“ಕಾಲು ಮುರಿಯಿರಿ, ನಾನು ಜಾಮೀನು ಕೊಡಿಸುತ್ತೇನೆ” ; ಶಿಂಧೆ ಬಣದ ಶಾಸಕ ಕರೆ : ವಿಡಿಯೋ ವೈರಲ್!

ಮುಂಬೈ : ಮಹಾರಾಷ್ಟ್ರ(Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ಬಣದ ಶಿವಸೇನೆಯ ಶಾಸಕ(Shivasena MLA) ಪ್ರಕಾಶ್ ಸುರ್ವೆ ನೀಡಿರುವ ಕರೆ ವಿವಾದಕ್ಕೆ ಕಾರಣವಾಗಿದೆ. ಶಾಸಕ ಪ್ರಕಾಶ್ ಸುರ್ವೆ(Prakash Surwey) ಮಾತನಾಡಿದ್ದಾರೆ ಎನ್ನಲಾಗಿರುವ ವಿಡಿಯೋ ಇದೀಗ ಎಲ್ಲೆಡೆ ಭಾರೀ ವೈರಲ್(Viral) ಆಗ್ತಿದೆ. ಈ ವಿಡಿಯೋ(Video) ಆಧಾರದ ಮೇಲೆ ಮಹಾರಾಷ್ಟ್ರ ಪೊಲೀಸರು(Maharashtra Police) ಶಾಸಕ ಪ್ರಕಾಶ್ ಸುರ್ವೆ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಶಿವಸೇನೆ ಬಂಡಾಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಶಾಸಕ ಪ್ರಕಾಶ್ ಸುರ್ವೆ, “ನಿಮಗೆ ಅವರ ಕೈ ಮುರಿಯಲು ಸಾಧ್ಯವಾಗದಿದ್ದರೆ, ಅವರ ಕಾಲು ಮುರಿಯಿರಿ. ನಾನು ನಿಮಗೆ ಜಾಮೀನು ಕೊಡಲು ಮರುದಿನ ಬರುತ್ತೇನೆ.” ಎಂದು ಉದ್ಧವ್ ಠಾಕ್ರೆ ಬೆಂಬಲಿಗರ ಮೇಲೆ ದಾಳಿ ನಡೆಸುವಂತೆ ಪ್ರಚೋದನೆ ನೀಡಿದ್ದಾರೆ ಎನ್ನಲಾಗಿದೆ.

ಶಾಸಕ ಪ್ರಕಾಶ್ ಸುರ್ವೆ ಅವರ ಭಾಷಣದ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆಗಸ್ಟ್ 14 ರಂದು ಮುಂಬೈನ(Mumbai) ಮಗಥಾಣೆ ಪ್ರದೇಶದ ಬುದ್ಧ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, “ನಾವು ಯಾರೊಂದಿಗೂ ಜಗಳವಾಡುವುದಿಲ್ಲ, ಆದರೆ ಯಾರಾದರೂ ನಮ್ಮೊಂದಿಗೆ ಜಗಳವಾಡಿದರೆ ನಾವು ಅವರನ್ನು ಬಿಡುವುದಿಲ್ಲ. ನಾವು ಯಾರ ದಾದಾಗಿರಿಯನ್ನು ಸಹಿಸುವುದಿಲ್ಲ.

ನಿಮ್ಮ ಮೇಲೆ ಯಾರಾದರು ದಾದಾಗಿರಿ ಮಾಡಲು ಬಂದರೆ, ನೀವು ಅವರ ಕೈ-ಕಾಲುಗಳನ್ನು ಮುರಿಯಿರಿ. ಮರುದಿನ ನಾನು ನಿಮಗೆ ಜಾಮೀನು(Bail) ನೀಡುತ್ತೇನೆ, ಚಿಂತಿಸಬೇಡಿ.” ಎಂದಿದ್ದಾರೆ. ಇನ್ನು ಮಗಠಾಣೆ ಕ್ಷೇತ್ರದ ಶಾಸಕರಾಗಿರುವ ಪ್ರಕಾಶ್ ಸುರ್ವೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬಂಡಾಯ ಶಾಸಕರಲ್ಲಿ ಒಬ್ಬರಾಗಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

Exit mobile version