ರೆಮ್​ಡೆಸಿವಿರ್​ ಮೇಲಿನ ಆಮದು ಸುಂಕ ಮನ್ನಾ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ, ಏ. 21: ದೇಶದಲ್ಲಿ ಕೊರೊನಾ ಸೋಂಕಿತರಿಗೆ ನೀಡುತ್ತಿರುವ ರೆಮ್​ಡೆಸಿವಿರ್​ ಔಷಧದ ಅಭಾವ ಉಂಟಾಗಿದೆ ಎಂದು ಹೇಳಲಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ರೆಮ್​ಡೆಸಿವಿರ್​ ಇಂಜೆಕ್ಷನ್​ ಮತ್ತು ಅದರ ಎಪಿಐ/ಕೆಎಸ್​ಎಂ ಮೇಲಿನ ಕಸ್ಟಮ್ಸ್​ ಸುಂಕವನ್ನು ಮನ್ನಾ ಮಾಡಿದೆ. ಈ ಬಗ್ಗೆ ಕೇಂದ್ರ ಸಚಿವ ಡಿ.ಎಸ್​. ಸದಾನಂದ ಗೌಡ ಟ್ವೀಟ್ ಮಾಡಿ ತಿಳಿಸಿದ್ದಾರೆ.

ರೆಮ್​ಡೆಸಿವಿರ್​ ಔಷಧಿಯ ತುರ್ತು ಅಗತ್ಯತೆಯನ್ನು ಪರಿಗಣಿಸಿ, ಔಷಧೀಯ ಇಲಾಖೆಯ ಶಿಫಾರಸಿನ ಮೇರೆಗೆ ರೆಮ್​ಡೆಸಿವಿರ್ ಮೇಲಿನ ಕಸ್ಟಮ್ಸ್​ ಸುಂಕವನ್ನು, ಕಂದಾಯ ಇಲಾಖೆ ಮನ್ನಾ ಮಾಡಿದೆ. ಹೀಗೆ ಮಾಡುವುದರಿಂದ ದೇಶೀಯವಾಗಿ ರೆಮ್​ಡೆಸಿವಿರ್ ಇಂಜಕ್ಷನ್​ ಉತ್ಪಾದನೆ ಹೆಚ್ಚುತ್ತದೆ ಎಂದು ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದಾರೆ.

ಕೊರೊನಾ ಶುರುವಾದಾಗಿನಿಂದಲೂ ರೋಗಿಗಳಿಗೆ ರೆಮ್​ಡೆಸಿವರ್​ ಇಂಜಕ್ಷನ್ ಕೊಡಲಾಗುತ್ತಿದೆ. ಇದರ ಕೊರತೆ ಎದುರಾಗಿದ್ದರಿಂದ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಇದೀಗ ಈ ಆಮದು ಸುಂಕವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದ್ದರಿಂದ ದೇಶೀಯ ಔಷಧೀಯ ಕಂಪನಿಗಳಿಗೆ ಹೊರೆ ಕಡಿಮೆಯಾಗಲಿದೆ.

Exit mobile version