ಪಂಜಾಬ್ ನಲ್ಲಿ ಕನಿಷ್ಠ ಒಂದು ಡೋಸ್ ಪಡೆದವರಿಗಷ್ಟೇ ಬಾರ್, ಜಿಮ್‌ಗೆ ಅವಕಾಶ

ಪಂಜಾಬ್, ಜು. 10: ಕೊರೊನಾ ನಿಯಂತ್ರಣ ಸಲುವಾಗಿ ರಾಜ್ಯದಲ್ಲಿ ಹೇರಲಾಗಿದ್ದ ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ನಿರ್ಬಂಧವನ್ನು ತೆಗೆದುಹಾಕಲಾಗಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿರುವವರಿಗೆ ಮಾತ್ರವೇ ಅವಕಾಶ ನೀಡಿ ಬಾರ್‌, ಚಿತ್ರಮಂದಿರ, ಮಾಲ್‌, ರೆಸ್ಟೋರೆಂಟ್‌, ಜಿಮ್‌, ಸ್ಪಾ ಮತ್ತು ಇತರ ವಾಣಿಜ್ಯ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಅಷ್ಟಲ್ಲದೆ, ಮಾರ್ಗಸೂಚಿಗೆ ಅನುಗುಣವಾಗಿ ತರಬೇತಿ ಕೇಂದ್ರಗಳು ಮತ್ತು ಕಾಲೇಜುಗಳನ್ನೂ ತೆರೆಯಬಹುದಾಗಿದ್ದು, ಶಾಲೆಗಳನ್ನು ತೆರೆಯಲು ಸದ್ಯ ಅವಕಾಶವಿಲ್ಲ ಎನ್ನಲಾಗಿದೆ.

Exit mobile version