New Delhi: ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಅಡಿ ‘ತೆಹ್ರೀಕ್-ಇ-ಹುರಿಯತ್’ (Tehreek-e-Huriat) ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ಈ ಸಂಘಟನೆ ನಿಷೇಧವನ್ನು ಅಮಿತ್ ಶಾ (Amit Shah) ಪ್ರಕಟಣೆ ಹೊರಡಿಸಿದ್ದಾರೆ.

ಜಮ್ಮ ಮತ್ತು ಕಾಶ್ಮೀರವನ್ನು (Jammu And Kashmir) ಭಾರತದಿಂದ ಪ್ರತ್ಯೇಕಿಸುವ ಸಂಚು ಹಾಗೂ ಕಣಿವೆಯಲ್ಲಿ ಇಸ್ಲಾಮಿಕ್ ಆಡಳಿತ ಜಾರಿಗೆ ಪ್ರಯತ್ನಿಸಿದ ಆರೋಪದ ಮೇಲೆ ‘ತೆಹ್ರೀಕ್ ಇ ಹುರಿಯತ್’ ಸಂಘಟನೆಯ ಜತೆಗೆ ಸಹ ಸಂಘಟನೆಗಳನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿ ಆದೇಶ ಹೊರಡಿಸಿದ್ದು, ”ತೆಹ್ರೀಕ್ – ಇ – ಹುರಿಯತ್’ ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದೆ.
ಪ್ರತ್ಯೇಕತೆಯ ನೆಪದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಿದೆ. ಕಣಿವೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸಿದ ಆರೋಪದ ಮೇಲೆ ಬ್ಯಾನ್ (Ban) ಮಾಡಲಾಗಿದ್ದು, ‘ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವ ದೃಢ ಸಂಕಲ್ಪ ಮಾಡಿರುವ ಪ್ರಧಾನಿ ನೆರೇಂದ್ರ ಮೋದಿ (Narendra Modi) ಅವರ ಆಶಯದಂತೆ ದೇಶ ವಿರೋಧಿ ಕೃತ್ಯದಲ್ಲಿ ತೊಡಗಿರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ಅಮಿತ್ ಶಾ ಹೇಳಿದ್ದಾರೆ.

ತೆಹ್ರೀಕ್ ಇ ಹುರಿಯತ್ ಸಂಘಟನೆಯು ಭಾರತ ವಿರೋಧಿ ಪ್ರಚಾರ ಹಾಗೂ ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಭಾಗದಲ್ಲಿ ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ ಚಟುವಟಿಕೆಗಳಿಗೆ ಉತ್ತೇಜನ ಕೊಡುತ್ತಿದೆ ಎಂಬ ಆರೋಪಕ್ಕೆ ಒಳಗಾಗಿತ್ತು. ಗೃಹ ಸಚಿವಾಲಯದ ಸೂಚನೆ ಮೇರೆಗೆ ಮೂರು ದೇಶದ ರಾಯಭಾರ ಕಚೇರಿಗಳ ಮೇಲೆ ನಡೆದಿದ್ದ ದಾಳಿಯ ತನಿಖೆ ಕೈಗೊಂಡಿದ್ದ ಎನ್ಐಎ (NIA) ಅಧಿಕಾರಿಗಳು, ಕೃತ್ಯ ಸಂಬಂಧ ದೇಶದ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ದಾಳಿ ನಡೆಸಿ, ಶಂಕಿತರ ವ್ಯಕ್ತಿಗಳ ಪೂರ್ವಾಪರ ಮಾಹಿತಿ ಸಂಗ್ರಹಿಸಿದ್ದರು.
ದಾಳಿಗೊಳಗಾದ ರಾಯಭಾರ ಕಚೇರಿಗಳಿಗೆ ಭೇಟಿ ನೀಡಿದ್ದ ತನಿಖಾ ತಂಡ, ವಿಸ್ತೃತ ಮಾಹಿತಿ ಸಂಗ್ರಹ ಮಾಡುವ ಜತೆಗೆ ಕೆಲವೊಂದು ಸಾಕ್ಷ್ಯಗಳು, ಪೂರಕ ದಾಖಲೆಗಳನ್ನು ಪಡೆದುಕೊಂಡಿತ್ತು. ಖಲಿಸ್ತಾನಿ (Khalistan) ಬೆಂಬಲಿಗರ ಗುಂಪು ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೊ, ಕೆನಡಾದ ಒಟ್ಟಾವ, ಟೊರೆಂಟೊ, ಬ್ರಿಟನ್, ಲಂಡನ್ನಲ್ಲಿ (Britain, Landon) ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿದ್ದರು.
ಭವ್ಯಶ್ರೀ ಆರ್ ಜೆ