ಇತಿಹಾಸ ಕಂಡ ಅತ್ಯಂತ ಕ್ರೂರ ಹಾಗೂ ಅಪಾಯಕಾರಿ ಮಹಿಳೆಯರು ಇವರೇ ನೋಡಿ!

ಎಲಿಜಬೆತ್ ಬಾತರಿ : ಕೌಂಟೆಸ್ ಬಾಟರಿ, ಅಥವಾ ಬ್ಲಡ್ ಕೌಂಟೆಸ್ ಎಂದು ಕರೆಯಲ್ಪಡುವ ಈಕೆ ಪ್ರಪಂಚದಲ್ಲಿಯೇ ಅತ್ಯಂತ ಕಠಿಣ ಸರಣಿ ಕೊಲೆಗಾರರಲ್ಲಿ (The Torture Queen) ಒಬ್ಬಳು.

ದಂತಕಥೆಯ ಪ್ರಕಾರ, ರಾಣಿ ಎಲಿಜಬೆತ್ (Elizabeth Bathory) ಸೌಂದರ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಹಾಗೂ ಹೆಚ್ಚಿನ ಸೌಂದರ್ಯವನ್ನು ಪಡೆದುಕೊಳ್ಳಲು ಏನನ್ನಾದರೂ ಮಾಡಲು ಸಿದ್ಧವಾಗಿದ್ದಳು.

ರಕ್ತದ ಸ್ನಾನವನ್ನು ಮಾಡುವುದರಿಂದ, ವರ್ಷಗಳ ಕಾಲ ತನ್ನ ಯೌವ್ವನ ಮತ್ತು (The Torture Queen) ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಈಕೆ ನಂಬಿದ್ದಳು.

ಈಕೆಯನ್ನು ರಕ್ತಪಿಪಾಸು ಮಹಿಳೆಯರಲ್ಲಿ ಒಬ್ಬಳು ಎಂದು ಕರೆಯುತ್ತಾರೆ. ರಕ್ತದ ಸ್ನಾನಕ್ಕಾಗಿ, 16ನೇ ಶತಮಾನದ ಕೊನೆಯಲ್ಲಿ ಹಾಗೂ 17ನೇ ಶತಮಾನದ ಆರಂಭದಲ್ಲಿ,

ಸ್ಲೊವಾಕಿಯಾದಲ್ಲಿನ ತನ್ನ ಕೋಟೆಯಾಗಿದ್ದ ಕಾಕ್ಟಿಸ್ ನಲ್ಲಿ ಸುಮಾರು 650 ಕ್ಕಿಂತ ಹೆಚ್ಚು ಯುವತಿಯರನ್ನು ಹಿಂಸಿಸಿ ಕೊಂದಳು.

ಈಕೆ ತನ್ನ ದುಷ್ಕೃತ್ಯವನ್ನು ಮುಚ್ಚಿ ಹಾಕಿದರೂ, ಹಂಗೇರಿಯನ್ ಕೋಟೆಯಾದ ಚೈಟ್ನದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಬೇಕಾಯಿತು. ಆದರೆ ರಕ್ತಪಿಪಾಸುವಾಗಿದ್ದ ಈಕೆಗೆ, ಈ ಶಿಕ್ಷೆ ಬಹಳ ಕಡಿಮೆ.

ಇದನ್ನೂ ಓದಿ : https://vijayatimes.com/health-tips-of-sugarcane/


ಮೇಯ್ರಾ ಹಿಂಡ್ಲೆ : “ಬ್ರಿಟನ್ನ ಅತ್ಯಂತ ದುಷ್ಟ ಮಹಿಳೆ” ಎಂಬ ಕುಖ್ಯಾತಿ ಪಡೆದ ಮಹಿಳೆ ಮೇರಾ ಹಿಂಡ್ಲೆ (Mera Hindle). ಈಕೆ ತನ್ನ ಪ್ರಿಯಕರನಾಗಿದ್ದ ಮನೋವಿಕೃತ ಸ್ಯಾಡೀಸ್ಟ್ ಇಯಾನ್ ಬ್ರಾಡಿ ಜೊತೆಯಲ್ಲಿ ಸೇರಿಕೊಂಡು,

10 ರಿಂದ 17 ವರ್ಷ ವಯಸ್ಸಿನ ಐದು ಮಕ್ಕಳಿಗೆ ಕಿರುಕುಳ ನೀಡಿದ್ದಳು, ಅತ್ಯಾಚಾರ(Rape) ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಳು.

60ರ ದಶಕದ ಸಮಯದಲ್ಲಿ, ಅತ್ಯಂತ ದೀರ್ಘಕಾಲದವರೆಗೆ ಈ ಜೋಡಿ ಸರಣಿ ಕೊಲೆಗಾರರಾಗಿ ಮ್ಯಾಂಚೆಸ್ಟರ್ ಮತ್ತು ಪೂರ್ತಿ ಇಂಗ್ಲೆಂಡ್ ಅನ್ನು ಅತ್ಯಂತ ಭಯಭೀತಗೊಳಿಸಿದರು.

ಅಂತಿಮವಾಗಿ ಪೋಲೀಸರ ಕೈಗೆ ಸಿಕ್ಕಿಬಿದ್ದಾಗ, ತಮ್ಮ ಎಲ್ಲಾ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು. ಮೇಯ್ರಾಗೆ ಜೀವಿತಾವಧಿ ಶಿಕ್ಷೆಯನ್ನು ನೀಡಲಾಯಿತು,

ಕೊನೆಗೆ 2002 ರಲ್ಲಿ ಈಕೆ ತನ್ನ 60 ವರ್ಷ ವಯಸ್ಸಿನಲ್ಲಿ ಶ್ವಾಸಕೋಶ ತೊಂದರೆಯಿಂದ ಉಸಿರಾಟದ ವೈಫಲ್ಯದ ಕಾರಣ ಮರಣ ಹೊಂದುತ್ತಾಳೆ.


ಡಾಗ್ಮಾರ್ ಓವರ್ಬೈ : ಅನಾಥಾಶ್ರಮವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಈಕೆ, 1913 ರಿಂದ 1920ರ ಅವಧಿಯಲ್ಲಿ ಅನಾಥಶ್ರಮದ ಮಕ್ಕಳ ಪೈಕಿ 25 ಮಕ್ಕಳನ್ನು ಕೊಂದಳು.

ಆಶ್ರಮದಲ್ಲಿ ಹೆಚ್ಚಿನ ಮಕ್ಕಳ ಬಗ್ಗೆ ವಿಚಾರಿಸುವವರು ಯಾರೂ ಇಲ್ಲದ ಕಾರಣ, ಆಶ್ರಮ ಸೇರುವ ಶಿಶುಗಳ ಬಗೆಗಿನ ದಾಖಲೆಯನ್ನು ಈಕೆ ನಾಶಪಡಿಸಿದಳು.

https://youtu.be/c-fK_yfBAok

ಈಕೆ ಮಕ್ಕಳನ್ನು ಕುತ್ತಿಗೆಯ ಮೇಲೆ ಒಡೆದು ಅಥವಾ ಸುಡುವ ಮೂಲಕ ಕೊಂದುಹಾಕಿ ವಿಕೃತ ಆನಂದ ಅನುಭವಿಸುತ್ತಿದ್ದಳು. ಕೊನೆಗೆ ಸಿಕ್ಕಿಬಿದ್ದ ಓವರ್ಬೈ,

ತಾನು ಮಾಡಿದ 9 ಕೊಲೆಗಳ ಬಗ್ಗೆ ತಪ್ಪೊಪ್ಪಿಕೊಂಡಳು. ಈಕೆಯನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಲಾಯಿತು. ಕ್ರಮೇಣ, ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು.

ಇದನ್ನೂ ಓದಿ : https://vijayatimes.com/health-tips-of-sugarcane/

1929 ರಲ್ಲಿ ತನ್ನ 42 ವರ್ಷ ವಯಸ್ಸಿನ ಡಾಗ್ಮಾರ್ ನರಳಿ ನರಳಿ ಸಾವನ್ನಪ್ಪುತ್ತಾಳೆ. ಡ್ಯಾನಿಷ್ ಇತಿಹಾಸದಲ್ಲೇ ಈ ಪ್ರಕರಣಗಳು ಅತ್ಯಂತ ಭೀಕರ ಎಂದು ಇತಿಹಾಸದ ಪುಟ ಸೇರಿದೆ.


ಡೆಲ್ಫಿನ್ ಲಾಲೋರಿ : ಮೇಡಮ್ ಬ್ಲಾಂಕ್ ಎಂದು ಕರೆಯಲ್ಪಡುವ ಡೆಲ್ಫಿನ್ ಲಾಲೋರಿ ಒಂದು ಕಾಲದಲ್ಲಿ, ನ್ಯೂ ಓರ್ಲಿಯನ್ ನ ಶ್ರೀಮಂತ ಸಮಾಜದವಳಾಗಿದ್ದಳು.

ಆಕೆ ತನ್ನ ಹಿಂಸಾನಂದದ ಪ್ರವೃತ್ತಿಗಳಿಗೆ ಹೆಸರುವಾಸಿಯಾಗಿದ್ದಳು. ಸಾಮಾನ್ಯವಾಗಿ, ಮೇಡಮ್ ಲಾಲೋರಿ ಕಪ್ಪು ಗುಲಾಮರನ್ನು ಅಪಹಾಸ್ಯ ಮಾಡುತ್ತಿದ್ದಳು.

ಈಕೆಯ ವೇಷಭೂಷಣಗಳೂ ಕೂಡ ಭಯಾನಕವಾಗಿರುತ್ತಿತ್ತು.

ಈಕೆ ತನ್ನ ಮನೆಯಲ್ಲಿಯೇ ಸ್ಟವ್ ಸಿಡಿಸಿ, ಇಬ್ಬರು ನಿಗ್ರೋಗಳನ್ನು ಸಾಯಿಸಿದ್ದಳು. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳೇ, ಈಕೆಯ ರಾಕ್ಷಸತ್ವ ಕಂಡು ಬೆಚ್ಚಿಬಿದ್ದಿದ್ದರು.

ಕೆಲವು ವರದಿಗಳ ಪ್ರಕಾರ, ಈಕೆ ಫ್ರಾನ್ಸ್ ಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ, ಒಂದು ಹಂದಿಯಿಂದ ಅಮಾನುಷವಾಗಿ ಸಾವನ್ನಪ್ಪುತ್ತಾಳಂತೆ!
Exit mobile version