Viral : ಫೋಟೋಗಾಗಿ ಸುನಿಲ್ ಛೇತ್ರಿಯನ್ನು ಪಕ್ಕಕ್ಕೆ ತಳ್ಳಿದ ಗರ್ವನರ್ ; ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಟೀಕೆ, ವೀಡಿಯೋ ವೈರಲ್!

Football
Manipur : ಭಾನುವಾರ ಕೋಲ್ಕತ್ತಾದ (Calcutta) ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ (Salt Talk Stadium) ನಡೆದ ಆಕರ್ಷಕ ಶೃಂಗಸಭೆಯಲ್ಲಿ ಮುಂಬೈ ಸಿಟಿ ಎಫ್‌ಸಿಯನ್ನು 2-1 ಗೋಲುಗಳಿಂದ ಸೋಲಿಸಿ,

ಪ್ರತಿಷ್ಠಿತ ಡ್ಯುರಾಂಡ್ ಕಪ್ ಅನ್ನು ಗೆಲ್ಲುವ ಮೂಲಕ ಬೆಂಗಳೂರುಎಫ್‌ಸಿ ಅಂತಿಮವಾಗಿ ಫುಟ್‌ಬಾಲ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.

ಈ ವಿಜಯವು ಈ ಹಿಂದೆ ಐ-ಲೀಗ್ (2014 ಮತ್ತು 2016), ಫೆಡರೇಶನ್ ಕಪ್ (2015 ಮತ್ತು 2017), ಸೂಪರ್ ಕಪ್ (2018) ಮತ್ತು

ಇಂಡಿಯನ್ ಸೂಪರ್ ಲೀಗ್ (2019) ನಲ್ಲಿ ಟ್ರೋಫಿಗಳನ್ನು ಎತ್ತಿ ಹಿಡಿದಿರುವ ಸೈಮನ್ ಗ್ರೇಸನ್ ಅವರ ತಂಡಕ್ಕೆ ಒಂದು ಸೆಟ್ ಪೂರ್ಣಗೊಂಡಿದೆ.

ಆದಾಗ್ಯೂ, ಬೆಂಗಳೂರು ಎಫ್‌ಸಿಗೆ ಸ್ಮರಣೀಯ ಗೆಲುವು ಒಂದೆಡೆಯಾದರೆ, ಪಶ್ಚಿಮ ಬಂಗಾಳದ (West Bengal) ಗವರ್ನರ್ (Governer) ಲಾ. ಗಣೇಶನ್ ಅಯ್ಯರ್ (Ganeshan Ayyar) ಅವರು

https://vijayatimes.com/homeremedies-for-beautiful-face/

ಟ್ರೋಫಿ ಕೊಡುವ ವೇಳೆ ಸುನೀಲ್ ಛೇತ್ರಿಯವರೊಂದಿಗೆ(Sunil Chetri) ನಡೆದುಕೊಂಡ ರೀತಿ ಸಾಕಷ್ಟು ಫುಟ್‌ಬಾಲ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

https://fb.watch/fBre46TKSO/

ಪುಟ್ಬಾಲ್ ತಂಡದ ನಾಯಕ ಸುನೀಲ್ ಛೇತ್ರಿಯವರು ವೇದಿಕೆ ಮೇಲೆ ಹೋಗಿ ಪ್ರಶಸ್ತಿ ಸ್ವೀಕಾರ ಮಾಡುವ ಸಮಯದಲ್ಲಿ,

ಗರ್ವನರ್ ಗಣೇಶನ್ ಅಯ್ಯರ್ ತಾವು ಫೋಟೋದಲ್ಲಿ ಕಾಣಿಸುವುದಿಲ್ಲ ಎಂದು ಸುನೀಲ್ ಛೇತ್ರಿಯವರನ್ನು ಪಕ್ಕಕ್ಕೆ ತಳ್ಳಿದ್ದಾರೆ.

ಇದನ್ನು ಹಲವರು ವಿರೋಧಿಸಿ, ಒಬ್ಬ ಕ್ರೀಡಾಪಟುವಿಗೆ, ಸಾಧಕರಿಗೆ ಮೊದಲು ಗೌರವ ಕೊಡುವುದನ್ನು ಕಲಿಯಿರಿ ಎಂದು ಹೇಳುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಒಂದು ಫೋಟೋಗಾಗಿ ಗರ್ವನರ್ ಗಣೇಶನ್ ಅಯ್ಯರ್, ಬೆಂಗಳೂರು ಫುಟ್ಬಾಲ್ ನಾಯಕ ಸುನಿಲ್ ಛೇತ್ರಿ ಅವರನ್ನು ಪಕ್ಕಕ್ಕೆ ತಳ್ಳಿದ ವೀಡಿಯೊ (Video) ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ಭಾರಿ ವೈರಲ್(Viral) ಆಗಿದೆ.

ಪಂದ್ಯದ ನಂತರ ಟ್ರೋಫಿ ಪ್ರಧಾನ ಸಮಾರಂಭದ ವೇಳೆ ಈ ಘಟನೆ ನಡೆದಿದ್ದು, ಸುನೀಲ್ ಛೇತ್ರಿ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಪಶ್ಚಿಮ ಬಂಗಾಳ ಗರ್ವನರ್ ಗಣೇಶನ್ ಅಯ್ಯರ್ ವಿರುದ್ಧ ಕಿಡಿಕಾರಿದ್ದು, ಒಬ್ಬ ಕ್ರೀಡಾಪಟುವಿಗೆ ತೋರಬೇಕಾದ ಗೌರವ ನೀವು ನೀಡಿಲ್ಲ!

https://twitter.com/naikrakesh/status/1571678779143233536?s=20&t=fapy8Ga9aNW4EQr1WyEsqQ

ನಿಮ್ಮ ತಪ್ಪಿಗೆ ಕೂಡಲೇ ಕ್ಷಮೆಯಾಚಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಈ ಒಂದು ಘಟನೆ ಸಂಭವಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫುಟ್ಬಾಲ್ ಅಭಿಮಾನಿಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
Exit mobile version