ಚಿನ್ನ ಕದಿಯಲು ಹೋಗಿ ತಾನೇ ತೋಡಿದ ಹಳ್ಳಕ್ಕೆ ಬಿದ್ದು ಪರದಾಡಿದ ಕಳ್ಳ!

robbery

ಕ್ಷಣಾರ್ಥ ಕರ್ಮ ಎಂದು ಹಿರಿಯರು ಹೇಳುವ ವೇದವಾಕ್ಯ ಇಲ್ಲೊಂದು ಘಟನೆಯಲ್ಲಿ ಸಂಭವಿಸಿದೆ ಎಂದೇ ಹೇಳಬಹುದು. ಹೌದು, ದೇವಸ್ಥಾನದಲ್ಲಿದ್ದ ಆಭರಣಗಳನ್ನು ಕಳ್ಳತನ ಮಾಡಬೇಕು ಎಂಬ ಸಂಚು ಹೂಡಿದ್ದ ಖದೀಮ ತಾನೇ ಗುಂಡಿಗೆ ಬಿದ್ದಿದ್ದಾನೆ, ಹೇಗೆ ಅಂತೀರಾ ಮುಂದೆ ಓದಿ.

ಕರ್ಮ ಹೇಗೆ ಅದರ ಶಕ್ತಿಯನ್ನು ತೋರುತ್ತದೆ ಎಂಬುದು ಈ ಘಟನೆ ಮೂಲಕ ಮತ್ತಷ್ಟು ಅದ್ಭುತವಾಗಿ ಅರ್ಥವಾಗುತ್ತದೆ. ಇದಕ್ಕೆ ಪರಿಪೂರ್ಣ ಉದಾಹರಣೆ ಎಂಬಂತೆ ಹೇಳುವುದಾದರೆ, ಕಳ್ಳನೊಬ್ಬ ಆಂಧ್ರಪ್ರದೇಶದ ಜಮಿ ಎಲ್ಲಮ್ಮ ದೇವಾಲಯದಿಂದ ಚಿನ್ನಾಭರಣಗಳನ್ನು ಕಳ್ಳತನ ಮಾಡಲು ತನ್ನದೇ ಪೂರ್ವ ಸಂಚನ್ನು ಹೂಡಿ, ದೇವಸ್ಥಾನದ ಒಳಗೆ ಪ್ರವೇಶಿಸಲು ಸುರಂಗ ಕೊರೆದಿದ್ದಾನೆ, ಆದ್ರೆ ಅದೇ ಸುರಂಗಕ್ಕೆ ಆತ ಕೆಳಗೂ ಇಳಿಯದೇ, ಮೇಲೂ ಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದಾನೆ.

ದೇವಸ್ಥಾನದ ಗೋಡೆಯಲ್ಲಿ ಕೊರೆದಿದ್ದ ಗುಂಡಿಯಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ ಮುಖೇನ ಸ್ಥಳೀಯರಿಗೆ ಸುಲಭವಾಗಿ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಶ್ರೀಕಾಕುಳಂನ ಕರಾವಳಿ ಜಿಲ್ಲೆಯ ಜಾಮಿ ಯೆಲ್ಲಮ್ಮ ದೇವಸ್ಥಾನದಿಂದ ಆಭರಣದೊಂದಿಗೆ ಪರಾರಿಯಾಗಲು ಯತ್ನಿಸಿದ ಆರೋಪಿ, ತಾನೇ ತೋಡಿದ ಗುಂಡಿಗೆ ಸಿಲುಕಿ ಶಿಕ್ಷೆಗೆ ಗುರಿಯಾಗಿದ್ದಾನೆ. ಈ ಕಳ್ಳನನ್ನು ಪಾಪ ರಾವ್ (30) ಎಂದು ಗುರುತಿಸಲಾಗಿದೆ.

ಸುರಂಗಕ್ಕೂ ಮುಂಚಿತವಾಗಿಯೇ ದೇವಸ್ಥಾನದ ಕಿಟಕಿಯನ್ನು ಒಡೆದು ಕೈಗೆ ಸಿಕ್ಕ ವಿಗ್ರಹಗಳಲ್ಲಿದ್ದ ಆಭರಣಗಳನ್ನು ದೋಚಿದ್ದಾನೆ. ಆದ್ರೆ ಅಲ್ಲಿಂದ ಸುರಂಗಕ್ಕೆ ಹೋದಾಗ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ. ಸಿಲುಕಿದ ಬಳಿಕ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಕಾರಣ, ಸಹಾಯಕ್ಕಾಗಿ ಸ್ಥಳೀಯರ ಬಳಿ ಅಳಲು ತೋಡಿಕೊಂಡಿದ್ದಾನೆ. ನಂತರ ಗ್ರಾಮಸ್ಥರು ಬಂದು ರಕ್ಷಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

Exit mobile version