ಈ ದೇವಸ್ಥಾನದಲ್ಲಿ ಪ್ರತಿನಿತ್ಯ ಬೀದಿ ನಾಯಿಗಳಿಗೆ ಹಾಲೂಟ

ಅನಾದಿಕಾಲಾದಿಂದಲು ಮಂದಿರಗಳಲ್ಲಿ ಯಾವುದೇ ಪೂಜೆ ಅಥವಾ ಸಮಾರಂಭದ ಸಂದರ್ಭದಲ್ಲಿ ಗರ್ಭಗುಡಿಯಲ್ಲಿರುವ ವಿಗ್ರಹಕ್ಕೆ ಹಾಲೆರೆಯುವುದು ನಡೆದುಕೊಂಡು ಬಂದ ಪದ್ದತಿ. ಆದರೆ ಅಸ್ಸಾಂನ ಗುವಾಹಟಿಯ ದೇವಾಲಯವೊಂದರಲ್ಲಿ ದೇವರಿಗೆ ಅಭಿಷೇಕ ಮಾಡುವ ಹಾಲನ್ನು ನಾಯಿಗಳಿಗೆ ಉಣಬಡಿಸುವ ವೀಡಿಯೋ ವೈರಲ್‌ ಆಗಿದೆ.

ಕೊರೊನಾದಂತಹ ರೋಗದಿಂದ ಮನುಷ್ಯರೊಂದಿಗೆ ಪ್ರಾಣಿಗಳೂ ಸಾಕಷ್ಟು ತೊಂದರೆ ಅನುಭವಿಸುತ್ತಿರುವುದನ್ನು ನಾವು ಕಾಣಬಹುದು. ಇದರಲ್ಲೂ ಪ್ರಮುಖವಾಗಿ ಬೀದಿನಾಯಿಗಳಿಗೆ ಸಾರ್ವಜನಿಕರು ನೀಡುವ ಆಹಾರವನ್ನೇ ಅವಲಂಭಿಸಿರುತ್ತವೆ. ಇಂತಹ ಕಷ್ಟ ಸಂದರ್ಭದಲ್ಲಿ ಗುವಾಹಟಿ ದೇವಸ್ಥಾನದ ಸಿಬ್ಬಂದಿಗಳು ಭಕ್ತರು ನೀಡಿದ ಹಾಲನ್ನು ಬೀದಿನಾಯಿಗಳಿಗೆ ಉಣಿಸುವ 16 ಸೆಕೆಂಡುಗಳ ವಿಡಿಯೋ ವೈರಲ್‌ ಆಗಿದೆ.

ಈ ವಿಡಿಯೋವನ್ನು ಮುಂಬೈ ಮೂಲದ “ಅನಿಮಲ್ ಮ್ಯಾಟರ್ ಟು ಮಿ” ಎಂಬ ಫೇಸ್‌ಬುಕ್‌ ಫೇಜ್‌ನಲ್ಲಿ ಕಳೆದ ಭಾನುವಾರದಂದು ಅಪ್ಲೋಡ್‌ ಮಾಡಲಾಗಿದ್ದು, ಈಗಾಗಲೇ 60 ಸಾವಿರಕ್ಕೂ ಅಧಿಕ ಭಾರಿ ವೀಕ್ಷಣೆಗೆ ಒಳಪಟ್ಟಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸ್ವಯಂಸೇವಕರ ಕಾರ್ಯಕ್ಕೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ.

Exit mobile version