ಬಾಗಿಲು ತೆರೆದಿದೆ, ಹೋಗೋರು ಹೋಗಬಹುದು; ಹೊಸಬರು ಪಕ್ಷಕ್ಕೆ ಬರಬಹುದು: ಎಚ್.ಡಿ.ಕೆ

ಮೈಸೂರು, ಮಾ. 11: JDS ಬಾಗಿಲು ತೆರೆದಿದೆ, ಹೋಗೋರು ಹೋಗಬಹುದು, ಹೊಸಬರು ಪಕ್ಷಕ್ಕೆ ಬರಬಹುದು. ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಳಬರು ಹೋದರೆ ಹೊಸಬರು ಬರ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ, ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕುವುದು ಹೊಸದೇನಲ್ಲ ಯಾರು ಹೋಗಲಿ ಬಿಡಲಿ ಪಕ್ಷಕ್ಕೇನು ನಷ್ಟವಿಲ್ಲ. ಅವರಿಗೆ ಲಾಭ ಆಗುತ್ತೆ ಎಂದು ಶಿಸ್ತು ಕ್ರಮ ಕೈಗೊಂಡಿಲ್ಲ. ದೇವೇಗೌಡರ ಕುಟುಂಬಕ್ಕೆ ಇದೇನು ಹೊಸದೇನಲ್ಲ. ದೇವೇಗೌಡರು ಯಾರನ್ನ ಬೆಳೆಸಿದ್ದಾರೋ ಅವರೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಹೋಗಬೇಕಾದರೆ ಏನೇನೊ ಒಂದು ಸಬೂಬು ಹೇಳಿಕೊಂಡು ಹೋಗ್ತಾರೆ. ಅದೇ ರೀತಿ ಕಾರ್ಯಕರ್ತರನ್ನ ಬೆಳೆಸುವ ಶಕ್ತಿ ಜೆಡಿಎಸ್ಗೆ ಇದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮಧು ಬಂಗಾರಪ್ಪ ಪಕ್ಷ ತೊರೆಯುವುದು ಹಳೆಯ ವಿಚಾರ. ಇನ್ಮುಂದೆ ಪಕ್ಷ ನಿಷ್ಠೆ ಇಲ್ಲದವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ . ಈ ಹಿಂದೆ ತಾತ್ಕಾಲಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಕೆಲವು ತಪ್ಪುಗಳಾಗಿವೆ . ಮುಂದೆ ಪಕ್ಷ ಸಂಘಟನೆಯೊಂದೇ ಗುರಿ. ತಳಮಟ್ಟದಿಂದ ಜೆಡಿಎಸ್ ಪಕ್ಷವನ್ನ ಕಟ್ಟಿ ಬೆಳೆಸುತ್ತೇವೆ. ರಾಜ್ಯದ ಜನತೆ ಪರವಾಗಿ ಪಕ್ಷ ಎಂದಿಗೂ ಕೆಲಸ ಮಾಡುತ್ತೆ ಅಂತ ತಿಳಿಸಿದರು.

ಇನ್ನು ಇದೇ ವೇಳೆ ಮಹಾಶಿವರಾತ್ರಿ ಹಿನ್ನೆಲೆ, ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿದ್ರು, ಚಾಮುಂಡೇಶ್ವರಿ ದರ್ಶನ ಪಡೆದ್ರು. ಶಿವರಾತ್ರಿ ಪ್ರಯುಕ್ತ ಚಾಮುಂಡೇಶ್ವರಿ, ನಂಜುಂಡೇಶ್ವರ ದರ್ಶನ ಪಡೆದ್ರು , ನಾಡಿನ ಜನತೆಗೆ ಶಿವರಾತ್ರಿ ಶುಭಾಷಯ ತಿಳಿಸಿದ್ರು. ಇನ್ನು ಹೆಚ್ಡಿಕೆಗೆ ಮೇಯರ್ ರುಕ್ಮಿಣಿ ಮಾದೇಗೌಡ, ಶಾಸಕ ಸಾ.ರಾ ಮಹೇಶ್ ಹಾಗೂ ಸ್ಥಳೀಯ ಜೆಡಿಎಸ್ ನಾಯಕರು ಸಾಥ್ ನೀಡಿದ್ರು.

Exit mobile version