ಟೆಸ್ಟ್ ಮಾಡಿ 5 ದಿನವಾದ್ರೂ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ರಿಪೋರ್ಟ್

Share on facebook
Share on google
Share on twitter
Share on linkedin
Share on print

ಬೆಂಗಳೂರು, ನ. 21: ಕೊರೊನಾ ಸೋಂಕಿನ ಪ್ರಮಾಣ ತಗ್ಗಿದಂತೆ, ಸತತ ೮ ತಿಂಗಳ ಬಳಿಕ ರಾಜ್ಯದಲ್ಲಿ ಕಾಲೇಜುಗಳು ಆರಂಭವಾಗಿದೆ. ಕಾಲೇಜು ಯಾವಾಗ ಆರಂಭವಾಗುತ್ತದೋ ಎಂದು ಕಾಯುತ್ತಾ ಕುಳಿತಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭವಾಗಿ ಕೊರೋನಾ ಭಯದ ನಡುವೆ ಹೊಸ ಉತ್ಸಾಹ ತುಂಬಿದಂತಾಗಿದೆ. ಆದರೆ ಕಾಲೇಜುಗಳೇನೋ ಆರಂಭವಾಯಿತು. ಆದರೆ ಸರ್ಕಾರದ ಅನೇಕ ಮಾರ್ಗಸೂಚಿಗಳನ್ನು ನೀಡಿದ್ದು, ಆ ಪ್ರಕಾರ ಕಾಲೇಜು ಆರಂಭಿಸಬೇಕು. ಆ ಮಾರ್ಗಸೂಚಿಗಳಲ್ಲಿ ಕಾಲೇಜಿಗೆ ಎಂಟ್ರಿಯಾಗುವ ಮೊದಲು ಕೊರೊನಾ ನೆಗೆಟಿವ್‌ ವರದಿ ಕಡ್ಡಾಯವನ್ನೂ ಮಾಡಿದೆ.

ಕಾಲೇಜು ಆರಂಭಿಸುವಾಗ ಕೊರೊನಾ ಪರೀಕ್ಷೆ ಮಾಡಿದ 24 ಗಂಟೆಗಳಲ್ಲಿ ವರದಿಯನ್ನು ನೀಡಲಾಗುತ್ತದೆ ಎಂದು ಪಾಲಿಕೆ ತಿಳಿಸಿತ್ತು. ಆದರೆ ಕಾಲೇಜು ಆರಂಭವಾಗಿ 5 ದಿನವಾಗಿದ್ರೂ ಪರೀಕ್ಷೆಗೆ ಒಳಗಾಗಿದ್ದ ವಿದ್ಯಾರ್ಥಿಗಳ ಕೋವಿಡ್‌ ಟೆಸ್ಟ್‌ ವರದಿ ಇನ್ನು ಬರದೇ ಇರುವುದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.  

ಈ ಕಾರಣದಿಂದಾಗಿ ಕಾಲೇಜಿಗೆ ಹಾಜರಾಗಬೇಕೆನ್ನುವ ವಿದ್ಯಾರ್ಥಿಗಳಿಗೆ ಕೊರೋನಾ ವರದಿಯಿಂದಾಗಿ ಅಡ್ಡಿ ಉಂಟಾಗುತ್ತಿದೆ. ಅಲ್ಲದೇ ಕೊರೋನಾ ಕಾಟವು ಹೆಚ್ಚಾಗ್ತಿದೆ. ಕಾಲೇಜು ಶುರುವಾದ ದಿನದಿಂದ ಪಾಲಿಕೆ ಬೆಂಗಳೂರಿನ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್‌ ಮಾಡಿಸುತ್ತಿದೆ.

Submit Your Article