vijaya times advertisements
Visit Channel

ಈ ಲಕ್ಷಣಗಳು ಕಾಣಿಸಿಕೊಂಡರೆ ಕಿಡ್ನಿ ಸಮಸ್ಯೆ ಇರಬಹುದು, ಎಚ್ಚರ!

Kidney

ಕಿಡ್ನಿ(Kidney) ನಮ್ಮ ದೇಹದಲ್ಲಿರುವ ಅತಿ ಮುಖ್ಯ ಅಂಗಗಳಲ್ಲಿ ಒಂದಾಗಿದೆ. ರಕ್ತವನ್ನು ಶುದ್ದೀಕರಿಸಲು ಮತ್ತು ದೇಹದೊಳಗಿನ ತ್ಯಾಜ್ಯವನ್ನು ಹೊರ ಹಾಕುವಲ್ಲಿ ಕಿಡ್ನಿ ಅತಿ ಮುಖ್ಯ ಪಾತ್ರ ವಹಿಸುತ್ತದೆ(These symptoms can cause kidney disease).

ಆದರೆ ಇತ್ತೀಚೆಗೆ ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಮ್ಮ ಆಧುನಿಕ ಜೀವನ ಶೈಲಿ, ಕಿಡ್ನಿ ಕಾರ್ಯದ ಮೇಲೆ ಪರಿಣಾಮ ಬೀರಬಹುದರಿಂದ, ಕಿಡ್ನಿಯು ದೀರ್ಘಕಾಲಿಕವಾಗಿ ಸಮಸ್ಯೆಯನ್ನು ಎದುರಿಸಬಹುದು.

Kidney Stones

ಹೀಗಾಗಿ ಆರಂಭದಲ್ಲೇ ಕಿಡ್ನಿ ಸಮಸ್ಯೆಯನ್ನು ಗುರುತಿಸುವುದು ಮುಖ್ಯ. ಕೆಲವು ಲಕ್ಷಣಗಳು ಕಂಡುಬಂದರೂ ಜನರು ಅದನ್ನು ಕಡೆಗಣಿಸುತ್ತಾರೆ. ಇಂತಹ ಕೆಲ ಲಕ್ಷಣಗಳ ಮಾಹಿತಿ ಇಲ್ಲಿದೆ ನೋಡಿ(These symptoms can cause kidney disease).

ಮೂತ್ರವಿಸರ್ಜನೆಯ(Urine Pass) ನಿರಂತರತೆ ಮೇಲೆ ಪರಿಣಾಮವಾದರೆ ಆಗ ಕಿಡ್ನಿಗೆ ಏನಾದರೂ ಸಮಸ್ಯೆ ಆಗಿದೆ ಎಂದು ಹೇಳಬಹುದಾಗಿದೆ.

ಅವುಗಳೆಂದರೆ, ಮೂತ್ರ ವಿಸರ್ಜನೆಗೆ ಕಷ್ಟಪಡುವುದು, ಮೂತ್ರದಲ್ಲಿ ಬಿಳಿ ಪದಾರ್ಥವು ಹೊರಗೆ ಬರುವುದು, ಮೂತ್ರದಲ್ಲಿ ಕೆಟ್ಟ ವಾಸನೆ, ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆಗೆ ಅವಸರ, ಮೂತ್ರವು ಕಡು ಬಣ್ಣಕ್ಕೆ ತಿರುಗುವುದು.

https://vijayatimes.com/siddaramaiah-for-kolar-vidhansabha/

ಮೂತ್ರದಲ್ಲಿ ರಕ್ತ ಕಂಡುಬಂದರೆ ತಕ್ಷಣ ನೆಪ್ರೋಲಜಿ ತಜ್ಞ ವೈದ್ಯರನ್ನು ಸಂಪರ್ಕಿಸಿ. ಸೂಕ್ತ ಪರೀಕ್ಷೆಗಳನ್ನು ಮಾಡಿಸಿ.

kidney

ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಕಾಲು, ಪಾದ, ಮುಖದಲ್ಲಿ ಊತವು ಕಂಡುಬರುತ್ತದೆ. ಇಂತಹ ಊತವನ್ನು ನಿರ್ಲಕ್ಷ್ಯ ಮಾಡಬೇಡಿ.

ಕಿಡ್ನಿಯು ಎರಿಥ್ರೋಪೊಯೆಟಿನ್ ಎನ್ನುವ ಹಾರ್ಮೋನ್(Harmone) ಬಿಡುಗಡೆ ಮಾಡುವುದರಿಂದ ಕೆಂಪು ರಕ್ತದ ಕಣಗಳು(Red Blood Cells) ಆಮ್ಲಜನಕ(Oxygen) ಸಾಗಿಸಲು ನೆರವಾಗುವುದು.

ಕಿಡ್ನಿ ಕಾರ್ಯಕ್ಕೆ ತೊಂದರೆ ಆದರೆ ರಕ್ತಹೀನತೆ, ನಿಶಕ್ತಿ ಕಂಡುಬರುವುದು. ಹಿಂಬದಿಯ ಭಾಗದಲ್ಲಿ ಪಕ್ಕೆಲುಬುಗಳ ಕೆಳಗಡೆ ಕಿಡ್ನಿಯು ಇರುವುದು.

ಹೀಗಾಗಿ ಸೊಂಟದ ಭಾಗದಲ್ಲಿ ನೋವು ಕಂಡುಬಂದರೆ ಅದು ಕಿಡ್ನಿ ಕಾಯಿಲೆ ಅಥವಾ ಕಿಡ್ನಿ ಕಲ್ಲಿನ ಸಮಸ್ಯೆ ಆಗಿರಬಹುದು. ವೈದ್ಯರ ಬಳಿ ಪರೀಕ್ಷೆ ಮಾಡಿಸಿ.

https://youtu.be/JTBUz0XtsJk

These symptoms can cause kidney disease

ಕಿಡ್ನಿ ಸಮಸ್ಯೆಯಿಂದ ಮೆದುಳಿಗೆ ಆಮ್ಲಜನಕದ ಕೊರತೆ ಉಂಟಾಗಿ ತಲೆತಿರುಗುವಿಕೆ ಉಂಟಾಗುತ್ತದೆ. ಕಿಡ್ನಿ ಸಮಸ್ಯೆಯಿದ್ದರೆ ಹೊರಗೆ ವಾತಾವರಣ ಬಿಸಿಯಾಗಿದ್ದಾಗಲೂ ಕೂಡ ಚಳಿಯಾಗಬಹುದು.

ಕಿಡ್ನಿ ಹಾನಿಗೊಳಗಾದರೆ ಇದರಿಂದಾಗಿ ಚರ್ಮದ ತೊಂದರೆ ಮತ್ತು ತುರಿಕೆಗಳು ಕಾಣಿಸಿಕೊಳ್ಳಬಹುದು. ಕಿಡ್ನಿ ತೊಂದರೆ ಇದ್ದರೆ ಶ್ವಾಸಕೋಶದಲ್ಲಿ ದ್ರವ ಸೇರಿಕೊಳ್ಳುತ್ತದೆ. ಇದರಿಂದಾಗಿ ನಿಮಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.

Latest News

Paneer
ಆರೋಗ್ಯ

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ದೇಶ-ವಿದೇಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI
ದೇಶ-ವಿದೇಶ

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.