ಮುಂದೂಡಿಕೆಯಾಗಿದ್ದ ಕೆ-ಸೆಟ್ ಪರೀಕ್ಷೆಗೆ ದಿನಾಂಕ ನಿಗದಿ: ಏ.25ಕ್ಕೆ ಪರೀಕ್ಷೆ ನಡೆಸಲು ನಿರ್ಧಾರ

ಮೈಸೂರು, ಏ. 15: ಮೈಸೂರು ವಿಶ್ವವಿದ್ಯಾನಿಲಯ ಕಾರಣಾಂತರಗಳಿಂದ ಮುಂದೂಡಿಕೆ ಮಾಡಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ.)ಗೆ ದಿನಾಂಕವನ್ನು ಮರುನಿಗದಿ ಮಾಡಿದೆ.

ಮೈಸೂರು ವಿಶ್ವವಿದ್ಯಾನಿಲಯ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ.) ಯನ್ನು ದಿನಾಂಕ 11 ನೇ ಏಪ್ರಿಲ್ 2021 ರಂದು ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆ ಮುಂದೂಡಲಾಗಿತ್ತು. ಆದ್ದರಿಂದ, ಇದೀಗ ಕೆಸೆಟ್ 2021 ಪರೀಕ್ಷೆಯನ್ನು 25.04.2021(ಭಾನುವಾರ) ರಂದು ನಡೆಸಲು  ಮೈಸೂರು ವಿಶ್ವ ವಿದ್ಯಾನಿಲಯ ನಿರ್ಧರಿಸಿದೆ.

ಕೆಸೆಟ್ 2021ರ ಪರೀಕ್ಷೆಯನ್ನು ನಡೆಸಲು ಪತ್ರದ ಮುಖಾಂತರ ಈಗಾಗಲೇ ಕರ್ನಾಟಕ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಾರಿಗೆ ಅಧಿಕಾರಿಗಳ ಗಮನಕ್ಕೆ ತರುತ್ತಾ ಪರೀಕ್ಷೆಯನ್ನ ಯಶಸ್ವಿಗೊಳಿಸಬೇಕು ಎಂದು ಕೆಸೆಟ್ ಕೇಂದ್ರ, ಮೌಲ್ಯಭವನ, ಮೈಸೂರು ವಿಶ್ವ ವಿದ್ಯಾನಿಲಯ ಸಂಯೋಜನಾಧಿಕಾರಿ ತಿಳಿಸಿದ್ದಾರೆ.

Exit mobile version