ವೀಕೆಂಡ್ ಪಿಕ್ನಿಕ್ ತಂದ ಆಪತ್ತು: ಮೆಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರ ಸಾವು

ಕೊಡಗು, ಏ. 18: ಆಕಸ್ಮಿಕವಾಗಿ ನೀರಿಗೆ ಬೀಳುತ್ತಿದ್ದ ಸ್ನೇಹಿತೆಯನ್ನು ರಕ್ಷಿಸಲು ಯತ್ನಿಸಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಲ್ಲಳ್ಳಿಯಲ್ಲಿ ಸಂಭವಿಸಿದೆ.

ಮೃತರನ್ನು ಸುಂಟಿಕೊಪ್ಪದ ಶಶಿಕುಮಾರ್​(32) ಮತ್ತು ದಿವ್ಯ (20) ಎಂದು ಗುರುತಿಸಲಾಗಿದೆ. ವೀಕೆಂಡ್​ ಹಿನ್ನೆಲೆಯಲ್ಲಿ ಆರು ಜನರ ತಂಡ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಲಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ತಮ್ಮೊಂದಿಗೆ ಬಂದಿದ್ದ ದಿವ್ಯಾ ಎಂಬಾಕೆ ಆಕಸ್ಮಿಕವಾಗಿ ಜಲಪಾತದ ಕೆಳಗೆ ಬೀಳುತ್ತಿದ್ದರು. ಈ ವೇಳೆ ದಿವ್ಯಾಳನ್ನು ರಕ್ಷಿಸಲು ಹೋಗಿ ಶಶಿಕುಮಾರ್​ ಸಹ ಮೃತಪಟ್ಟಿದ್ದಾರೆ.

ಅನಿರೀಕ್ಷಿತ ಸಾವಿನಿಂದ ಎರಡು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಸೋಮವಾರಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version