ಕೇಸರಿ ಧ್ವಜಕ್ಕೆ ಅವಮಾನಿಸಿದ ಆರೋಪ: ಯುವಕನಿಗೆ ಹಲ್ಲೆ ನಡೆಸಿ ನಗ್ನ ಮೆರವಣಿಗೆ ಮಾಡಿದ ಗ್ರಾಮಸ್ಥರು

Hyderabad:‌ ತೆಲಂಗಾಣದ ಸಂಗಾರೆಡ್ಡಿ (Telangana Crime Case)ಎಂಬಲ್ಲಿ ಯುವಕನೋರ್ವನನ್ನು ಕೇಸರಿ ಧ್ವಜವನ್ನು ಅವಮಾನಿಸಿ ರೀಲ್ಸ್‌ ಅಪ್‌ಲೋಡ್‌ (Reels Upload) ಮಾಡಿದ್ದಾನೆ ಎಂದು

ಆರೋಪಿಸಿ ಗ್ರಾಮಸ್ಥರು ಆತನಿಗೆ ಥಳಿಸಿ, ನಗ್ನ ಮೆರವಣಿಗೆ ನಡೆಸಿರುವ ಘಟನೆ ನಡೆದಿದೆ ಎಂದು indiatoday.in ವರದಿ ಮಾಡಿದೆ.

ಕೇಸರಿ ಧ್ವಜವನ್ನು ಆ ಯುವಕ ರೀಲ್ಸ್‌ನಲ್ಲಿ ತನ್ನ ಪ್ಯಾಂಟ್‌ ಒಳಗೆ ಅವಮಾನಕಾರಿಯಾಗಿ ತುರುಕಿಸುತ್ತಿರುವುದು ಕಾಣಿಸುತ್ತದೆ. ಆದರೆ ಇದರಿಂದ ಆಕ್ರೋಶಿತರಾದ ಮೇದಕ್‌ (Medhak) ಜಿಲ್ಲೆಯ

ಗ್ರಾಮವೊಂದರ ಜನರು ಆತನನ್ನು ಹಿಡಿದು ಥಳಿಸಿದ್ದು, ಕೆಲ ವೀಡಿಯೋಗಳಲ್ಲಿ ಜೈ ಶ್ರೀರಾಮ್‌ (Jai Shree Ram) ಘೋಷಣೆ ಮೊಳಗಿಸುವ ಜನರು ಆತನಿಗೆ ಥಳಿಸಿ ನಗ್ನ ಮೆರವಣಿಗೆ ನಡೆಸಿದ್ದಾರೆ.

ಅದಷ್ಟೇ ಅಲ್ಲದೆ, ಆತನ ಖಾಸಗಿ ಅಂಗಗಳಿಗೆ ಬೆಂಕಿ ಹಚ್ಚುವ ಯತ್ನ ನಡೆಸುತ್ತಿರುವುದು ಕಾಣಿಸುತ್ತಿದೆ. ಆತ ಹಿಂದುಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾನೆಂದು ಆರೋಪಿಸಿ ಗ್ರಾಮಸ್ಥರು ಪೊಲೀಸ್‌

ದೂರು ನೀಡಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್‌ 153(ಎ), 295-ಎ ಮತ್ತು 505 (2) ಅನ್ವಯ (Telangana Crime Case) ಪ್ರಕರಣ ದಾಖಲಿಸಲಾಗಿದೆ.

ಗ್ರಾಮಸ್ಥರ ವಿರುದ್ಧ ಸಂತ್ರಸ್ತ ಯುವಕ ಕೂಡ ಥಳಿಸಿದ್ದಕ್ಕೆ ದೂರು ದಾಖಲಿಸಿದ್ದು, ಇದರನ್ವಯ ಗ್ರಾಮಸ್ಥರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್‌ 341, 323, 505(2) ಮತ್ತು 506 ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ: ಜ್ಞಾನವಾಪಿ ಮಸೀದಿ ವಿವಾದ: ಸರ್ವೆ ವರದಿ ಬಹಿರಂಗ ಆಗಬಾರದು ಎಂದು ಕೋರ್ಟ್‌ ಹೇಳಿಲ್ಲ, ಹಿಂದೂ ಪರ ವಕೀಲ

Exit mobile version