ಕೊರೋನಾ ಹೊಸ ಪ್ರಕರಣದಲ್ಲಿ ಇಳಿಕೆ, 3 ಲಕ್ಷ ದಾಟಿದ ಸಾವಿನ ಸಂಖ್ಯೆ

ನವದೆಹಲಿ, ಮೇ. 24: ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 2,22,315ಕ್ಕೆ ಇಳಿಕೆಯಾಗಿದ್ದು, ಇದು 38 ದಿನಗಳಲ್ಲಿ ವರದಿಯಾದ ಅತಿ ಕಡಿಮೆ ದೈನಂದಿನ ಪ್ರಕರಣಗಳಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 2,67,52,447ಕ್ಕೆ ಏರಿಕೆಯಾಗಿದೆ. ಒಟ್ಟು ಮೃತರ ಸಂಖ್ಯೆಯು 3 ಲಕ್ಷವನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಕಳೆದ ೨೪ಗಂಟೆಯಲ್ಲಿ 4,454 ಮಂದಿ ಮೃತಪಟ್ಟಿದ್ದು, ಈ ಮೂಲಕ ಒಟ್ಟು ಸಾವಿನ ಸಂಖ್ಯೆಯು 3,03,720ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 27,20,716ಕ್ಕೆ ಇಳಿಕೆಯಾಗಿದ್ದು, ಇದೇ ವೇಳೆ ದೇಶದ ಚೇತರಿಕೆ ಪ್ರಮಾಣವು ಶೇಕಡ 88.69ಕ್ಕೆ ಹೆಚ್ಚಿದೆ. ಈವರೆಗೆ 2,37,28,011 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ದೇಶದ ಸಾವಿನ ಪ್ರಮಾಣವು ಶೇಕಡ 1.14ಕ್ಕೆ ಹೆಚ್ಚಿದೆ ಎಂದು ಸಚಿವಾಲಯವು ಹೇಳಿದೆ.

ಭಾನುವಾರದವರೆಗೆ ಒಟ್ಟು 33.05 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದೆ

Exit mobile version