ಶ್ರೀರಾಮ್‌ ಗ್ರೂಪ್‌ ಸಂಸ್ಥೆಗೆ ಗುಡ್ ಬೈ ಹೇಳಿದ ಆರ್‌.ತ್ಯಾಗರಾಜನ್‌ ಅವರು 6,200 ಕೋಟಿ ರೂ. ಮೊತ್ತದ ಷೇರನ್ನೂ ಉದ್ಯೋಗಿಗಳಿಗೆ ಹಂಚಿಕೆ

ಜೀವನಕ್ಕೊಂದು ಚಿಕ್ಕ ಮನೆ, ಓಡಾಡುವುದಕ್ಕೆ ಪುಟ್ಟ ಕಾರು, ಇನ್ನು ಮೊಬೈಲೂ (thygarajan viral news) ಇಲ್ಲದಿರುವ ಖಾಲಿ ಕೈ ಇದು ಯಾವುದೊ ಒಬ್ಬ ಸಾಮಾನ್ಯ ವ್ಯಕ್ತಿಯ ಕಥೆಯಲ್ಲ.

ಹೀಗೆ ಸರಳವಾಗಿ ಬದುಕುತ್ತಿರುವುದು ಆಗರ್ಭ ಶ್ರೀಮಂತ. ಅವರೇ 70,000 ಕೋಟಿ ರೂ. ಮೌಲ್ಯದ ಶ್ರೀರಾಮ್‌ ಗ್ರೂಪ್‌ ಸಂಸ್ಥಾಪಕ ಆರ್‌.ತ್ಯಾಗರಾಜನ್‌ (R.Tyagarajan) ಕಂಪನಿಯಲ್ಲಿದ್ದ

6,200 ಕೋಟಿ ರೂ. ಮೊತ್ತದ ಷೇರನ್ನೂ ಉದ್ಯೋಗಿಗಳಿಗೆ ಹಂಚಿರುವ ಅವರು ಇದೀಗ ಸರಳ ನಿವೃತ್ತ ಜೀವನಕ್ಕೆ ಸಾಗಿಸುತ್ತಾ ಸಂತೋಷವಾಗಿದ್ದಾರೆ.

ನಮಗೆಲ್ಲಾ ಉದ್ಯಮಿಗಳು ಎಂದ ಕೂಡಲೇ ನೆನಪಾಗೋದು ಕೋಟ್ಯಂತರ ರೂಪಾಯಿ ಆಸ್ತಿ, ದೊಡ್ಡ ಬಂಗಲೆ (Bungalow), ಐಷಾರಾಮಿ ಕಾರು, ಕೈಗೊಂದು ಕಾಲಿಗೊಂದು ಆಳು ಈ ರೀತಿಯ ಕಲ್ಪನೆಗಳೇ

ಕಣ್ಮುಂದೆ ಬರುತ್ತದೆ. ಆದರೆ ಇದಕ್ಕೆ ವಿರುದ್ಧವೆಂಬಂತೆ ಬದುಕುತ್ತಿರುವವರು ಶ್ರೀರಾಮ್‌ ಗ್ರೂಪ್‌ (Shriram Group) ಸಂಸ್ಥಾಪಕ ಆರ್‌. ತ್ಯಾಗರಾಜನ್‌ ಅವರು

ಇವರು ಕಡು ಬಡವರಿಗೆ ಮತ್ತು ಸ್ವಲ್ಪ ಆದಾಯದ ಸಾಲಗಾರರಿಗೆ ಸಾಲವನ್ನು ನೀಡುವುದೂ ಒಂದು ರೀತಿಯ ಸಮಾಜವಾದ ಎಂದು ನಂಬಿ ಉದ್ಯಮ ಆರಂಭಿಸಿದವರು. ಅಷ್ಟೇ ಅಲ್ಲದೆ ಬ್ಯಾಂಕ್‌ನಿಂದ

(Bank) ಸಾಲ ಪಡೆಯಲಾಗದವರಿಗೆ ಕಡಿಮೆ ದರದಲ್ಲಿ ಸಾಲ ನೀಡಿ, ಇದು ಸುರಕ್ಷಿತ, ಲಾಭದಾಯಕವೂ ಹೌದು ಎಂದು ಸಾಬೀತು ಮಾಡಿದರು .

ಬೆಳ್ತಂಗಡಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಲೋ ಬಿಪಿ ಕಾರಣದಿಂದ ಹೃದಯಾಘಾತಕ್ಕೆ ಬಲಿ! ಸಣ್ಣ ವಯಸ್ಸಿನವರಿಗೆ ದ.ಕ ಜಿಲ್ಲೆಯಲ್ಲಿ ಹಾರ್ಟ್ ಅಟ್ಯಾಕ್ ಹೆಚ್ಚಳ!

ಬ್ಲೂಮ್‌ಬರ್ಗ್ ನ್ಯೂಸ್‌ಗೆ (Bloomberg News) ಸುದೀರ್ಘ ಸಂದರ್ಶನ ನೀಡಿರುವ 85 ವರ್ಷದ ತ್ಯಾಗರಾಜನ್‌ ಅವರು ತಮ್ಮ ಉದ್ಯಮ-ಬದುಕಿನ ಕುರಿತು ಒಮ್ಮೆಯೂ ಸಾಲ ತೆಗೆದುಕೊಳ್ಳದವರಿಗೆ

ನಿಯಮಿತ ಆದಾಯವಿಲ್ಲದವರಿಗೆ ಸಾಲ ನೀಡುವುದು ಅಂದುಕೊಂಡಷ್ಟು ಅಪಾಯಕಾರಿ ಅಲ್ಲ ಎಂದು ಸಾಬೀತುಪಡಿಸಲು ನಾನು ಕಂಪನಿ ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.

ಇವರು ತಮ್ಮ ಕಂಪನಿ (Company) ಸ್ಥಾಪನೆಯ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದು, ನಾನು ಸ್ವಲ್ಪ ಎಡಪಂಥೀಯ ಎನ್ನುತ್ತಾರೆ. ಈಗಾಗಲೇ ಉತ್ತಮ ಜೀವನ ಹೊಂದಿರುವವರ ಬದುಕನ್ನು ಮತ್ತಷ್ಟು

ಆಹ್ಲಾದಕರವಾಗಿಸಲು ನನಗೆ ಯಾವ ಆಸಕ್ತಿಯೂ ಇರಲಿಲ್ಲ. ಅದರ ಬದಲಿಗೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಜನರ ಕಷ್ಟಗಳನ್ನು ನಿವಾರಿಸಲು ನಾನು ಬಯಸುತ್ತಿದ್ದೆ ಎಂದು ಹೇಳಿದ್ದಾರೆ.

ಸುಮಾರು 70,000 ಕೋಟಿ ರೂ.ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ ನಿಲ್ಲಿಸಿದೆ ಎಂದರು. ಈಗ ತಮ್ಮ ಸಂಪತ್ತನ್ನೆಲ್ಲ ಉದ್ಯೋಗಿಗಳಿಗೆ ದಾನ ನೀಡಿ ಕಂಪನಿಯಿಂದ ಹೊರನಡೆದು

ನಿವೃತ್ತ ಜೀವನ (thygarajan viral news) ನಡೆಸುತ್ತಿದ್ದಾರೆ.

ಹುಟ್ಟು ಶ್ರೀಮಂತನಾದರೂ ಸರಳ ಜೀವನ
ಇವರು ತಮಿಳುನಾಡಿನ (Tamilnadu) ಶ್ರೀಮಂತ ಕೃಷಿ ಕುಟುಂಬದಲ್ಲಿ ಜನಿಸಿದವರು. ತ್ಯಾಗರಾಜನ್‌ (Tyagarajan) ಕಷ್ಟ ನೋಡಿ ಬೆಳೆದವರಲ್ಲ . ಗಣಿತಶಾಸ್ತ್ರದಲ್ಲಿ ಪದವಿ ಪಡೆದು ಕೆಲವು

ಹಣಕಾಸು ಕಂಪನಿಗಳಲ್ಲಿ ಉದ್ಯೋಗಿಯಾಗಿ ಒಳ್ಳೆಯ ಸಂಬಳವನ್ನೂ ಎಣಿಸುತ್ತಿದ್ದರು. ಆದರೆ ಮುಂದೆ ಆಗಿದ್ದೆ ಬೇರೆ. ನ್ಯೂ ಇಂಡಿಯಾ ಅಶ್ಯೂರೆನ್ಸ್ ಕೊ. (New India Assurance Co.),

ವೈಶ್ಯ ಬ್ಯಾಂಕ್, ಜೆಬಿ ಬೋಡಾ & ಕೊ. ಮೊದಲಾದ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಗ, ಜನರು ಬಂದು ಸೆಕೆಂಡ್‌ ಹ್ಯಾಂಡ್ ಟ್ರಕ್‌ಗಳನ್ನು (Second Hand Truck) ಖರೀದಿಸಲು ಇವರ ಬಳಿ ಸಾಲ

ಕೇಳುತ್ತಿದ್ದರಂತೆ. ಈ ವೇಳೆ ತಮ್ಮ ಪಿತ್ರಾರ್ಜಿತ ಆಸ್ತಿಯಿಂದ ಇವರಿಗೆಲ್ಲ ಸಾಲ ನೀಡಿ ಸೈಡ್‌ ಬಿಸಿನೆಸ್‌ (Side Business) ಮಾಡಲು ಆರಂಭಿಸಿದರಂತೆ.

ಇದು ಅಪಾಯಕಾರಿ ಅಲ್ಲ ಎಂದು ಅರಿತುಕೊಂಡ ತ್ಯಾಗರಾಜನ್‌ ಸೈಡ್‌ ಬಿಸಿನೆಸ್ಸನ್ನೇ ಮುಖ್ಯ ವ್ಯವಹಾರವಾಗಿಸಿ ಉದ್ಯಮಕ್ಕಿಳಿದರು. ಆಗ ಅವರಿಗೆ 37 ವರ್ಷ ವಯಸ್ಸಾಗಿದ್ದು, ಸಮಾಜವಾದಿ ಆದರ್ಶಗಳೊಂದಿಗೆ

ಒಂದಿಷ್ಟು ಸ್ನೇಹಿತರು, ಸಂಬಂಧಿಕರ ಜೊತೆ ಸೇರಿ ಆರಂಭಿಸಿದ ಉದ್ಯಮಕ್ಕೆ ಇವರಿಟ್ಟ ಹೆಸರು ಶ್ರೀರಾಮ್‌ ಚಿಟ್ಸ್‌ (Shriram Chits). ಆರಂಭದಲ್ಲಿ ಈ ರೀತಿ ಆದರ್ಶಗಳನ್ನಿಟ್ಟುಕೊಂಡು ಕಂಪನಿ ನಡೆಸಲು

ಸಾಧ್ಯವಿಲ್ಲ ಎಂದು ಜನ ಮೂಗು ಮುರಿದರು. ಆದರೆ ನನ್ನದು ಯಾವಾಗಲೂ ವಿಶ್ಲೇಷಣಾತ್ಮಕ ಮತ್ತು ಸಮಾನತೆ-ಆಧಾರಿತ ಮನಸ್ಸು ಎನ್ನುವ ಇವರು ಇದೇ ಉದ್ಯಮವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದರು.

ಕಂಪನಿಯಲ್ಲಿ ತಾವು ಹೊಂದಿದ್ದ ಸುಮಾರು 6,200 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಷೇರನ್ನೂ ಸಂಸ್ಥೆಯ ಉದ್ಯೋಗಿಗಳಿಗೆ ದಾನವಾಗಿ ನೀಡಿದ್ದಾರೆ. ಅಲ್ಲದೆ 2006ರಲ್ಲಿ ಶ್ರೀರಾಮ್ ಓನರ್‌ಶಿಪ್‌ ಟ್ರಸ್ಟ್‌

(Shriram Ownership Trust) ಸ್ಥಾಪಿಸಿದ ಅವರು ಶ್ರೀರಾಮ್ ಸಂಸ್ಥೆಗಳಲ್ಲಿನ ತಮ್ಮ ಎಲ್ಲಾ ಷೇರುಗಳನ್ನು ಇದಕ್ಕೆ ವರ್ಗಾಯಿಸಿದರು. ಈ ಸಮೂಹದ 44 ಕಾರ್ಯನಿರ್ವಾಹಕ ಅಧಿಕಾರಿಗಳು

ಈ ಟ್ರಸ್ಟ್‌ನಿಂದ ನಿವೃತ್ತರಾದಾಗ ಕೋಟಿ ಕೋಟಿ ಹಣ ಪಡೆಯಲು ಫಲಾನುಭವಿಗಳಾಗಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version