ಸರ್ಕಾರಿ ಕಚೇರಿಯಿಂದ ಕೇವಲ ೨ ನಿಮಿಷ ಬೇಗ ಹೊರಟಿದ್ದಿಕ್ಕೆ, ಶಿಕ್ಷೆ ನೀಡಿದ ಜಪಾನ್ ಸರ್ಕಾರ

ನಮ್ಮ ದೇಶದಲ್ಲಿ ಸರ್ಕಾರಿ ನೌಕರರು ಹಾಯಾಗಿರುತ್ತಾರೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಕಚೇರಿಯಿಂದ ತಡವಾಗಿ ಹೊರಡುವ ಉದಾಹರಣೆ ತುಂಬಾನೇ ಕಡಿಮೆ. ಶಿಫ್ಟ್​ 6 ಗಂಟೆಗೆ ಪೂರ್ಣಗೊಳ್ಳುತ್ತದೆ ಎಂದರೆ ಅನೇಕರು 5:45ಕ್ಕೆ ಕಚೇರಿಯಿಂದ ಹೊರಟಿರುತ್ತಾರೆ. ಆದರೆ, ಬೇರೆ ದೇಶದಲ್ಲಿ ಈ ರೀತಿ ಇಲ್ಲ. ಜಪಾನ್​ನಲ್ಲಿ ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಟ ಸಿಬ್ಬಂದಿಗೆ ಶಿಕ್ಷೆ ನೀಡಲಾಗಿದೆ.

ಹೌದು, ಜಪಾನ್​ನಲ್ಲಿ ಇತ್ತೀಚೆಗೆ ಹೀಗೊಂದು ವಿಚಾರ ಬೆಳಕಿಗೆ ಬಂದಿದೆ. ಶಿಕ್ಷೆ ರೂಪದಲ್ಲಿ ಇವರ ಅರ್ಧ ದಿನದ ಸ್ಯಾಲರಿ ಕಟ್​ ಮಾಡಲಾಗಿದೆ. 2019 ಮೇ ಇಂದ ಜನವರಿ 2021ರವರೆಗೆ ಏಳು ಸಿಬ್ಬಂದಿ 316 ಬಾರಿ 5.15ಕ್ಕೆ ತೆರಳುವ ಬದಲು 5.13ಕ್ಕೆ ತೆರಳಿದ್ದಾರೆ. ಅಂದರೆ, ಎರಡು ನಿಮಿಷ ಕಚೇರಿಯಿಂದ ಮೊದಲು ಹೊರಟಂತಾಗಿದೆ. ಇದನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿದೆ. ಅಷ್ಟೇ ಅಲ್ಲ ಸ್ಯಾಲರಿ ಕೂಡ ಕಟ್​ ಮಾಡಿದೆ.

ನಮಗೆ ಸಂಜೆ 5.17ಕ್ಕೆ ಬಸ್​ ಇದೆ. ಈ ಬಸ್​ ತಪ್ಪಿದ ನಂತರ ಮತ್ತೊಂದು ಬಸ್​ ಇರೋದು 5.47ಕ್ಕೆ. ಈ ಕಾರಣಕ್ಕೆ ನಾವು ಎರಡು ನಿಮಿಷ ಮೊದಲು ತೆರಳುತ್ತಿದ್ದೆವು. ಆದರೆ, ಸರ್ಕಾರ ಇದನ್ನು ಇಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎಂದು ತಿಳಿದಿರಿಲಿಲ್ಲ ಎಂದಿದ್ದಾರೆ ಸರ್ಕಾರಿ ನೌಕರರು. ಇನ್ನು, ಸರ್ಕಾರಿ ನೌಕರರು ಇದಕ್ಕೆ ಪೂರ್ಣ ಪ್ರಮಾಣದ ಸ್ಯಾಲರಿಯನ್ನು ಹಾಕುವಂತೆ ಮನವಿ ಮಾಡಿದ್ದಾರೆ. ಆದರೆ, ಇದನ್ನು ಸರ್ಕಾರ ನಿರಾಕರಿಸಿದೆ. ಸರಿಯಾದ ಸಮಯಕ್ಕೆ ಬಂದು ಸರಿಯಾದ ಸಮಯಕ್ಕೆ ತೆರಳಿದರೆ ಮಾತ್ರ ಸ್ಯಾಲರಿ ನೀಡುತ್ತೇವೆ ಎಂದು ಹೇಳಿದೆ.

Exit mobile version