ಐಪಿಎಲ್‌: ಮತ್ತೆ ಮುಗ್ಗರಿಸಿದ ಪಂಜಾಬ್‌: ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್‌ ಹೈದ್ರಾಬಾದ್

ಚೆನ್ನೈ, ಏ. 22: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂಜಾಬ್‌ ಕಿಂಗ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಸನ್‌ರೈಸರ್ಸ್‌ ಹೈದ್ರಾಬಾದ್‌, 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆಯಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಪಂಜಾಬ್‌, ಬ್ಯಾಟ್ಸಮನ್‌ಗಳ ನೀರಸ ಪ್ರದರ್ಶನದಿಂದ 19.4 ಓವರ್‌ಗಳಲ್ಲಿ 120 ರನ್‌ಗಳಿಸಿ ಆಲೌಟ್‌ ಆಯಿತು. ಈ ಸವಾಲು ಬೆನ್ನತ್ತಿದ ಹೈದ್ರಾಬಾದ್‌, ಆರಂಭಿಕರಾದ ಜಾನಿ ಬೈರ್ಸ್ಟೋವ್‌ 63(56) ಹಾಗೂ 37(37) ಹಾಗೂ ವಿಲಿಯಂಸನ್‌ 16(19) ಅವರುಗಳ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ 18.4 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 121 ರನ್‌ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಪಂಜಾಬ್‌, ಎದುರಾಳಿ ಬೌಲಿಂಗ್‌ ದಾಳಿಗೆ ತತ್ತರಿಸಿತು. ನಾಯಕ ರಾಹುಲ್‌ 4, ಮಯಾಂಕ್‌ ಅಗರ್ವಾಲ್‌ 22, ಕ್ರಿಸ್‌ ಗೇಯ್ಲ್‌ 15, ಪೂರನ್‌ 0, ಹೂಡ 13, ಹೆನ್ರಿಕ್ಸ್‌ 14, ಶಾರೂಕ್‌ ಖಾನ್‌ 22 ಸೇರಿದಂತೆ ಪ್ರಮುಖ ಬ್ಯಾಟ್ಸಮನ್‌ಗಳು ಬ್ಯಾಟಿಂಗ್‌ ವೈಫಲ್ಯಕ್ಕೆ ಅನುಭವಿಸಿದರು. ಹೈದ್ರಾಬಾದ್‌ ಪರ ಖಲೀಲ್‌ ಅಹ್ಮದ್‌ 3, ಅಭಿಷೇಕ್‌ ಶರ್ಮಾ 2 ವಿಕೆಟ್‌ ಪಡೆದು ಮಿಂಚಿದರು.

Exit mobile version