ಆಡಂಬರಗಳಿಲ್ಲದೆ ನಡೆದ ಚುಂಚಘಟ್ಟ ಎಲ್ಲಮ್ಮನ ಕರಗ ಉತ್ಸವ

ಬೆಂಗಳೂರು, ಮಾ. 29: ಮಾರ್ಚ್ 28ರಂದು ನಗರದ ಕೋಣನಕುಂಟೆ ವ್ಯಾಪ್ತಿಯ ಚುಂಚಘಟ್ಟ ರಸ್ತೆಯಲ್ಲಿರುವ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ ಕರಗೂತ್ಸವ  ಸಾಂಪ್ರದಾಯಕವಾಗಿ  ನಡೆಯಿತು. ಕೊರೋನಾ ಭೀತಿಯ ನಡುವೆಯೂ ಈ ಉತ್ಸವ  ಒಳ್ಳೆಯ ರೀತಿಯಲ್ಲಿ ನಡೆಯಿತು. ಆದರೆ ಯಾವುದೇ ಜೋರಾದ  ಸದ್ದು ಗದ್ದಲ  ಹೆಚ್ಚಿನ ಆಡಂಬರಗಳಿಲ್ಲದೆ  ಶಿಸ್ತಾಗಿ ನಡೆಯಿತು. ಇಷ್ಟು ವರ್ಷದಂತೆ ನಾಟಕ, ಡಾನ್ಸ್. ಸಂಗೀತ, ಬ್ಯಾಂಡ್, ಮುಂತಾದ ಯಾವುದೇ ವಿವಿಧ ವಿನೋದಾವಳಿಗಳು ಇರಲಿಲ್ಲ.

ಇಷ್ಟು ವರ್ಷಗಳಲ್ಲಿ ಈ ಉತ್ಸವ ಬಹಳ ವಿಜ್ರಂಭಣೆಯಿಂದ ನಡೆಯುತ್ತಿತ್ತು. ರೋಡಲ್ಲಿ ಜಾಗವಿಲ್ಲದಷ್ಟು ಸಂತೆ ಮಳಿಗೆಗಳು  ಇರುತ್ತಿದ್ದವು ಅನೇಕ ಮಳಿಗೆಗಳನ್ನು ವ್ಯಾಪಾರಸ್ಥರು ಹಾಕುತ್ತಿದ್ದರು. ಸಾವಿರಾರು  ಜನರೂ  ಬರುತ್ತಿದ್ದರು, ವ್ಯಾಪಾರಸ್ಥರು ಭರ್ಜರಿ ವ್ಯಾಪಾರ ಮಾಡುತ್ತಿದ್ದರು.  ಆದರೆ ಕೊರೋನಾ ಮಹಾಮಾರಿಯಿಂದ ಈ ವರ್ಷ ಸಪ್ಪೆಯಾಗಿ ನಡೆಯಿತು ಜಾತ್ರೆ. ಏರಿಯಾ ಜನರಿಗೆ ಊರಿನ ಜಾತ್ರೆ ಅಂದರೆ ಎಲ್ಲಿಲ್ಲದ ಸಂತೋಷ. ಮನೆ ಮಂದಿಯೆಲ್ಲಾ  ಹೊಸ ಬಟ್ಟೆ ಖರೀದಿ, ನೆಂಟರಿಷ್ಟರು ಬರೋದು ಹೋಗೋದು ಮುಂತಾದ ಸಂಭ್ರಮವಿರುತ್ತಿತ್ತು. ಆದರೆ ಈ ವರ್ಷ ಯಾವುದೇ ಸದ್ದು ಗದ್ದಲ ಆಡಂಬರಗಳಿಲ್ಲದೆ  ದೇವರ ಉತ್ಸವ ಅಂತೂ ನಡೆಯಿತು. ದೇವಿಯ ದರ್ಶನ ಪಡೆದು ಸಂತುಷ್ಟರಾದರು ಪರಿಸರದ ಜನರು.  

Exit mobile version