ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಗುಣಮುಖರಾದ ಟಾಪ್ 3 ವ್ಯಕ್ತಿಗಳು ಇವರೇ ನೋಡಿ!

ಸೋನಾಲಿ ಬೇಂದ್ರೆ:

ಜುಲೈ 2018 ರಲ್ಲಿ ಸೋನಾಲಿ ಬೇಂದ್ರೆ ಅವರು ಟ್ವಿಟರ್‌ನಲ್ಲಿ ತನಗೆ ಮೆಟಾಸ್ಟಾಟಿಕ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಮತ್ತು ನ್ಯೂಯಾರ್ಕ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಬಹಿರಂಗಪಡಿಸಿದರು. ಮೆಟಾಸ್ಟಾಸಿಕ್ ಕ್ಯಾನ್ಸರ್ನಲ್ಲಿ, ಕ್ಯಾನ್ಸರ್ ಕೋಶಗಳು ದುಗ್ಧರಸ ವ್ಯವಸ್ಥೆ ಅಥವಾ ರಕ್ತಪ್ರವಾಹದ ಮೂಲಕ ದೇಹದ ಹೊಸ ಪ್ರದೇಶಗಳಿಗೆ ಹರಡುತ್ತವೆ. ಕ್ಯಾನ್ಸರ್ ದೇಹದ ಮೂಲ ಭಾಗಗಳಿಂದ ಇತರ ಸ್ಥಳಗಳಿಗೆ ಹರಡಿದಾಗ ಅದನ್ನು ಮೆಟಾಸ್ಟಾಟಿಕ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.

ನ್ಯೂಯಾರ್ಕ್‌ನಲ್ಲಿ ಸೋನಾಲಿಗೆ ಇದು ನಾಲ್ಕನೇ ಹಂತವಾಗಿದೆ ಮತ್ತು ಆಕೆ ಬದುಕುಳಿಯುವ ಯಾವ ಸಾಧ್ಯತೆ ಇಲ್ಲ. ಇದ್ದರೆ ಅದು ಶೇ.30% ಮಾತ್ರ ಎಂದು ಹೇಳಲಾಯಿತು. ಪಾಸಿಟಿವ್ ಆಗಿ ಇದ್ದ ಪರಿಣಾಮ ತಮ್ಮ ಕ್ಯಾನ್ಸರ್ ಚಿಕಿತ್ಸೆಯನ್ನು ನಿಭಾಯಿಸಲು ಸಹಾಯ ಮಾಡಿತು ಎಂದು ಸೋನಾಲಿ ಬೇಂದ್ರೆ ಅವರು ತಿಳಿಸಿದರು. ಕ್ಯಾನ್ಸರ್ ಎಂಬ ಮಾರಕ ಖಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗಿ ಮತ್ತೆ ಹೊಸ ಜಗ್ಗತ್ತು ನೋಡಿದವರಲ್ಲಿ ಇವರು ಒಬ್ಬರು.

ಯುವರಾಜ್ ಸಿಂಗ್ :

2011ರ ವಿಶ್ವಕಪ್ ವಿಜಯದ ನಂತರ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಎಡ ಶ್ವಾಸಕೋಶದಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು
ಪತ್ತೆಯಾಯಿತು. ಇದು ಸೆಮಿನೋಮಾ ಶ್ವಾಸಕೋಶದ ಕ್ಯಾನ್ಸರ್ ಆಗಿತ್ತು. ಯುವರಾಜ್ ಸಿಂಗ್ ಅವರು US ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದು ಮಾರ್ಚ್ 2012 ರಲ್ಲಿ, ಕಿಮೋಥೆರಪಿಯ ಮೂರನೇ ಮತ್ತು ಅಂತಿಮ ಚಿಕಿತ್ಸೆಯನ್ನು ಪೂರ್ಣಗೊಳಿಸಿ ಸಂಪೂರ್ಣ ಗುಣಮುಕ್ತರಾಗಿ ಆಸ್ಪತ್ರೆಯಿಂದ ಹೊರಬಂದರು. ಯುವರಾಜ್ ಅವರೇ ಹೇಳುವಂತೆ, ಪಂದ್ಯಗಳ ಸಮಯದಲ್ಲಿ ಅವರು ತಮ್ಮ ಗಮನವನ್ನು ಆಟದ ಮೇಲೆ ಕೇಂದ್ರೀಕರಿಸಲು ಯೋಚಿಸುತ್ತಿದ್ದರಂತೆ. ಖಾಯಿಲೆಯ ಆರಂಭಿಕ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದ್ದರಂತೆ. ಯುವಿ ಅವರು 2011ರ ಆರಂಭದಲ್ಲಿ ತೀವ್ರವಾದ ಉಸಿರಾಟದ ತೊಂದರೆಯನ್ನು ಅನುಭವಿಸಿದರು. ರಕ್ತವನ್ನು ಉಗುಳುವ ಮೂಲಕ ಕ್ಯಾನ್ಸರ್ ಇರುವುದನ್ನು ಖಚಿತಪಡಿಸಕೊಂಡಿದ್ದರು. ಇದು ಅವರ ಆಟದ ಜೀವನಕ್ಕೆ ಕೊಂಚ ಅಡ್ಡಿ ಪಡಿಸಿತು.

ಯುವರಾಜ್ ಸಿಂಗ್ ಅವರು ಹಲವು ಮಾಧ್ಯಮ ಸಂದರ್ಶನಗಳಲ್ಲಿ, ರೋಗಲಕ್ಷಣದ ಹಂತದಲ್ಲಿ ಕ್ಯಾನ್ಸರ್ ಅನ್ನು ಸ್ವೀಕರಿಸುವುದು, ರೋಗನಿರ್ಣಯವನ್ನು ಒಪ್ಪಿಕೊಳ್ಳುವುದು, ಕ್ಯಾನ್ಸರ್ ವಿರುದ್ಧ ಹೋರಾಡಲು ಸರಿಯಾದ ಮಾರ್ಗವನ್ನು ಅನುಸರಿಸುವುದು ಮತ್ತು ಚಿಕಿತ್ಸೆಯ ಉದ್ದಕ್ಕೂ ಆಶಾವಾದಿಯಾಗಿರುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ. ಒಮ್ಮೆ ನಾನು ಕ್ಯಾನ್ಸರ್ ಅನ್ನು ಒಪ್ಪಿಕೊಂಡರೆ ಮಾತ್ರ ನಾನು ಅದನ್ನು ಸೋಲಿಸಲು ಸಾಧ್ಯವಾಗುವುದು. ಜೀವನವು ಕುಸಿದಾಗ ನಿಮಗೆ ಎದ್ದೇಳಲು ಆಯ್ಕೆಯಿರುತ್ತದೆ ಎಂಬ ಆಶಾವಾದಿ ಮಾತುಗಳನ್ನು ಹೇಳಿ ಕ್ಯಾನ್ಸರ್ ಪೀಡಿತರಿಗೆ ಹಾಗು ಕ್ಯಾನ್ಸರ್ ಪೀಡಿತ ಕುಟುಂಬಸ್ತರಿಗೆ ಧೈರ್ಯತುಂಬಿದರು.

ಸದ್ಗುರು ಜಗ್ಗಿ ವಾಸುದೇವ:


ಸದ್ಗುರು ಜಗ್ಗಿ ವಾಸುದೇವ ಅವರು ಕೂಡ ಕ್ಯಾನ್ಸರ್ ಎಂಬ ಮಾರಕ ಖಾಯಿಲೆಗೆ ಗುರಿಯಾಗಿ ಸಂಪೂರ್ಣವಾಗಿ ಗುಣಮುಖರಾದವರೆ. ಸದ್ಗುರು ಜಗ್ಗಿ ವಾಸುದೇವ ಅವರು ಹೇಳುವ ಪ್ರಕಾರ ಆರೋಗ್ಯವು ಆಧ್ಯಾತ್ಮಿಕತೆಯ ಅಡ್ಡ ಪರಿಣಾಮವಾಗಿದೆ. ನಿಮ್ಮೊಳಗೆ ನೀವು ಸಂಪೂರ್ಣರಾಗಿದ್ದರೆ, ಆರೋಗ್ಯವಾಗಿರುವುದು ಸಹಜ.
ಯೋಗದ ದೃಷ್ಟಿಕೋನದಿಂದ, ವ್ಯವಸ್ಥೆಯು ಒಳಗಿನಿಂದ ಉತ್ಪಾದಿಸುವ ಕ್ಯಾನ್ಸರ್ ಮತ್ತು ಇತರ ಅಡಚಣೆಗಳು ಅಥವಾ ರೋಗಗಳು ಶಕ್ತಿಯ ದೇಹದಲ್ಲಿನ ಅಸಮತೋಲನದಿಂದ ಉಂಟಾಗುತ್ತವೆ ಎಂದು ಹೇಳಿದರು. ಪ್ರತಿಯೊಬ್ಬರ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಇರುತ್ತವೆ. ಆದರೆ ಕೆಲವು ಕ್ಯಾನ್ಸರ್ ಕೋಶಗಳು ಅಸ್ತವ್ಯಸ್ತಗೊಂಡಿರುವುದು ನಿಮ್ಮ ಜೀವನ ಅಥವಾ ಆರೋಗ್ಯದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.

  • ರಮಿತ ಕಾಮನಾಯಕನ ಹಳ್ಳಿ

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.