ಈ ಕೂಡಲೇ ತನಿಖೆಗೆ ಹಾಜರಾಗಬೇಕು ; ತೇಜಸ್ವಿ ಸೂರ್ಯಗೆ ನೋಟಿಸ್ ನೀಡಿದ ದೆಹಲಿ ಪೊಲೀಸ್!

tejaswi surya

ದೆಹಲಿ(Delhi) ಮುಖ್ಯಮಂತ್ರಿ(ChiefMinister) ಅರವಿಂದ್ ಕೇಜ್ರಿವಾಲ್(Aravind Kejrival) ಅವರ ನಿವಾಸದ ಮೇಲಿನ ದಾಳಿ ಪ್ರಕರಣದ ತನಿಖೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಬಿಜೆಪಿ(BJP) ಸಂಸದ(MP) ತೇಜಸ್ವಿ ಸೂರ್ಯ(Tejaswi Surya) ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಬಿಜೆಪಿ ಸಂಸದರ ನೇತೃತ್ವದಲ್ಲಿ ಪ್ರತಿಭಟನೆ ಸ್ಥಳಕ್ಕೆ ತಲುಪಿದ ನಂತರ, ಕೇಜ್ರಿವಾಲ್ ಅವರ ನಿವಾಸದ ಮುಂಭಾಗದ ಗೇಟ್ ಅನ್ನು ಧ್ವಂಸಗೊಳಿಸಲಾಯಿತು. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಸುಳ್ಳು ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ ಮೇಲೆ ಪ್ರತಿಭಟನೆ ನಡೆದಿತ್ತು. ದೆಹಲಿ ಅಸೆಂಬ್ಲಿಯಲ್ಲಿ ಮಾಡಿದ ಭಾಷಣದಲ್ಲಿ ಅವರು ಕಾಶ್ಮೀರ ಫೈಲ್ಸ್ ಪ್ರಚಾರಕ್ಕಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಘಟನೆಯಲ್ಲಿ ದೆಹಲಿ ಪೊಲೀಸರು ಇದುವರೆಗೆ ಎಂಟು ಜನರನ್ನು ಬಂಧಿಸಿದ್ದಾರೆ.

ಮಾರ್ಚ್ 30 ರಂದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಕೇಜ್ರಿವಾಲ್ ಅವರ ನಿವಾಸವನ್ನು ಧ್ವಂಸಗೊಳಿಸಿದರು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಕಾರ್ಯಕರ್ತರು ಕೇಜ್ರಿವಾಲ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು. “ಕಾಶ್ಮೀರ ಹಿಂದೂಗಳ ಹತ್ಯಾಕಾಂಡಕ್ಕಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಪಹಾಸ್ಯದ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತು. ಯುವ ಮೋರ್ಚಾ ಕೇಜ್ರಿವಾಲ್‌ರಿಂದ ಬೇಷರತ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.

ಕ್ಷಮೆ ಕೇಳುವವರೆಗೂ ಯುವಮೋರ್ಚಾದ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಲಾಗಿದೆ. ರಾಮಮಂದಿರವನ್ನು ಗೇಲಿ ಮಾಡುವುದು, ಹಿಂದೂ ದೇವತೆಗಳ ಬಗ್ಗೆ ತಮಾಷೆ ಮಾಡುವುದು, ಬಟ್ಲಾ ಹೌಸ್ ಅನ್ನು ಪ್ರಶ್ನಿಸುವುದು, ಸರ್ಜಿಕಲ್ ಸ್ಟ್ರೈಕ್‌ಗಳನ್ನು ಪ್ರಶ್ನಿಸುವುದು ಆಮ್ ಆದ್ಮಿ ಪಕ್ಷದ ನೀತಿಯಾಗಿದೆ ಎಂದು ತೇಜಸ್ವಿ ಸೂರ್ಯ ಕಿಡಿಕಾರಿದರು. ಸದ್ಯ, ಅರವಿಂದ್ ಕೇಜ್ರಿವಾಲ್ ಮನೆಯ ಮೇಲೆ ಬಿಜೆಪಿ ನಡೆಸಿದ ದಾಳಿಯ ವೇಳೆ ತೇಜಸ್ವಿ ಸೂರ್ಯ ಬಸ್ ಮೇಲೆ ಕುಳಿತು ಪ್ರತಿಭಟನೆ ಮಾಡುತ್ತಿದ್ದದ್ದು, ಪೊಲೀಸರಿಗೆ ಗಮನಾರ್ಹ ಅಂಶವಾಗಿದೆ.

ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಸಂಸದ ತೇಜಸ್ವಿ ಸೂರ್ಯ ಅವರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

Exit mobile version