ದೇಶದಲ್ಲಿ 2 ಕೋಟಿ ದಾಟಿದ ಒಟ್ಟು ಸೋಂಕಿತರ ಸಂಖ್ಯೆ

ದೆಹಲಿ, ಮೇ. 04: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3.57 ಲಕ್ಷಕ್ಕಿಂತಲೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದೀಗ ದೇಶದಲ್ಲಿರುವ ಕೊವಿಡ್ ರೋಗಿಗಳ ಒಟ್ಟು ಸಂಖ್ಯೆ 2.02 ಕೋಟಿ. ಆ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ 34 ಲಕ್ಷ ಆಗಿದ್ದು 1.66 ಕೋಟಿ ಮಂದಿ ಚೇತರಿಸಿಕೊಂಡಿದ್ದಾರೆ. ಒಂದೇ ದಿನ 3, 449 ಮಂದಿ ಸಾವಿಗೀಡಾಗಿದ್ದು, ಸಾವಿಗೀಡಾದವರ ಸಂಖ್ಯೆ 2.22ಲಕ್ಷಕ್ಕೇರಿದೆ.

ಕಳೆದ 30 ದಿನಗಳಲ್ಲಿ ಇದೇ ಮೊದಲ ಬಾರಿ ಮಹಾರಾಷ್ಟ್ರದಲ್ಲಿ ದಿನವೊಂದಕ್ಕೆ ಪತ್ತೆಯಾದ ಕೊವಿಡ್ ಪ್ರಕರಣಗಳ ಸಂಖ್ಯೆ 50,000ದಿಂದ ಕೆಳಗಿಳಿದಿದೆ. ಸೋಮವಾರ 48,621 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 47,71,022 ಆಗಿದೆ. 567 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 70,851 ಆಗಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಹೇಳಿದೆ. ಏಪ್ರಿಲ್ 3ರಂದು ರಾಜ್ಯದಲ್ಲಿ 49,447 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಏಪ್ರಿಲ್ 1ರಂದು 43,183 ಮತ್ತು ಏಪ್ರಿಲ್2ರಂದು 47,827 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಸರಾಸರಿ 60,000 ಪ್ರಕರಣಗಳು ಪತ್ತೆಯಾಗಿವೆ.

Exit mobile version