ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳಗೆ ಚಿತ್ರದುರ್ಗ ಟಿಕೆಟ್ ; ಬಿಜೆಪಿ ಭಾರೀ ಲೆಕ್ಕಾಚಾರ

Bengaluru: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಗೋವಿಂದ್ ಕಾರಜೋಳ (Ticket by BJP – Govind Karjol) ಅವರಿಗೆ ಬಿಜೆಪಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್

ನೀಡಿದೆ. ಈ ಮೂಲಕ ಮೀಸಲು ಕ್ಷೇತ್ರದಲ್ಲಿ ಭಾರೀ ಜಾತಿ ಲೆಕ್ಕಾಚಾರದ ರಣತಂತ್ರ ರೂಪಿಸಿದೆ. ಸಾಕಷ್ಟು ಕುತೂಹಲ ಕೆರಳಿದ್ದ ಈ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ಇದೀಗ ಕಾರಜೋಳ ಅವರನ್ನು ಕಣಕ್ಕಿಳಿಸಿದೆ.

ಇನ್ನು ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ನಾರಾಯಣಸ್ವಾಮಿ (Union Minister Narayanaswamy) ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ. ಈ ಹಿಂದೆಯೇ ನಾರಾಯಣಸ್ವಾಮಿ ಅವರು

ರಾಜಕೀಯದಿಂದ ನಿವೃತ್ತಿಯಾಗುವ ಮಾತುಗಳನ್ನಾಡಿದ್ದರು. ಜೊತೆಗೆ ಕ್ಷೇತ್ರದಲ್ಲಿ ಅವರ ವಿರುದ್ದ ವಿರೋಧಿ ಅಲೆ ಕಂಡುಬಂದಿತ್ತು. ಹೀಗಾಗಿ ಬಿಜೆಪಿ ಹೈಕಮಾಂಡ್ ದಲಿತ ಎಡಗೈ ಸಮುದಾಯಕ್ಕೆ ಸೇರಿರುವ

ಗೋವಿಂದ್ ಕಾರಜೋಳ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಚಿತ್ರದುರ್ಗ ಕ್ಷೇತ್ರಕ್ಕೆ (Ticket by BJP – Govind Karjol) ಮತ್ತೆ ಹೊಸ ಮುಖವನ್ನೇ ಪರಿಚಯಿಸಿದೆ.

ಇನ್ನೊಂದೆಡೆ ಕಾಂಗ್ರೆಸ್ ಮಾಜಿ ಸಂಸದ ಚಂದ್ರಪ್ಪ (Former Congress MP Chandrappa) ಅವರನ್ನು ಈ ಬಾರಿಯೂ ಕಣಕ್ಕೆ ಇಳಿಸಿದೆ.

ಬಿಜೆಪಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಪ್ರಕಟಿಸುವ ಮೂಲಕ ಕರ್ನಾಟಕದ ತನ್ನ ಪಾಲಿನ ಎಲ್ಲಾ 25 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ. ಹಾಸನ, ಮಂಡ್ಯ, ಕೋಲಾರ

ಕ್ಷೇತ್ರವನ್ನು ಮೈತ್ರಿ ಪಕ್ಷವಾಗಿರುವ ಜೆಡಿಎಸ್ಗೆ (JDS) ನೀಡಿದೆ. ಮಂಡ್ಯದಿಂದ ಎಚ್.ಡಿ. ಕುಮಾರಸ್ವಾಮಿ (H D Kumarswamy), ಹಾಸನದಿಂದ ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಕೋಲಾರದಿಂದ

ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ (Nisarga Narayanaswami) ಕಣಕ್ಕಿಳಿಯುವುದು ಖಚಿತವಾಗಿದೆ.

ಗೋವಿಂದ್ ಕಾರಜೋಳಗೆ ಟಿಕೆಟ್ ನೀಡಿದ್ದು ಯಾಕೆ?
ಚಿತ್ರದುರ್ಗ ಲೋಕಸಭಾ ಕ್ಷೇತ್ರದ (Chitradurga Lok Sabha Constituency) ಟಿಕೆಟ್ಗಾಗಿ ದಲಿತ ಎಡಗೈ ಮತ್ತು ಭೋವಿ ದಲಿತ ಸಮುದಾಯಗಳ ಮಧ್ಯೆ ಭಾರೀ ಪೈಪೋಟಿ ಇತ್ತು. ಕೊನೆಗೆ ಹೆಚ್ಚಿನ

ಮತಗಳನ್ನು ಹೊಂದಿರುವ ದಲಿತ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಅದೇ ಸಮುದಾಯದ ಗೋವಿಂದ ಕಾರಜೋಳಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ದು, ಜಾತಿ ಅಸ್ತ್ರವನ್ನು ಪ್ರಯೋಗಿಸಿದೆ.

ಇನ್ನು ಮಾಜಿ ಸಂಸದ ಜೆ ಜನಾರ್ದನ ಸ್ವಾಮಿ ಪರ ಸಂಘ ಪರಿವಾರ ಟಿಕೆಟ್ಗಾಗಿ ಲಾಬಿ ನಡೆಸಿತ್ತು.

ಇದನ್ನು ಓದಿ: BBMP Property Tax: ಬೆಂಗಳೂರಿಗರ ಟೆನ್ಶನ್ ದೂರ ಮಾಡಿದ ಡಿ.ಕೆ ಶಿವಕುಮಾರ್

Exit mobile version