ಈ ದೇಶದಲ್ಲಿ ಬಡತನವೇ ಇಲ್ಲ… ಆ ದೇಶ ಯಾವುದು ಗೊತ್ತಾ?

ಬೀಜಿಂಗ್, ಫೆ. 26: ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ ಚೀನಾದಲ್ಲಿ ತೀವ್ರ ಬಡತನವು ಸಂಪೂರ್ಣ ಅಂತ್ಯವಾಗಿದೆ ಎಂದು ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ಅಧಿಕೃತವಾಗಿ ಘೋಷಿಸಿದ್ದಾರೆ.

ಚೀನಾದಲ್ಲಿ ತೀವ್ರ ಬಡತನದಲ್ಲಿ ಯಾರೂ ಸಹ ಜೀವಿಸುತ್ತಿಲ್ಲ ಎಂದು ಕಳೆದ ನವೆಂಬರ್​​ನಲ್ಲಿ ಘೋಷಿಸಲಾಗಿತ್ತು. ಈ ವೇಳೆಗಾಗಲೇ 99 ಮಿಲಿಯನ್ ಜನರ ವಾರ್ಷಿಕ ಆದಾಯವು 2,300 ಯುವಾನ್​ (355 ಡಾಲರ್) ಗಿಂತಲೂ ಕಡಿಮೆಯಾಗಿಲ್ಲ ಎಂದು ಅಂದಾಜಿಸಲಾಗಿತ್ತು. 2012ರಲ್ಲಿ ಅಧಿಕಾರ ವಹಿಸಿಕೊಂಡ ಕ್ಸಿ ಬಡತನ ನಿರ್ಮೂಲನೆಯೇ ಮೂಲಗುರಿ ಎಂದು ಘೋಷಿಸಿದ್ದರು. ಚೀನಾ ಬಡತನ ನಿರ್ಮೂಲನೆ ಮಾಡುವ ಯುಎನ್ ಗುರಿ 2030ನ್ನು 10 ವರ್ಷಗಳ ಮುಂಚಿತವಾಗಿ ಸಾಧಿಸಿದೆ ಎಂದು ಅವರು ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ, ಪ್ರಸ್ತುತ ಬಡತನ ರೇಖೆಯಡಿಯಲ್ಲಿ ವಾಸಿಸುತ್ತಿರುವ ಅಂತಿಮ 98.99 ಮಿಲಿಯನ್ ಬಡ ಗ್ರಾಮೀಣ ನಿವಾಸಿಗಳಾಗಿದ್ದು ಅವರೆಲ್ಲರನ್ನೂ ಬಡತನ ರೇಖೆಗಿಂತ ಮೇಲೆತ್ತಲಾಗಿದೆ.
.
ಕ್ಸಿ ಪ್ರಕಾರ, ಸುಮಾರು 10 ಮಿಲಿಯನ್ ಜನರು ಹೊಸ ಮನೆಗಳಿಗೆ ತೆರಳಿದರು ಮತ್ತು 27 ಮಿಲಿಯನ್ ಜನತೆಯ ಮನೆ ನವೀಕರಿಸಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು 1.6 ಟ್ರಿಲಿಯನ್ ಯುವಾನ್ ( 250 ಬಿಲಿಯನ್) ಖರ್ಚು ಮಾಡಿದೆ ಎಂದಿದ್ದಾರೆ. ಚೀನಾ ಬಡತನ ನಿವಾರಣೆಗೆ ಸುಮಾರು 1.6 ಟ್ರಿಲಿಯನ್ ಯುವಾನ್ (ಸುಮಾರು 246 ಬಿಲಿಯನ್ ಯುಎಸ್ ಡಾಲರ್) ಹಣವನ್ನು ಹೂಡಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

Exit mobile version