ದಿ. ಕಲಾಂ 89ನೇ ಜನ್ಮದಿನಕ್ಕೆ ಶುಭ ಕೋರಿದ ಪ್ರಧಾನಿ

ನವದೆಹಲಿ, ಅ. 15: ಭಾರತದ ಕ್ಷಿಪಣಿ ಮನುಷ್ಯರೆಂದೇ ಕರೆಸಿಕೊಳ್ಳುವ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ 89ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್‌ ಮೂಲಕ ಶುಭ ಕೋರಿದ್ದಾರೆ.

“ಅಬ್ದುಲ್ ಕಲಾಂ ಅವರು ಒಬ್ಬ ವಿಜ್ಞಾನಿಯಾಗಿ, ಭಾರತದ ರಾಷ್ಟ್ರಪತಿಯಾಗಿ ದೇಶದ ಅಭಿವೃದ್ಧಿಗೆ ಅವರು ನೀಡಿದ ಮಹತ್ತರ ಕೊಡುಗೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಅವರ ಜೀವನ ಪಯಣ ಲಕ್ಷಾಂತರ ಜನಕ್ಕೆ ಸ್ಫೂರ್ತಿ ತುಂಬುತ್ತದೆ” ಅವರ ಜನ್ಮ ದಿನಕ್ಕೆ ಟ್ವಿಟ್ಟರ್‌ ಮೂಲಕ ಶುಭ ಕೋರಿದ್ದಾರೆ.

ಭಾರತದ ಬಾಹ್ಯಾಕಾಶ ಮತ್ತು ಕ್ಷಿಪಣಿ ಕಾರ್ಯಕ್ರಮಗಳ ರೂವಾರಿ, ಸದಾ ಸದೃಢ ಮತ್ತು ಸ್ವಾವಲಂಬಿ ಭಾರತವನ್ನು ಕಟ್ಟಬೇಕೆಂಬ ಹಂಬಲಹೊಂದಿದ್ದ ದೂರದೃಷ್ಟಿಯುಳ್ಳ ನಾಯಕ ಮತ್ತು ವಾಸ್ತುಶಿಲ್ಪಿ ಎಂದೇ ಕರೆಸಿಕೊಳ್ಳುವ  ಮಾಜಿ ರಾಷ್ಟ್ರಪತಿ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜಯಂತಿಯ ಸ್ಮರಣೆ. ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಅಮರ ಪರಂಪರೆ ಸ್ಫೂರ್ತಿಯ ಒಂದು ರೂಪವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Exit mobile version