ದೂರದರ್ಶನದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಪ್ರಸಾರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರೋಧ

Tiruvanantapuram: ಕಳೆದ ವರ್ಷ ತೆರೆಕಂಡು ತೀವ್ರ ವಿವಾದಕ್ಕೊಳಗಾಗಿದ್ದ ಲವ್ ಜಿಹಾದ್ (Love-Jihad) ಕಥಾಹಂದರವಿರುವ ದಿ ಕೇರಳ ಸ್ಟೋರಿ ಇದೀಗ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ .ಲೋಕಸಭಾ ಚುನಾವಣೆಯಲ್ಲಿ ಕೋಮು ಉದ್ವಿಗ್ನತೆ ಉಲ್ಪಣಗೊಳ್ಳುವ ಕಾರಣ ಕೇಂದ್ರ ಸರ್ಕಾರಕ್ಕೆ ಸೇರಿದ ದೂರದರ್ಶನ ವಾಹಿನಿಯಲ್ಲಿ ವಿವಾದಿತ `ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಪ್ರಸಾರ ಮಾಡುವ ಪ್ರಸಾರ ಭಾರತಿ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆ (Loksabha Election) ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಚಿತ್ರ ದೂರದರ್ಶನದಲ್ಲಿ ಪ್ರಸಾರವಾದರೆ ಕೋಮುಭಾವನೆಯನ್ನು ಕೆರಳಿಸುವ ಸಾಧ್ಯತೆ ಇದೆ . ಹಾಗಾಗಿ ದೂರದರ್ಶನ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ದೂರದರ್ಶನವು ಬಿಜೆಪಿ ಮತ್ತು ಆರೆಸ್ಸೆಸ್ಸನ ಪ್ರಚಾರ ಯಂತ್ರವಾಗಬಾರದು ಎಂದು ಕುಟುಕಿದ್ದಾರೆ. ಇನ್ನು ದೂರದರ್ಶನವು ಕೇರಳ ಸ್ಟೋರಿ ಚಲನಚಿತ್ರವನ್ನು (Kerala Story) ಏಪ್ರಿಲ್ 5ರಂದು ಪ್ರಸಾರ ಮಾಡುವುದಾಗಿ ಈ ಮೊದಲು ತಿಳಿಸಿತ್ತು.

ಇನ್ನು ಈ ಕುರಿತಾಗಿ ಸಾಮಾಜಿಕ ಜಾಲ ತಾಣವಾದ ಎಕ್ಸ್ ಅಲ್ಲಿ ಪೊಸ್ಟ್ ಮಾಡಿರುವ ಅವರು ದ್ವೇಷವನ್ನು ಬಿತ್ತುವ ಇಂತಹ ದುರುದ್ದೇಶರಪೂರಿತ ಸಿನಿಮಾವಿರೋಧಿಸುವಲ್ಲಿ ಕೇರಳವು ಎಂದಿಗೂ ಹಿಂದೆ ಬಿದ್ದಿಲ್ಲ.ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಭಾವವಿಲ್ಲ ನೀವು ಸಿನಿಮಾಗಳ ಮೂಲಕ ಸೃಷ್ಟಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತ್ರವಲ್ಲದೆ ಆಡಳಿತಾರೂಢ ಸಿಪಿಎಂ ಪಕ್ಷ (CPM Party) ಸಹ ದೂರದರ್ಶನದ ಈ ನಿಲುವನ್ನು ಬಲವಾಗಿ ವಿರೋಧಿಸಿದೆ.

ಕೇರಳದ ಜಾತ್ಯತೀತ ಸಮಾಜವನ್ನು ಕದಡಬಲ್ಲ ಇಂತಹ ಸಿನಿಮಾ ನೋಡಿ ಆಗಬೇಕಾದದ್ದು ಏನೂ ಇಲ್ಲ ಬಿಜೆಪಿಯ (BJP) ಇಂತಹ ಪ್ರಯತ್ನವನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದು ತಿಳಿಸಿದೆ.ಈ ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಕೂಡ ಕೇರಳದಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದವು.

Exit mobile version