ಚಿತ್ರದುರ್ಗದಲ್ಲಿ ದೇಶದ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಪತ್ತೆ

ಬೆಂಗಳೂರು, ಜೂ. 01: ದೇಶದಲ್ಲಿ ಕೊರೊನಾ ಆತಂಕದ ನಡುವೆ ಎದುರಾಗಿರುವ ಬ್ಲ್ಯಾಕ್ ಫಂಗಸ್ ಸೋಂಕಿನ ಹೊಸ ರೂಪ ಎನ್ನಲಾಗಿರುವ ಚರ್ಮದ ಬ್ಲ್ಯಾಕ್ ಫಂಗಸ್ ಸೋ‌ಂಕಿನ ಮೊದಲ ಪ್ರಕರಣ ರಾಜ್ಯದಲ್ಲಿ ಪತ್ತೆಯಾಗಿದೆ.

ಕರ್ನಾಟಕದಲ್ಲಿ ದೊಡ್ಡ ಆತಂಕ ಸೃಷ್ಟಿಸಿರುವ ಕೊರೊನಾ ಸೋಂಕಿನ ಜೊತೆಗೆ ಈಗಾಗಲೇ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಜೊತೆಗೆ ಎಲ್ಲೋ ಫಂಗಸ್ ಆತಂಕ ಮನೆ ಮಾಡಿದ್ದು, ಹಲವು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಸಹ ರಾಜ್ಯದಲ್ಲಿ ಪತ್ತೆಯಾಗಿದೆ. ಅಲ್ಲದೇ ಈ ಸೋಂಕಿಗೆ ತುತ್ತಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದ್ದು, ಜನರಲ್ಲಿ ಆತಂಕ ಸಹ ದುಪ್ಪಟ್ಟಾಗಿದೆ.

ಇದರ ಬೆನ್ನಲ್ಲೇ ಬ್ಲ್ಯಾಕ್ ಫಂಗಸ್ ಸೋಂಕಿನ ಹೊಸ ರೂಪದ ಮೊದಲ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ಈಗ ಚರ್ಮ ಫಂಗಸ್‌ ಅನ್ನೋ ಸೋಂಕು ಎದುರಿಸುವಂತಾಗಿದೆ. ದೇಶದ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಸೋಂಕು ಬೆಳಕಿಗೆ ಬಂದಿದೆ.

Exit mobile version