ಶಾಂತಿ ಬಯಸುತ್ತಿದ್ದಾರೆ ತಾಲಿಬಾನಿಗಳು; ಅಫ್ಘಾನ್‌ನಲ್ಲಿ ತಾಲಿಬಾನಿಗಳ ಯುದ್ದ ಅಂತ್ಯ!

ಕೈರೋ, ಆ. 16: ಅಫ್ಘಾನ್ ನಲ್ಲಿ ನಮ್ಮ ಯುದ್ದ ಅಂತ್ಯವಾಗಿದೆ ಇನ್ನು ಮುಂದೆ ಶಾಂತಿ ಬಯಸುವುದಾಗಿ ತಾಲಿಬಾನ್ ವಕ್ತಾರ ಮಹಮ್ಮದ್ ನಯೀಮ್ ತಿಳಿಸಿದ್ದಾರೆ.

ಈ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು ಹೊಸ ತಾಲಿಬಾನ್ ಆಡಳಿತದ ಮತ್ತು ನಿಯಮಾವಳಿಗಳ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುತ್ತದೆ ಹಾಗೂ ತಾಲಿಬಾನ್ ಪ್ರತ್ಯೇಕವಾಗಿ ಬದುಕಲು ಬಯಸುವುದಿಲ್ಲ. ಮತ್ತು ಶರಿಯಾ ಕಾನೂನಡಿಯಲ್ಲೇ ತಾಲಿಬಾನ್ ಮಹಿಳಾ ಮತ್ತು ಅಭಿವ್ಯೆಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂದು ಅವರು ಹೇಳಿದರು .

ನಾವು ಶಾಂತಿಯುತವಾದ ಸಂಬಂಧಗಳನ್ನು ಹೊಂದಲು ಬಯಸುತ್ತೇವೆ ಹಾಗೂ ವಿದೇಶಿಗಳೊಂದಿಗೆ ಉತ್ತಮ ಭಾಂದವ್ಯ ವೃದ್ದಿಸಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ ಎಂದು ಅವರು ತಿಳಿಸಿದರು. ಅಫ್ಘಾನ್ ಅಧ್ಯಕ್ಷ ಘನಿ  ತಪ್ಪಿಸಿಕೊಳ್ಳುವುದರೊಂದಿಗೆ 20 ವರ್ಷಗಳ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಶಕೆ ಮತ್ತೆ ಆರಂಭಗೊಂಡಿದೆ. ತಾಲಿಬಾನ್ ವಶಕ್ಕೆ ಬಂದ ಹಿನ್ನಲೆಯಲ್ಲಿ ಇಗಾಗಲೇ 5000 ಉಗ್ರಗಾಮಿಗಳನ್ನು ಕೂಡ ಬಿಡುಗಡೆಗೊಳಿಸಲಾಗದೆ.

Exit mobile version