿರುವ ಆರೋಪಿ ಸುಕೇಶ್‌ ಚಂದ್ರಶೇಖರ್‌(Sukesh Chandrasekhar) ಪತ್ರ ಬರೆಯುವ ಮುಖೇನ ಹೋಳಿ (sukesh wishes to jacqueline) ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಶುಭಕೋರಿದ ಪತ್ರದಲ್ಲಿ ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ಪ್ರಾರಂಭಿಸಿದ ಸುಕೇಶ್, ಮೊದಲಿಗೆ ತಮ್ಮ ಕುಟುಂಬ, ಮಾಧ್ಯಮ ಸ್ನೇಹಿತರು,

ಬೆಂಬಲಿಗರು, ಹಿತೈಷಿಗಳು ಮತ್ತು ಶತ್ರುಗಳಿಗೆ ಶುಭಾಶಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದಲ್ಲದೇ ತಮ್ಮ ವಿಚಾರವನ್ನು ಬಹಿರಂಗ ಪಡಿಸಿದ ಮಾಧ್ಯಮಗಳಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.

ನನ್ನ ಕಾನೂನು ತಂಡಕ್ಕೆ ಹೋಳಿ ಹಬ್ಬದ ಶುಭಾಶಯಗಳು. ಈ ಬಣ್ಣದ ಹಬ್ಬದಲ್ಲಿ ದೇವರು ನಿಮ್ಮೆಲ್ಲರ ಬದುಕನ್ನು ಈ ವರ್ಷ ಗಾಢ ಬಣ್ಣಗಳಿಂದ ತುಂಬಿಸಲಿ.

ನನ್ನ ರಾಜಕುಮಾರಿಗೆ ಹೋಳಿ ಹಬ್ಬದ ವಿಶೇಷ ಶುಭಾಶಯಗಳು. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅದ್ಭುತ ಹ್ಯೂಮನ್‌ ಬೀಯಿಂಗ್(Human Being), ಸದಾ ಸುಂದರಿಯಾಗಿರುವ ಜಾಕ್ವೆಲಿನ್‌ಗೆ ನಾನು ಹೋಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

https://youtu.be/gxX0qsV8gFY

ಈ ದಿನ, ಬಣ್ಣಗಳ ಹಬ್ಬ, ನಾನು ನಿಮಗೆ ಭರವಸೆ ನೀಡುತ್ತೇನೆ, ಮರೆಯಾದ ಅಥವಾ ಕಣ್ಮರೆಯಾದ ಬಣ್ಣಗಳನ್ನು(sukesh wishes to jacqueline) 100 ಪಟ್ಟು ಹೆಚ್ಚಿಸುವ ಕೆಲಸ ನನ್ನದು.

ಈ ವರ್ಷ ಸಾಕಷ್ಟು ಹೊಳಪಿನಲ್ಲಿ ಕಾಣುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಇದನ್ನು ಖಚಿತಪಡಿಸಿಕೊಳ್ಳುತ್ತೇನೆ.

ನಿನಗೆ ಗೊತ್ತು, ನಿನಗೋಸ್ಕರ ನಾನು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲೆ ಎಂದು. ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಮಗುವೇ, ನಗುತ್ತಿರು.

ನಿನಗೆ ಗೊತ್ತಿದೆ ನಾನು ನಿನಗೆ ಏನು? ಏನೆಲ್ಲಾ ಎಂದು.

ಲವ್ ಯು ಮೈ ಪ್ರಿನ್ಸೆಸ್, ಮಿಸ್ ಯು ಲೋಡ್ಸ್, ಮೈ ಹನಿಬೀ. ನನ್ನ ಬೊಮ್ಮ. ನನ್ನ ಒಲವೆ. ನನ್ನ ಜಾಕಿ ಎಂದೆಲ್ಲಾ ಬರೆದು ಶುಭಕೋರಿದ್ದಾರೆ.

ಸದ್ಯ 200 ಕೋಟಿ ಹಣ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಕೇಶ್‌ ಚಂದ್ರಶೇಖರ್‌(Sukesh Chandrasekhar) ಇದೀಗ ತಿಹಾರ್‌ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದು,

ಜೈಲಿನೊಳಗೆ ಇದ್ದುಕೊಂಡು ನಟಿ ಜಾಕ್ವಲಿನ್‌ ಫರ್ನಾಂಡೀಸ್‌ ಅವರಿಗೆ ಪತ್ರ ಬರೆಯುವ ಮೂಲಕ ಹೋಳಿ ಹಬ್ಬಕ್ಕೆ ಶುಭಕೋರಿದ್ದಾರೆ.

ಈ ಹಿಂದೆಯೂ ಇದೇ ರೀತಿ ವ್ಯಾಲೆಂಟೈನ್‌ (Valentine) ದಿನಕ್ಕೆ ಕೂಡ ಶುಭಕೋರಿದ್ದರು. ಈ ಸಂಗತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡಿತ್ತು.

Exit mobile version