ಸುಪ್ರೀಮ್‌ ಕೋರ್ಟ್‌ ಆಜ್ಞೆ ಎಂದಿಗೂ ಸರ್ವೋಚ್ಛ ಕಾನೂನು; ಟ್ವಿಟ್ಟರ್‌ಗೆ ಎಚ್ಚರಿಕೆ ನೀಡಿದ ಅಶ್ವಿನ್‌ ವೈಷ್ಣವ್‌

ನವದೆಹಲಿ, ಜು. 08: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ನೂತನ ಮಾಹಿತಿ ತಂತ್ರಜ್ಞಾನ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಟ್ವೀಟರ್ ಗೆ ಎಚ್ಚರಿಕೆ ನೀಡಿದ್ದು, ದೇಶದ ಸರ್ವೊಚ್ಛ ಕಾನೂನನ್ನು ಪಾಲಿಸಲೇಬೇಕು ಎಂದು ತಿಳಿಸಿದ್ದಾರೆ.

ನೂತನ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಅನುಸರಿಸಲು ಟ್ವಿಟರ್ ಕೇಂದ್ರ ಸರ್ಕಾರದ ಜತೆ ಜಿದ್ದಾಜಿದ್ದಿಗೆ ಬಿದ್ದಿರುವ ನಡುವೆಯೇ ನೂತನ ಸಚಿವ ವೈಷ್ಣವ್ ಈ ಎಚ್ಚರಿಕೆಯನ್ನು ನೀಡಿದ್ದಾರೆ. ಮುಖ್ಯವಾಗಿ ಭಾರತದ ಬಳಕೆದಾರರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣವಾದ ಟ್ವಿಟರ್ ಕುಂದು ಕೊರತೆ ಇತ್ಯರ್ಥಪಡಿಸುವ ಅಧಿಕಾರಿಯನ್ನು ನೇಮಕ ಮಾಡಿಲ್ಲವಾಗಿತ್ತು.

ದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೈಷ್ಣವ್, ಭಾರತದಲ್ಲಿ ವಾಸಿಸುವವರು ಮತ್ತು ಕಾರ್ಯನಿರ್ವಹಿಸುವವರು ಈ ದೇಶದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ಜಾರಿಗೊಳಿಸಿರುವ ನೂತನ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ಕಡ್ಡಾಯವಾಗಿ ಪಾಲಿಸಲೇಬೇಕು. ಐಟಿ ಕಾಯ್ದೆಯನ್ನು ಅನುಸರಿಸದೇ ಇರುವುದು ಐಟಿ ನಿಯಮಗಳ ಪಾಲನೆ ಉಲ್ಲಂಘಟನಯಾಗಲಿದೆ. ಇದರ ಪರಿಣಾಮ ಐಟಿ ಕಾಯ್ದೆ 2000, ಸೆಕ್ಷನ್ 79(01)ರ ಅನ್ವಯ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಲಿದೆ ಎಂದು ಹೇಳಿದರು.

Exit mobile version