Mangaluru (ಆ.14): ಬೆಳ್ತಂಗಡಿ (Belthangadi Nursing student heartattack) ತಾಲೂಕಿನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು (Nursing student) ಅನಾರೋಗ್ಯದ ಕಾರಣ
ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಸಂದರ್ಭದಲ್ಲಿ ಲೋ ಬಿಪಿ(Low BP) ಉಂಟಾಗಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ.ಹೀಗೆ ಮೃತ ಪಟ್ಟ ಯುವತಿಯು ದ.ಕ ಜಿಲ್ಲೆಯ ಬೆಳ್ತಂಗಡಿ
ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಜಾತಿಮಾರು ನಿವಾಸಿಯಾಗಿದ್ದಾರೆ ಮತ್ತು ರಾಜು ದೇವಾಡಿಗ (Raju Devadiga) ಮತ್ತು ಸರೋಜ (Saroja) ದಂಪತಿಗಳ ಪುತ್ರಿ ಸುಮಾ (19) ಎಂದು ತಿಳಿದುಬಂದಿದೆ.

ಸುಮಾ(Suma) ಇವರು ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸವನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ (AJ Hospital) ಮಾಡುತ್ತಿದ್ದರು.ಇವರು ಆಗಸ್ಟ್ 9 ರಂದು ಅನಾರೋಗ್ಯದ
ಕಾರಣದಿಂದ ಅಲ್ಲಿರುವ ಸ್ಥಳೀಯ ಆಸ್ಪತ್ರೆಗೆ ತೆರಳಿ ಔಷಧಿಗಳನ್ನು ಪಡೆದು ನಂತರ ಮನೆಗೆ ತೆರಳಿದ್ದಳು.ಇದಾದ ನಂತರ ಆಗಸ್ಟ್ 11 ರಂದು ಮತ್ತೆ ಅನಾರೋಗ್ಯ ಜಾಸ್ತಿಯಾಗಿತ್ತು ಈ ಕಾರಣದಿಂದ
ಚಿಕಿತ್ಸೆಗೆಂದು ಮಂಗಳೂರು (Belthangadi Nursing student heartattack) ಆಸ್ಪತ್ರೆಗೆ ಹೋಗಿದ್ದಾರೆ ಅಲ್ಲಿ ಅವರು ಗುಣಮುಖರಾದರು.
ಇದನ್ನೂ ಓದಿ : ಹೃದಯಾಘಾತಕ್ಕೆ ಕಾರಣವಾಗುವ ಈ ಲೋ ಬಿಪಿ ಆಗಲು ಕಾರಣಗಳೇನು ಗೊತ್ತಾ? ಹೇಗಿರುತ್ತವೆ ಲಕ್ಷಣಗಳು?? ಚಿಕಿತ್ಸೆ ಏನು.. ಇಲ್ಲಿದೆ ಮಾಹಿತಿ
ಆದರೆ ಆಗಸ್ಟ್ 13 ಭಾನುವಾರದಂದು ಸಂಜೆ ಇವರು ಮತ್ತೆ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಇವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ ಆದರೆ ದಾರಿ ಮಧ್ಯದಲ್ಲಿ ಲೋ ಬಿಪಿ (Low BP) ಉಂಟಾಗಿ
ತಕ್ಷಣವೇ ಹೃದಯಾಘಾತ (Heart attack)ದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಹೃದಯಾಘಾತ!
ಕಳೆದೆರಡು ವರ್ಷಗಳಲ್ಲಿ ಸಣ್ಣ ವಯಸ್ಸಿನವರೇ ದ.ಕ (Dakshina kannada) ಜಿಲ್ಲೆಯಲ್ಲಿ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ ಹೃದಯಾಘಾತಕ್ಕೆ ಬಲಿಯಾದ ಸಣ್ಣ ವಯಸ್ಸಿನವರ ಮಾಹಿತಿ
ಶ್ರೇಯಾ ಪಕ್ಕಳ
ವಯಸ್ಸು : 16
ಮೃತಪಟ್ಟ ದಿನಾಂಕ- ಮಾರ್ಚ್ 23,2021
ಶಿಕ್ಷಣ- ಪ್ರಥಮ ಪಿಯುಸಿ(ವಿಜ್ಞಾನ ವಿಭಾಗ)
ವಿಳಾಸ :ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಗ್ರಾಮಕಾಲೇಜು: ವಿವೇಕಾನಂದ ಕಾಲೇಜು ಪುತ್ತೂರು.
ದಿಢೀರ್ ಆಗಿ ಅಸ್ವಸ್ಥಗೊಂಡು ಸಾವು, ಆಸ್ಪತ್ರೆಗೆ ದಾಖಲಿಸಿದ ಸದರ್ಭದಲ್ಲಿ ಗೊತ್ತಾಗಿತ್ತು ಹೃದಯಾಘಾತವಾದ ಬಗ್ಗೆ ಮಾಹಿತಿ
ಇದನ್ನೂ ಓದಿ : ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗುವುದು : ಆಹಾರ ಮತ್ತು ನಾಗರಿಕ ಸಚಿವ ಕೆಎಚ್ ಮುನಿಯಪ್ಪ ಘೋಷಣೆ
ಮೋಕ್ಷಿತ್
ವಯಸ್ಸು : 7
ಮೃತಪಟ್ಟ ದಿನಾಂಕ- ನವೆಂಬರ್ 01, 2022
ಶಿಕ್ಷಣ: ಎರಡನೇ ತರಗತಿ
ವಿಳಾಸ: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕುಂಟಿಕಾನ
ಬಾಲಕ ಜ್ವರದಿಂದ ಕುಸಿದು ಬಿದ್ದು ಸಾವು. ಆಸ್ಪತ್ರೆಯಲ್ಲಿ ವೈದ್ಯರಿಂದ ಹೃದಯಾಘಾತದಿಂದ ಸಾವು ಸಂಭವಿಸಿದ ಬಗ್ಗೆ ಮಾಹಿತಿ
ಅನ್ವಿತಾ ಹೆಗ್ಡೆ
ವಯಸ್ಸು : 14
ಮೃತಪಟ್ಟ ದಿನಾಂಕ: ಮೇ.17, 2022
ಶಿಕ್ಷಣ- 9ನೇ ತರಗತಿ
ವಿಳಾಸ: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ
ತಡರಾತ್ರಿ ಎದೆನೋವು ಕಾಣಿಸಿಕೊಂಡು ಹೃದಯಾಘಾತ
ಈ ಮೊದಲು ಯಾವುದೇ ಎದೆ ಸಂಬಂಧಿ ಖಾಯಿಲೆ ಇರಲಿಲ್ಲ.
ಸಚಿನ್
ವಯಸ್ಸು : 17
ಮೃತಪಟ್ಟ ದಿನಾಂಕ: ಅಗಸ್ಟ್ 09, 2022
ಶಿಕ್ಷಣ- ದ್ವಿತೀಯ ಪಿಯುಸಿ(ಕಲಾ ವಿಭಾಗ)
ವಿಳಾಸ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ
ಎದೆನೋವು ಕಾಣಿಸಿಕೊಂಡು ಹೃದಯಾಘಾತ
ನಾಗೇಶ್
ವಯಸ್ಸು : 23
ಮೃತಪಟ್ಟ ದಿನಾಂಕ: ಫೆಬ್ರವರಿ 14, 2022
ವಿಳಾಸ: ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ
ರಾತ್ರಿ ಮಲಗಿದ್ದ ವೇಳೆಯಲ್ಲಿ ಹೃದಯಾಘಾತ
ಮಹಮ್ಮದ್ ಹಸೀಮ್
ವಯಸ್ಸು : 17
ಮೃತಪಟ್ಟ ದಿನಾಂಕ: ಜನವರಿ 10, 2023
ವಿಳಾಸ: ಮಂಗಳೂರು ಹೊರವಲಯದ ಸುರತ್ಕಲ್
ಹಸೀಮ್ ಶಾಲೆಗೆ ಹೋಗಲು ಸಿದ್ದವಾಗಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಸಾವು.
ಇದನ್ನೂ ಓದಿ : ಮಳೆ ಬೆಳೆ ಹಾನಿಗೆ ಸರ್ಕಾರದಿಂದ 28,000 ಪರಿಹಾರ, ಇದನ್ನು ಪಡೆಯೋದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ
ಲೈಲಾ ಆಫಿಯಾ
ವಯಸ್ಸು : 23
ಮೃತಪಟ್ಟ ದಿನಾಂಕ: ಮಾರ್ಚ್ 01, 2023
ವಿಳಾಸ: ಮಂಗಳೂರಿನ ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ
ಮದುವೆಯಾದ ಮೊದಲ ದಿನದಂದೇ ಹೃದಯಾಘಾತದಿಂದ ನಿಧನ.
ಸಾಲಿಯತ್
ವಯಸ್ಸು : 24
ಮೃತಪಟ್ಟ ದಿನಾಂಕ: ಮೇ.31, 2023
ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ್ತಿ
ವಿಳಾಸ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಪೊಯ್ಯೇಗುಡ್ಡೆ
ಹೃದಯಾಘಾತದಿಂದ ನಿಧನ
ರಶ್ಮಿತಾ ಅನೀಶ್