ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಡ್ರಗ್ಸ್ ಒದಗಿಸಿದ ಮೂವರನ್ನು ಬಂಧಿಸಲಾಗಿದೆ: ಎನ್.ಸಿ.ಬಿ

ಬೆಂಗಳೂರು, ಮಾ. 8: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಇಬ್ಬರು ಮುಂಬೈ ಯವರು ಹಾಗೂ ಒಬ್ಬ ಗೋವಾದ ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ. ಇಬ್ಬರು ಹೊರದೇಶದ ಪ್ರಜೆಗಳೂ ಇದರಲ್ಲಿ ಸೇರಿದ್ದಾರೆಂದು ಎನ್ ಸಿ ಬಿ ಸಂಸ್ಥೆ ತಿಳಿಸಿದೆ.

ಎನ್ ಸಿ ಬಿ ಯ ಮುಂಬೈ ತಂಡ ಮತ್ತು ಗೋವಾ ತಂಡ ತನಿಖೆ ನಡೆಸಿದ್ದು ಇದರಲ್ಲಿ ಮುಂಬೈಯಲ್ಲಿ ಯಲ್ಲಿ ಬಂಧಿಸಲಾದ ಇಬ್ಬರನ್ನು ವಿದೇಶೀ ಪ್ರಜೆಗಳು ಎನ್ನಲಾಗಿದೆ. ಇನ್ನು ಗೋವಾದಿಂದ ಹೇಮಂತ್ ಸಾ ಅಲಿಯಾಸ್ ಮಹಾರಾ ಅವರನ್ನು ಗೋವಾದಿಂದ ಬಂಧಿಸಲಾಗಿದೆ.  ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ  ಬಂಧನಕ್ಕೆ ಒಳಗಾಗಿದ್ದ ಅನುಜ್ ಕೇಶ್ವಾನಿ ಮತ್ತು ರೀಗಲ್ ಮಹಾಕಾಲ್ ಅವರಿಗೆ ಡ್ರಗ್ಸ್ ಸರಬರಾಜು ಮಾಡಿದ್ದಾರೆಂದು ಆರೋಪಿಸಲಾಗಿದೆ.

ಗೋವಾದ ಅನೇಕ ಸ್ಥಳಗಳಲ್ಲಿ ಎನ್ ಸಿ ಬಿ ದಾಳಿ ನಡೆಸಿದೆ, ಮತ್ತು ಅಪಾರ ಪ್ರಮಾಣದ ಡ್ರಗ್ಸ್ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ  ಮತ್ತು ಡ್ರಗ್ಸ್  ಪೆಡ್ಲರ್‌ಗಳನ್ನೂ ವಶಕ್ಕೆ ಪಡೆದಿದ್ದಾರೆಂದು ಎನ್ ಸಿ ಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಮುಂಬೈನ ಬಾಂದ್ರಾದ ತನ್ನ ಮನೆಯಲ್ಲಿ ಬಾಲಿವುಡ್  ನಟ ಸುಶಾಂತ್ ಸಿಂಗ್ ಅವರು ಶವವಾಗಿ ಪತ್ತೆಯಾಗಿದ್ದರು ಈ ಬಗ್ಗೆ ತನಿಖೆಯನ್ನು ಮಾಡಿದ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದಾಗಿ ಹೇಳಿದ್ದಾರೆ. ನಂತರ ಈ ಪ್ರಕರಣವನ್ನು ಕೇಂದ್ರ ತನಿಖಾ ಬ್ಯೂರೊ ಸಿಬಿಐ ಗೆ ಹಸ್ತಾಂತರಿಸಿತ್ತು. ಮನಿ ಲಾಂಡರಿಂಗ್ ಮತ್ತು ಡ್ರಗ್ಸ್ ಬಗ್ಗೆ ತನಿಖೆ ನಡೆಸಲು ಜ್ಯಾರಿ ನಿರ್ಧೇಶನಾಲಯ ಮತ್ತು ಎನ್ ಸಿ ಬಿಯನ್ನು ಕರೆದೊಯ್ಯಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈ ಚಿತ್ರೋದ್ಯಮದಲ್ಲಿ ಡ್ರಗ್ಸ್ ಮಾಫಿಯಾದ ತನಿಖೆಗಾಗಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಎನ್ ಸಿ ಬಿ ಇತ್ತೀಚೆಗೆ 11,700 ಪುಟಗಳ ಚಾರ್ಜ್ ಶೀಟನ್ನು ಸಲ್ಲಿಸಿದ್ದು ದಿವಂಗತ ನಟನ ಗೆಳತಿ ರಿಯಾ ಚರ್ಕವರ್ತಿ ಸೇರಿ 32 ಮಂದಿಯನ್ನು ಹೆಸರಿಸಿತ್ತು ಮತ್ತು ರಿಯಾ ಹಾಗೂ ನಟನ ವಾಟ್ಸಪ್ ಚಾಟ್ ಬ್ಯಾಂಕ್ ಖಾತೆಗಳನ್ನು ಆರೋಪಿಯ ಹೇಳಿಕೆಗಳನ್ನೂ ದೃಢಿಕರಿಸಲಾಗಿತ್ತು. ರಿಯಾ ಚರ್ಕವರ್ತಿ ತನ್ನ ನಿವಾಸದಲ್ಲಿ ಡ್ರಗ್ಸ್ ಸಂಗ್ರಹಿಸಿದ್ದಾಗಿ ಮತ್ತು ನಟಿಯ ಸಹೋದರ ಶೋಯಿಬ್ ಡ್ರಗ್ಸ್ ಪೂರೈಕೆ ಮಾಡಿದ್ದಾಗಿ ಎನ್ ಸಿ ಬಿ ಹೇಳಿತ್ತು.

Exit mobile version