ಅಧಿಕಾರಿಗಳ ಭರವಸೆ ಸೋತರು, ತಾನು ಸೋಲದೆ ಸುಟ್ಟುಹೋಗಿದ್ದ ಗ್ರಂಥಾಲಯವನ್ನು ಮರು ನಿರ್ಮಾಣ ಮಾಡಿದ ಮೈಸೂರಿನ ಈ ವ್ಯಕ್ತಿ.!

syed library

ಮೋಹನ್ ಶೆಟ್ಟಿ

ಕಳೆದ  ವರ್ಷ ಅಗ್ನಿಅವಘಡಕ್ಕೆ ತಮ್ಮದೊಂದು ಗ್ರಂಥಾಲಯ ಸಂಪೂರ್ಣ ಸುಟ್ಟು ಅದರೊಳಗಿದ್ದ ಅನೇಕ ಪುಸ್ತಕ ಭಂಡಾರಗಳು ಸುಟ್ಟು ಹೋಗಿದ್ದು, ಬಳಿಕ ಯಾವ ಸಹಾಯವೂ ದೊರೆಯದೆ ಗ್ರಂಥಾಲಯವನ್ನು ಪುನರ್ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ.! ಆದರೆ ಈಗ ಯಾವ ರಾಜಕಾರಣಿಗಳ ಹಾಗೂ ಅಧಿಕಾರಿಗಳ ನೆರವು ಪಡೆಯದೆ, ಸತತ ಪರಿಶ್ರಮದಿಂದ ಯಾವುದಕ್ಕೂ ಕೂಡ ಅಂಜದೆ, ಅಳುಕದೆ, ಎದೆಗುಂದದೆ ತಮ್ಮ ಕನಸಿನ ತುಡಿತ, ಜೀವನದ ಬವಣೆಯನ್ನು ಪುನರ್ ನಿರ್ಮಿಸುವಲ್ಲಿ ಮೈಸೂರಿನ ಸೈಯದ್‌ ಇಶಾಕ್ ಯಶಸ್ವಿಯಾಗಿದ್ದಾರೆ. ಇಷ್ಟಕ್ಕೂ ಸೈಯದ್‌ ಇಶಾಕ್‌ಅವರಿಗೆ ಎದುರಾದ ಸಮಸ್ಯೆ ಏನು ಎಂಬುದನ್ನು ತಿಳಿಯಲು ಮುಂದೆ ಓದಿ.

ಕಳೆದ ವರ್ಷ ಬೆಂಕಿ ಅವಘಡದಲ್ಲಿ ಲೈಬ್ರರಿ ಸುಟ್ಟು ಕರಕಲಾಗಿತ್ತು ಆದರೆ ಸೈಯದ್‌ ಇದಕ್ಕೆ ಅಂಜದೆ ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಗ್ರಂಥಾಲಯವನ್ನು ಪುನರ್‌ ನಿರ್ಮಿಸಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ಜನವರಿ 26ರಿಂದ ಗ್ರಂಥಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ  ತೆರೆಯಲಾಗುವುದು ಎಂದು ಸೈಯದ್‌ ತಿಳಿಸಿದ್ದಾರೆ . ಇಶಾಕ್ ಅವರು 4 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡವನ್ನು ನಿರ್ಮಿಸಿದ್ದಾರೆ. ಸ್ಥಳೀಯ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯ ಮಕ್ಕಳಿಂದ ಕಟ್ಟಡವನ್ನು ಉದ್ಘಾಟನೆ ಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರಸ್ತುತ ಈ ಗ್ರಂಥಾಲಯದಲ್ಲಿ 1800  ಪುಸ್ತಕಗಳನ್ನುಇರಿಸುವಲ್ಲಿ ಯಶಸ್ವಿಯಾಗಿದ್ದು, ಮೈಸೂರು ವಿಶ್ವವಿದ್ಯಾಲಯದ  ಪ್ರಾಧ್ಯಾಪಕರು  6500 ಪುಸ್ತಕಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸೈಯದ್‌ ತಿಳಿಸಿದ್ದಾರೆ . ಏಪ್ರಿಲ್ 9, 2021 ರಂದು  ಭಗವದ್ಗೀತೆ ಮತ್ತು ಕುರಾನ್‌ ಕನ್ನಡ ಪ್ರತಿಗಳು ಸೇರಿದಂತೆ ಸಾವಿರಾರು  ಪುಸ್ತಕಗಳನ್ನು ಭಾರಿಬೆಂಕಿಗೆ ಆಹುತಿಯಾಗಿತ್ತು. ಘಟನೆಯ ನಂತರ, ಮೈಸೂರು ನಗರ ಪಾಲಿಕೆಯು ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯ ಸಹಯೋಗದೊಂದಿಗೆ ಗ್ರಂಥಾಲಯವನ್ನು ಮರುನಿರ್ಮಾಣ ಮಾಡಲು ನಿರ್ಧರಿಸಿತು

ಆದರೆ ಅಧಿಕಾರಿಗಳು ಭರವಸೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಸೈಯದ್‌ ದಾನಿಗಳ ಬೆಂಬಲದೊಂದಿಗೆ ಗ್ರಂಥಾಲಯವನ್ನು ಮರುನಿರ್ಮಾಣ ಮಾಡಿದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸೈಯದ್,  ಸರ್ಕಾರ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ದಾನಿಗಳ ಸಹಕಾರದಿಂದ ಕಟ್ಟಡ ಪುನರ್‌ ನಿರ್ಮಾಣಮಾಡಿದ್ದೇನೆ. ಕಾಂಗ್ರೆಸ್‌ ಮುಖಂಡ ಜಮೀರ್‌ ಅಹಮದ್‌ಖಾನ್‌  ಅವರು ೨ ಲಕ್ಷರೂ.ಗಳನ್ನು,ಸಂಸದ ಪ್ರತಾಪ್‌ಸಿಂಹ ಅವರು ೫೦ ಸಾವಿರ ರೂ., ಸಚಿವ ಎಸ್.ಟಿ.ಸೋಮಶೇಖರ್ ೨೫,೦೦೦ ರೂ. ಮತ್ತು ಇನ್ನು ಕೆಲವರು ಪುಸ್ತಕಗಳನ್ನು ದಾನವಾಗಿ ನೀಡಿದ್ದು, ಮುಂದಿನ ವಾರದಿಂದ ಓದುಗರು ಮತ್ತದೇ ತಮ್ಮ ನೆಚ್ಚಿನ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿ ಖುಷಿ ಪಡಬಹುದಾಗಿದೆ.

Exit mobile version