ಭಾರತದ ರಫ್ತಿಗೆ ತಾಲಿಬಾನ್ ತಡೆ

ನವದೆಹಲಿ ಆ 19 : ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಹಿನ್ನಲೆಯಲ್ಲಿ ಭಾರತ ಮತ್ತು ಅಫ್ಘಾನ್ ನಡುವಿನ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ಭಾರತವು ಅಫ್ಘಾನಿಸ್ತಾನಕ್ಕೆ 2021ರಲ್ಲಿ  ಸುಮಾರು 835 ಮಿಲಿಯನ್ ಡಾಲರ್‌ನಷ್ಟು ರಫ್ತನ್ನು ಮಾಡಲಾಗಿದ್ದು ಹಾಗೆ 510 ಮಿಲಿಯನ್ ಡಾಲರ್‌ ಮೌಲ್ಯದ ಸರಕನ್ನು ಆಮದು ಮಾಡಿಕೊಳ್ಳಲಾಗಿದೆ. ಈ ವ್ಯಾಪಾರ ವಹಿವಾಟಿನ ಮಾತ್ರವಲ್ಲದೆ ಭಾರತವು ಅಫ್ಘಾನಿಸ್ತಾನದಲ್ಲಿ ಬೃಹತ್ ಹೂಡಿಕೆ ಮಾಡಲಾಗಿದೆ. ಭಾರತವು ಅಫ್ಘಾನಿಸ್ತಾನದಲ್ಲಿ ಸುಮಾರು ಮೂರು ಶತಕೋಟಿಗೂ ಅಧಿಕ ಡಾಲರ್ ಹೂಡಿಕೆ ಮಾಡಲಾಗಿದೆ. ಭಾರತದ  ಸುಮಾರು 400ರಷ್ಟು ಯೋಜನೆಗಳಿವೆ ಅಫ್ಘಾನಿಸ್ತಾನದಲ್ಲಿದೆ.

ಪ್ರಸ್ತುತ ಭಾರತದಿಂದ ಸಕ್ಕರೆ, ಟೀ ಪೌಡರ್, ಕಾಫಿ, ಸಾಂಬಾರು ಪಧಾರ್ಥಗಳು, ಜವಳಿ ಉತ್ಪನ್ನಗಳು ಹಾಗೂ ಇನ್ನಿತರೆ ಉತ್ಪನ್ನಗಳನ್ನು ಭಾರತವು ರಫ್ತು ಮಾಡುತ್ತಿದ್ದು ಹಾಗೆ ಭಾರತ ಈರುಳ್ಳಿ, ಗೊಂದ ಮತ್ತು ಡ್ರೈಫ್ರೂಟ್ಸ್ ಗಳನ್ನು ಆಮದು ಮಾಡಿಕೊಳ್ಳುತ್ತಿದೆ.  ಭಾರತವು ಸರಿ ಸುಮಾರು 85% ಡ್ರೈಫ್ರೂಟ್ಸ್ ಗಳನ್ನು ಆಮದು ಮಾಡಿಕೊಳ್ಳೂತ್ತಿದೆ

ಇದೀಗ ತಾಲಿಬಾನಿಗಳು ಭಾರತದ ಆಮದು ಮತ್ತು ರಫ್ತಿಗೆ ತಡೆ ಒಡ್ಡಿದ್ದು, ಭಾರತದಿಂದ ಪಾಕಿಸ್ತಾನದ ಮಾರ್ಗದಲ್ಲಿ ನಡೆಯುತ್ತಿದ್ದ ಸರಕು ಸಾಗಣೆಗೆ ತಾಲಿಬಾನ್ ತಡೆಒಡ್ಡಿದೆ. ಹೀಗೆ ಮುಂದುವರಿದ್ದಲ್ಲಿ ಭಾರತವು ಅಫ್ಘಾನಿಸ್ತಾನದಲ್ಲಿ ಮಾಡಿದಂತಹ ಸಾಕಷ್ಟು ಯೋಜನೆಗಳು ಉಪಯೋಗಕ್ಕೆ ಬಾರದೆ ಹಾಗೆ ನಶಿಸಿಹೋಗುವು ಸಾಧ್ಯತೆಗಳು ಕೂಡ ಇದೆ. ಆದರೂ ತಾಲಿಬಾನ್ ಮುಂದಿನ ದಿನಗಳಲ್ಲಿ ವ್ಯಾಪರ ವಹಿವಾಟಿಗೆ ಅನುವು ಮಾಡಿಕೊಡುವ ಸಾಧ್ಯತೆಯಿದೆ ಎಂದು ಭಾರತೀಯ ರಫ್ತು ಸಂಸ್ಥೆ ಮಹಾನಿರ್ದೇಶಕ ಡಾ. ಅಜಯ್ ಸಹಾಯ್ ತಿಳಿಸಿದ್ದಾರೆ.


Exit mobile version